ಭಾರತದ 2 ಲಕ್ಷಕ್ಕೂ ಹೆಚ್ಚು ಎಕ್ಸ್ ಖಾತೆಗಳ ನಿಷೇಧ

Public TV
1 Min Read

ನವದೆಹಲಿ: ಎಲೋನ್ ಮಸ್ಕ್ (Elon Musk) ನೇತೃತ್ವದ ಎಕ್ಸ್ ಕಂಪನಿ ಒಂದು ತಿಂಗಳ ಅವಧಿಯಲ್ಲಿ ಭಾರತೀಯರ 212,627 ಖಾತೆಗಳನ್ನು ನಿಷೇಧಿಸಿದೆ.

ಸಾಮಾಜಿಕ ಜಾಲಾತಾಣದ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಎಕ್ಸ್ ಕಾರ್ಪ್ ಈ ನಿರ್ಧಾರ ಕೈಗೊಂಡಿದೆ. ನಿಷೇಧಿಸಲಾದ ಕೆಲವು ಖಾತೆಗಳಲ್ಲಿ ಮಕ್ಕಳ ಮೇಲಿನ ಲೈಂಗಿಕ ಶೋಷಣೆ ಮತ್ತು ನಗ್ನತೆಯನ್ನು ದೃಶ್ಯಗಳನ್ನು ಹಂಚಿಕೊಳ್ಳಲಾಗಿದೆ. ಸುಮಾರು 1,235 ಖಾತೆಗಳಲ್ಲಿ ಭಯೋತ್ಪಾದನೆಯನ್ನು ಉತ್ತೇಜಿಸುವ ವಿಚಾರಗಳನ್ನು ಹಂಚಿಕೊಳ್ಳಲಾಗಿತ್ತು ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಸುಪ್ರೀಂನಿಂದ ಸದ್ಯಕ್ಕಿಲ್ಲ ರಿಲೀಫ್ – ಏ.29 ರಂದು ಕೇಜ್ರಿವಾಲ್ ಅರ್ಜಿ ವಿಚಾರಣೆ

ಮಕ್ಕಳ ಮೇಲಿನ ಲೈಂಗಿಕ ಶೋಷಣೆ ಮತ್ತು ಭಯೋತ್ಪಾದನೆಯನ್ನು ತಗ್ಗಿಸಲು ಎಕ್ಸ್ ಹಲವಾರು ಕ್ರಮಗಳನ್ನು ಜಾರಿಗೆ ತಂದಿದೆ. ಈ ನಿಟ್ಟಿನಲ್ಲಿ ತನ್ನ ಮಾಸಿಕ ವರದಿಯಲ್ಲಿ, ಭಾರತದಲ್ಲಿನ ಬಳಕೆದಾರರಿಂದ 5,158 ದೂರುಗಳನ್ನು ಸ್ವೀಕರಿಸಿದೆ. ವಂಚನೆ 3,074, ಸೂಕ್ಷ್ಮ ಮತ್ತು ವಯಸ್ಕ ವಿಷಯಗಳು 953, ದ್ವೇಷಪೂರಿತ ಮಾಹಿತಿ 412, ಮತ್ತು ನಿಂದನೆ ಹಾಗೂ ಕಿರುಕುಳದ 359 ದೂರುಗಳನ್ನು ಸ್ವೀಕರಿಸಲಾಗಿದೆ ಎಂದು ಎಕ್ಸ್ ಕಂಪನಿ ಹೇಳಿಕೊಂಡಿದೆ.

ಸ್ವೀಕರಿಸಿದ ದೂರುಗಳ ಆಧಾರದ ಮೇಲೆ, ಆಪಾದಿತ ಎಕ್ಸ್ ಖಾತೆಗಳ ಮೆಲೆ ಕ್ರಮ ಜರುಗಿಸಲಾಗಿದೆ. ಅಲ್ಲದೇ ಇನ್ನು ಕೆಲವು ಖಾತೆಗಳನ್ನು ಪರಿಶೀಲನೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವುದಾಗಿ ಎಕ್ಸ್ ಕಂಪನಿ ತಿಳಿಸಿದೆ. ಇದನ್ನೂ ಓದಿ: ರಾಗಾ ಹೆಲಿಕಾಪ್ಟರ್‌ ತಪಾಸಣೆ ನಡೆಸಿದ ಫ್ಲೈಯಿಂಗ್‌ ಸ್ಕ್ವಾಡ್‌ – ಮುಂದೇನಾಯ್ತು?

Share This Article