ಕುಮಾರಸ್ವಾಮಿ ಬ್ರದರ್, ಬ್ರದರ್‌ ಅಂತ ಕತ್ತು ಕೊಯ್ಯೋದು: ಜಮೀರ್ ಅಹ್ಮದ್

Public TV
2 Min Read

– ನಾನು ಕುಮಾರಸ್ವಾಮಿಗಾಗಿ ಬಸ್ ಡ್ರೈವರ್ ಆಗಿದ್ದೆ
– ಕುಮಾರಸ್ವಾಮಿ ಲಾಭ ಇಲ್ಲದೇ ಯಾವುದೇ ಕೆಲಸ ಮಾಡಲ್ಲ
– ಎಚ್‌ಡಿಕೆ  ಹಣಕ್ಕಾಗಿ ಅಲ್ಪಸಂಖ್ಯಾತರನ್ನು ಬಲಿ ಕೊಡುತ್ತಾರೆ

ವಿಜಯಪುರ: ಉಪಚುನಾವಣೆ ಅಖಾಡದ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಿರುವಾಗ ಪಕ್ಷದ ನಾಯಕರೆಲ್ಲ ಒಬ್ಬರ ವಿರುದ್ಧ ಇನ್ನೊಬ್ಬರು ಆರೋಪವನ್ನು ಮಾಡುತ್ತಿದ್ದಾರೆ. ಇಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಸಿಂದಗಿ ಪಟ್ಟಣದಲ್ಲಿ ಶಾಸಕ ಜಮೀರ್ ಅಹ್ಮದ್ ಕಿಡಿಕಾರಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸೂಟ್‌ಕೇಸ್ ತಗೊಂಡು ಅಭ್ಯರ್ಥಿ ಹಾಕಿದ್ದಾರೆ. ಬಸವಕಲ್ಯಾಣದಲ್ಲಿ ಹತ್ತು ಕೋಟಿ ತಗೊಂಡು ಅಲ್ಪಸಂಖ್ಯಾತ ಅಭ್ಯರ್ಥಿ ಹಾಕಿದ್ದರು. ಜೆಡಿಎಸ್ ಸೂಟ್‌ಕೇಸ್ ರಾಜಕಾರಣ ಮಾಡುತ್ತಿದೆ. ಉಪ ಚುನಾವಣೆಯಲ್ಲಿ ಜೆಡಿಎಸ್ ಅಲ್ಪಸಂಖ್ಯಾತ ಅಭ್ಯರ್ಥಿ ಹಾಕುತ್ತಿದೆ. 2005ರಲ್ಲಿ ನನ್ನ ಸೋಲಿಸಲು ಕೈ ಅಲ್ಪಸಂಖ್ಯಾತ ಅಭ್ಯರ್ಥಿ ಹಾಕಿರಲಿಲ್ಲ. ದೇವೇಗೌಡರ ಋಣ ನನ್ನ ಮೇಲಿದೆ. ದೇವೇಗೌಡರಿಂದ ಶಾಸಕನಾಗಿದ್ದೇನೆಯೇ ವಿನಃ ಕುಮಾರಸ್ವಾಮಿಯಿಂದ ಅಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: 14 ವರ್ಷದ ಬಳಿಕ ಬೆಂಕಿಪೊಟ್ಟಣದ ಬೆಲೆ ಏರಿಕೆ

ನಾನು ಬಸ್ ಮಾಲೀಕನಾಗಿದ್ದೆ. ಕುಮಾರಸ್ವಾಮಿಯನ್ನು ಸಾಕಿದ್ದೇ ನಾನು. ನನ್ನ ತಾತನ ಜಮಾನದಿಂದ ಬಸ್ ಇದೆ. ನಿಮ್ಮ ಹಾಗೆ ನಾನು ಬಿಬಿಎಂಪಿಯಲ್ಲಿ ಸ್ಕೂಟರ್ ಇಟ್ಟುಕೊಂಡು ಕಸಗುಡಿಸುತ್ತಿರಲಿಲ್ಲ. ಕುಮಾರಸ್ವಾಮಿ ಬಗ್ಗೆ ಬಿಚ್ಚಿ ಹೇಳಬೇಕಾಗುತ್ತದೆ. ನಾನು ಸುಮ್ನೆ ಕೂರೋ ಮಗ ಅಲ್ಲಾ. ನನ್ನ ತಂಟೆಗೆ ಬಂದರೆ ಎಲ್ಲಾ ಬಿಚ್ಚಿಡಬೇಕಾಗುತ್ತದೆ. ನಮ್ಮ ನಾಯಕ ಸಿದ್ದರಾಮಯ್ಯ ಹುಲಿ ಇದ್ದಂಗೆ, ಕುಮಾರಸ್ವಾಮಿ ಬ್ರದರ್ ಬ್ರದರ್ ಅಂತ ಕತ್ತು ಕೊಯ್ಯುತ್ತಾನೆ. ನಾನು ಎಲ್ಲಾ ಚರ್ಚೆಗೆ ಸಿದ್ಧ, ಬೇಕಾದರೆ ಕುಮಾರಸ್ವಾಮಿ ಚರ್ಚೆಗೆ ಬರಲಿ ಎಂದು ಎಚ್.ಡಿ ಕುಮಾರಸ್ವಾಮಿಗೆ ಸವಾಲು ಹಾಕಿದ್ದಾರೆ. ಇದನ್ನೂ ಓದಿ:   ಮಕ್ಕಳ ಜೊತೆ ಶಿಲ್ಪಾ ಶೆಟ್ಟಿ ಸುತ್ತಾಟ- ರಾಜ್ ಕುಂದ್ರಾ ಮಿಸ್ಸಿಂಗ್

