ಕ್ಸಿಯೋಮಿಯಿಂದ 6 ಜಿಬಿ ರಾಮ್, ಡ್ಯುಯಲ್ ಸಿಮ್ ಫೋನ್ ಬಿಡುಗಡೆ: ಬೆಲೆ ಎಷ್ಟು? ವಿಶೇಷತೆ ಏನು?

Public TV
2 Min Read

ಬೀಜಿಂಗ್: ಕ್ಸಿಯೋಮಿ ಕಂಪೆನಿ ಡ್ಯುಯಲ್ ಸಿಮ್ 6ಜಿಬಿ ರಾಮ್ ಹೊಂದಿರುವ ಎಂಐ 6 ಫೋನನ್ನು ಬಿಡುಗಡೆ ಮಾಡಿದೆ.

ಸದ್ಯಕ್ಕೆ ಈ ಫೋನ್ ಎರಡು ಆಂತರಿಕ ಮೆಮೊರಿಯಲ್ಲಿ ಚೀನಾದಲ್ಲಿ ಬಿಡುಗಡೆಯಾಗಿದೆ. 6ಜಿ ರಾಮ್ 64 ಜಿಬಿ ಆಂತರಿಕ ಮೆಮೊರಿಯ ಫೋನಿಗೆ 2499 ಯುವಾನ್(ಅಂದಾಜು 24,000 ರೂ.) 6ಜಿಬಿ ರಾಮ್ 128 ಜಿಬಿ ಆಂತರಿಕ ಮೆಮೊರಿಯ ಫೋನಿಗೆ 2899 ಯುವಾನ್(27,000 ರೂ.) ರೂ. ನಿಗದಿ ಮಾಡಿದೆ.

ಸ್ಯಾಮ್‍ಸಂಗ್ ಗೆಲಾಕ್ಸಿ ಎಸ್8ರ ಬಳಿಕ ಸ್ನಾಪ್ ಡ್ರಾಗನ್ 835 ಅಕ್ಟಾ ಕೋರ್ ಪ್ರೊಸೆಸರ್‍ನಲ್ಲಿ ರನ್ ಆಗುತ್ತಿರುವ ಎರಡನೇ ಫೋನ್ ಇದಾಗಿದೆ. ಹಿಂದುಗಡೆ 2 ಕ್ಯಾಮೆರಾ ಹೊಂದಿದ್ದು, 12 ಎಂಪಿ ವೈಡ್ ಆಂಗಲ್ ಲೆನ್ಸ್, 12 ಎಂಪಿ ಟೆಲಿಫೋಟೋ ಲೆನ್ಸನ್ನು ಕ್ಸಿಯೋಮಿ ನೀಡಿದೆ.

ಫೋನ್ ಮೇಲೆ ನೀರು ಎಷ್ಟೇ ಬಿದ್ದರೂ ಅದು ಫೋನಿನ ಒಳಗಡೆ ಹೋಗದೇ ಇರಲು ಸ್ಪ್ಲಾಶ್ ರೆಸಿಸ್ಟೆಂಟ್ ವಿಶೇಷತೆಯನ್ನೂ ನೀಡಿದೆ. ಮುಂದುಗಡೆ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಹೊಂದಿದೆ.

ಕ್ಸಿಯೋಮಿ ವಿಶೇಷವಾಗಿ ಸೆರಾಮಿಕ್ ವರ್ಶನ್ ಬಿಡುಗಡೆ ಮಾಡಿದೆ. ಈ ಫೋನಿನ ನಾಲ್ಕು ಬದಿಗಳಲ್ಲೂ ಕರ್ವ್ ಸೆರಾಮಿಕ್ ಬಾಡಿ ಹೊಂದಿರುವುದು ಇದರ ವಿಶೇಷತೆ. ಈ ಫೋನಿಗೆ 2999 ಯುವಾನ್(ಅಂದಾಜು 28,000 ರೂ.) ನಿಗದಿ ಮಾಡಿದೆ.

ಇಷ್ಟೇ ಅಲ್ಲದೇ 3ಡಿ ಸಿಲ್ವರ್ ಎಡಿಶನ್ ಫೋನ್ ಬಗ್ಗೆ ತಿಳಿಸಿದ್ದು, ಈ ಫೋನ್ 4 ಬದಿಗಳಲ್ಲೂ ಕರ್ವ್ ಗ್ಲಾಸ್ ದೇಹವನ್ನು ಹೊಂದಿರಲಿದೆ ಎಂದು ತಿಳಿಸಿದೆ.

