ಕುಡುಕರ ಹಾಟ್‍ಸ್ಪಾಟ್ ಆದ ಯಾದಗಿರಿ ಸಾರ್ವಜನಿಕ ಉದ್ಯಾನವನ

Public TV
1 Min Read

ಯಾದಗಿರಿ: ಕುಡುಕರ ಹಾವಳಿಯಿಂದಾಗಿ ಯಾದಗಿರಿ (Yadagiri) ನಗರದ ಉದ್ಯಾನವನಗಳು ಅದ್ವಾನಗೊಂಡಿವೆ. ನಗರದ ಹೊಸಳ್ಳಿ ಕ್ರಾಸ್‍ನ ನಜರತ್ ಕಾಲೋನಿಯ ಉದ್ಯಾನವನ ಮದ್ಯಪ್ರಿಯರ ಅಡ್ಡೆಯಾಗಿ ಮಾರ್ಪಟ್ಟಿದೆ.

ರಾತ್ರಿ ವೇಳೆ ಕುಡುಕರು ಮದ್ಯ ಕುಡಿದು ಬಾಟ್ಲಿ ಹಾಗೂ ಪ್ಲಾಸ್ಟಿಕ್ ಗಳನ್ನು ಗಾರ್ಡನ್ ಏರಿಯಾದಲ್ಲಿ ಎಲ್ಲೆಂದರಲ್ಲಿ ಬಿಸಾಡುತ್ತಿದ್ದಾರೆ. ಈ ಪಾರ್ಕ್ ಕುಡುಕರ ಅಡ್ಡೆಯಾಗುತ್ತಿದ್ರು ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ. ಉದ್ಯಾನವನ ಗಾರ್ಡನ್ ಬಳಿ ಕುಳಿತು ಮದ್ಯೆ ಸೇವಿಸಿ ಎಲ್ಲೆಂದರಲ್ಲಿ ಬಾಟ್ಲಿಗಳನ್ನ ಬಿಸಾಕಿ ಹೋಗುತ್ತಿದ್ದಾರೆ.

ಜನನಿಬಿಡ ಪ್ರದೇಶದಲ್ಲಿ ಗಾರ್ಡನ್ (Guarden) ಇದ್ರೂ, ಕುಡುಕರ ಹಾವಳಿಗೆ ಬೇಸತ್ತು, ಸಾರ್ವಜನಿಕರು ವ್ಯಾಯಾಮ ಮಾಡಲು ಹಿಂದೆ ಮುಂದೆ ನೋಡುವಂತಾಗಿದೆ. ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಇದೇ ಗಾರ್ಡನ್ ನಲ್ಲಿ ಕುಳಿತು ಊಟ ಮಾಡಲು ಬರುತ್ತಾರೆ. ಇದು ಮಕ್ಕಳಿಗೂ ಭಾರೀ ಮುಜುಗರವನ್ನುಂಟು ಮಾಡ್ತಿದೆ. ಪೊಲೀಸ್ ಹಾಗೂ ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದ್ರೂ ಯಾವುದೇ ಪ್ರಯೋಜನ ಆಗ್ತಿಲ್ಲ. ಹೀಗಾಗಿ ಸಾರ್ವಜನಿಕರು ರೋಸಿ ಹೋಗಿದ್ದು, ಈ ಕಡೆ ಮುಖವನ್ನೂ ಮಾಡ್ತಿಲ್ಲ. ಇದನ್ನೂ ಓದಿ: ತನ್ವೀರ್ ಪೀರಾ ಸಂಬಂಧಿ ಜೊತೆ ಯತ್ನಾಳ್ ವ್ಯವಹಾರ – ದಾಖಲೆ ಬಿಡುಗಡೆ

Share This Article