ನವದೆಹಲಿ: ಸೋಷಿಯಲ್ ಮೀಡಿಯಾ ವೇದಿಕೆ ʻಎಕ್ಸ್ʼನಲ್ಲಿ (Social Media X) ಹರಡುತ್ತಿರುವ ಅಶ್ಲೀಲ ವಿಚಾರಗಳ ವಿರುದ್ಧ ಕೇಂದ್ರ ಸರ್ಕಾರ (Central Government) ಕಠಿಣ ಕ್ರಮ ಕೈಗೊಂಡಿದೆ.
ಸರ್ಕಾರದ ಸೂಚನೆ ಮೇರೆಗೆ 3,500 ಪೋಸ್ಟ್‌ಗಳನ್ನ ಎಲಾನ್ ಮಸ್ಕ್ (Elon Musk) ನೇತೃತ್ವದ ಎಕ್ಸ್ ಬ್ಲಾಕ್ ಮಾಡಿದೆ. ಇದರೊಂದಿಗೆ 600 ಬಳಕೆದಾರರ ಖಾತೆಗಳನ್ನೂ ಶಾಶ್ವತವಾಗಿ ರದ್ದುಗೊಳಿಸಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಬಾಹ್ಯಾಕಾಶದಲ್ಲಿ ಡೇಟಾ ಸೆಂಟರ್ – ಏನಿದು ಗೂಗಲ್‌ನ ಸನ್‌ಕ್ಯಾಚರ್ ಪ್ರಾಜೆಕ್ಟ್?
ಕಠಿಣ ಕ್ರಮ ಏಕೆ?
ಇತ್ತೀಚೆಗೆ ಎಕ್ಸ್‌ನ ಕೃತಕ ಬುದ್ಧಿಮತ್ತೆ (AI) ಸೇವೆ ʻಗ್ರೂಕ್ʼ ಮಹಿಳೆಯರನ್ನ ಗುರಿಯಾಗಿಸಿಕೊಂಡು ಅಶ್ಲೀಲ, ಅಸಭ್ಯ ಮತ್ತು ಲೈಂಗಿಕವಾಗಿ ಸ್ಪಷ್ಟವಾದ ವಿಷಯವನ್ನು ಹಂಚಿಕೊಳ್ಳಲು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬ ವರದಿಗಳ ಬಗ್ಗೆ ಸಚಿವಾಲಯ ತೀವ್ರ ಕಳವಳ ವ್ಯಕ್ತಪಡಿಸಿತ್ತು. ಮಹಿಳೆಯರ ನೈಜ ಚಿತ್ರಗಳನ್ನು ಬಳಸಿಕೊಂಡು, AI ಮೂಲಕ ಅಶ್ಲೀಲ ಅಥವಾ ವಿವಸ್ತ್ರಗೊಳಿಸಿದ (Nude) ಚಿತ್ರಗಳನ್ನು ಸೃಷ್ಟಿಸಿ ಹಂಚಿಕೊಳ್ಳಲಾಗುತ್ತಿದೆ. ಇದು ಮಹಿಳೆಯರ ಘನತೆಗೆ ಧಕ್ಕೆ ತರುವಂತಹ ಗಂಭೀರ ಅಪರಾಧವಾಗಿದೆ ಎಂದು ಸರ್ಕಾರ ಎಚ್ಚರಿಸಿತ್ತು. ಇದನ್ನೂ ಓದಿ: ಅಶ್ಲೀಲ ವಿಚಾರ ಪೋಸ್ಟ್‌ಗಳಿಗೆ ವೇದಿಕೆ – ಎಕ್ಸ್‌ಗೆ ಕೇಂದ್ರದಿಂದ ನೋಟಿಸ್
ಈ ಬೆನ್ನಲ್ಲೇ ಎಕ್ಸ್‌ಗೆ ನೋಟಿಸ್ ಜಾರಿ ಮಾಡಿದ್ದ ಸರ್ಕಾರ 72 ಗಂಟೆಗಳ ಒಳಗೆ ಕೈಗೊಂಡ ಕ್ರಮಗಳ ವರದಿ ಸಲ್ಲಿಸುವಂತೆ ಆದೇಶಿಸಿತ್ತು. ಜೊತೆಗೆ ʻಗ್ರೂಕ್ʼ ನಿಯಮ ಉಲ್ಲಂಘಿಸಿದವರನ್ನ ಸೇವೆಯಿಂದ ವಜಾಗೊಳಿಸಿ ಕಟ್ಟಿನಿಟ್ಟಿನ ಕ್ರಮ ಕೈಗೊಳ್ಳುವಂತೆ ಹೇಳಿತ್ತು. ಇಲ್ಲದಿದ್ದರೆ, ಐಟಿ ಕಾಯ್ದೆಯ ಸೆಕ್ಷನ್ 79 ರ ಅಡಿಯಲ್ಲಿ ಭಾರತದಲ್ಲಿ ಎಕ್ಸ್ ನಿಷೇಧಿಸುವ ಎಚ್ಚರಿಕೆ ನೀಡಿತ್ತು. ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 ಮತ್ತು ಐಟಿ ನಿಯಮಗಳು 2021 ರ ಅಡಿಯಲ್ಲಿ ಶಾಸನಬದ್ಧ ಬಾಧ್ಯತೆಗಳನ್ನು ಪಾಲಿಸಲು ವಿಫಲವಾಗಿದೆ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಿತ್ತು.
ಹೀಗಾಗಿ ಅಶ್ಲೀಲತೆ ಪ್ರಸಾರ ಮಾಡುವ ಪೋಸ್ಟ್ ಹಾಗೂ ಖಾತೆಗಳನ್ನ ಎಕ್ಸ್ ರದ್ದುಗೊಳಿಸಿದೆ. ಜೊತೆಗೆ ಇನ್ಮುಂದೆ ಅಂತಹ ವಿಷಯಗಳನ್ನ ಅನುಮತಿಸುವುದಿಲ್ಲ ಎಂದು ಸರ್ಕಾರಕ್ಕೆ ಭರವಸೆ ನೀಡಿರುವುದಾಗಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಭಾರತಕ್ಕೆ ಬಂತು ಸ್ಟಾರ್‌ಲಿಂಕ್ ಇಂಟರ್‌ನೆಟ್ – ತಿಂಗಳಿಗೆ 8,600 ರೂ. ಪ್ಯಾಕ್ ಬಿಡುಗಡೆ