ಕ್ಸಿಯೋಮಿಯ ಡ್ಯುಯಲ್ ಸಿಮ್ ಸೆಟ್‍ಗಳು ಹೆಚ್ಚಾಗಿ ಹೈ ಬ್ರಿಡ್ ಸಿಮ್ ಸ್ಲಾಟ್‍ಗಳನ್ನು ಒಳಗೊಂಡಿರುತ್ತದೆ. ಆದರೆ ಈ ಫೋನ್ ಕಾರ್ಡ್ ಹಾಕಲು ಅವಕಾಶವಿಲ್ಲ. ಈ ಕಾರಣಕ್ಕಾಗಿ ಐಫೋನ್ ನಲ್ಲಿ ಇರುವಂತೆ 64 ಜಿಬಿ, 128 ಜಿಬಿ ಆಂತರಿಕ ಮೆಮೊರಿಯನ್ನು ಕ್ಸಿಯೋಮೀ ನೀಡಿದೆ. ಹೀಗಾಗಿ ಸಿಮ್ ಸ್ಲಾಟ್‍ನಲ್ಲಿ 1 ಮೈಕ್ರೋ ಸಿಮ್ ಮತ್ತು ಒಂದು ನ್ಯಾನೋ ಸಿಮ್ ಹಾಕಬಹುದು.

ಎಂಐ6 ಗುಣವೈಶಿಷ್ಟ್ಯಗಳು
ದೇಹ ಮತ್ತು ಡಿಸ್ಲ್ಪೇ:
145.2*70.5*7.5 ಮಿ.ಮೀ ಗಾತ್ರ, 168 ಗ್ರಾಂ ತೂಕ, ಡ್ಯುಯಲ್ ಸಿಮ್, ಐಪಿಎಸ್ ಎಲ್‍ಸಿಡಿ ಸ್ಕ್ರೀನ್(1080*1920 ಪಿಕ್ಸೆಲ್, 428 ಪಿಪಿಐ)

ಪ್ಲಾಟ್‍ಫಾರಂ ಮತ್ತು ಮೆಮೊರಿ:
ಆಂಡ್ರಾಯ್ಡ್ 7.1.1 ನೂಗಟ್ ಓಎಸ್, ಕ್ವಾಲಕಂ ಸ್ನಾಪ್‍ಡ್ರಾಗನ್ 835 ಅಕ್ಟಾಕೋರ್ ಪ್ರೊಸೆಸರ್, ಮೆಮೊರಿ ವಿಸ್ತರಿಸಲು ಕಾರ್ಡ್ ಸ್ಲಾಟ್ ಇಲ್ಲ, 6ಜಿಬಿ ರಾಮ್ 64 ಜಿಬಿ ಅಥವಾ 128 ಜಿಬಿ ಆಂತರಿಕ ಮೆಮೊರಿ

ಇತರೇ:
12 ಎಂಪಿ ಹಿಂದುಗಡೆ ಕ್ಯಾಮೆರಾ, 8 ಎಂಪಿ ಮುಂದುಗಡೆ ಕ್ಯಾಮೆರಾ, ಫಾಸ್ಟ್ ಬ್ಯಾಟರಿ ಚಾರ್ಜಿಂಗ್( ಕ್ವಿಕ್ ಚಾರ್ಜ್ 3.0) ತೆಗೆಯಲು ಅಸಾಧ್ಯವಾದ ಲಿಪೋ 3350 ಎಂಎಎಚ್ ಬ್ಯಾಟರಿ

ಇದನ್ನೂ ಓದಿ: ಭಾರತದಲ್ಲಿ ಸ್ಯಾಮ್‍ಸಂಗ್ ಸೋಲಿಸಿ ಅಗ್ರಪಟ್ಟಕ್ಕೆ ಏರಿದ ಕ್ಸಿಯೋಮಿ: ಯಾವ ಕಂಪೆನಿಗೆ ಎಷ್ಟನೇ ಸ್ಥಾನ?

Share This Article
Leave a Comment

Leave a Reply

Your email address will not be published. Required fields are marked *