2004ರಲ್ಲಿ ಕುಮಾರಸ್ವಾಮಿ ಅದಾಯ ನಿಲ್ ಇತ್ತು. 2008 ರಲ್ಲಿ 360 ಕೋಟಿ ರೂಪಾಯಿ ಆದಾಯ ಕುಮಾರಸ್ವಾಮಿ ತೋರಿಸಿದ್ದಾರೆ. ಇಷ್ಟೊಂದು ಆದಾಯ ಕುಮಾರಸ್ವಾಮಿ ಅವರಿಗೆ ಎಲ್ಲಿಂದ ಬಂತು? ನಾನು ಮನೆ ಕಟ್ಟಿರೋದು ಕೂಡಾ ಅವರಿಗೆ ಸಹಿಸಲು ಆಗಲಿಲ್ಲ. ನಾನು ಕುಮಾರಸ್ವಾಮಿಗಾಗಿ ಬಸ್ ಡ್ರೈವರ್ ಆಗಿದ್ದೆ. ಕುಮಾರಸ್ವಾಮಿ ಯಾರು ಬೆಳೆಯೋದನ್ನು ಸಹಿಸಲ್ಲ. ಅಲ್ಪಸಂಖ್ಯಾತರು ಮಾತ್ರವಲ್ಲ, ಒಕ್ಕಲಿಗರು ಕೂಡಾ ಬೆಳೆಯೋದನ್ನು ಸಹಿಸಲ್ಲ. ಜೆಡಿಎಸ್, ಬಿಜೆಪಿ ಜೊತೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ. ಕುಮಾರಸ್ವಾಮಿ ಲಾಭ ಇಲ್ಲದೇ ಯಾವುದೇ ಕೆಲಸ ಮಾಡಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ. ಇದನ್ನೂ ಓದಿ: ಠಾಣೆ ಮೆಟ್ಟಿಲೇರಿದ ಕಸ ಫೈಟ್ – ಪ್ರೊಡ್ಯೂಸರ್ ಪುತ್ರ, ಪತ್ನಿ ವಿರುದ್ಧ FIR

ಅಲ್ಪಸಂಖ್ಯಾತ ನಾಯಕರನ್ನು ಮುಗಿಸಿದ್ದು ಸಿದ್ದರಾಮಯ್ಯ ಅಲ್ಲ, ಕುಮಾರಸ್ವಾಮಿ. ಹಣಕ್ಕಾಗಿ ಅಲ್ಪಸಂಖ್ಯಾತರನ್ನು ಬಲಿ ಕೊಡುತ್ತಾರೆ. ಆರ್‌ಎಸ್‍ಎಸ್ ವಿರುದ್ಧ ಕುಮಾರಸ್ವಾಮಿ ಟೀಕೆ ಮಾಡುತ್ತಿರುವುದು
ಮುಸ್ಲಿಂ ಮತಕ್ಕಾಗಿ ವಿನಃ ಬೇರೆ ಉದ್ದೇಶ ಅಲ್ಲ. ನನ್ನ ಹಣೆಬರಹ ಬರೆದಿದ್ದು ದೇವರೇ ವಿನಃ ಕುಮಾರಸ್ವಾಮಿ ಅಲ್ಲ. ದೇವೇಗೌಡರು ಇನ್ನೂರರಷ್ಟು ಜ್ಯಾತ್ಯತೀತ ವ್ಯಕ್ತಿಯಾಗಿದ್ದಾರೆ. ಆದರೆ ಕುಮಾರಸ್ವಾಮಿ ಇಲ್ಲ ಕುಮಾರಸ್ವಾಮಿ ಆರ್‌ಎಸ್‍ಎಸ್‍ಚಡ್ಡಿ ಹಾಕಿರಬಹುದು ಎಂದು ಎಚ್‍ಡಿಕೆ ವಿರುದ್ಧವಾಗಿ ಕಿಡಿಕಾರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *