ಧಾರವಾಡ: ವಾಯುವಿಹಾರಕ್ಕೆಂದು ಹೋಗಿದ್ದ ಕುಸ್ತಿಪಟು (Wrestler) ಒಬ್ಬರಿಗೆ ಹೃದಯಾಘಾತವಾಗಿ (Heart Attack) ಮಾರ್ಗಮಧ್ಯದಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ.
ಬೈಲಹೊಂಗಲ ತಾಲೂಕಿನ ದೊಡವಾಡ ಗ್ರಾಮದ ಕುಸ್ತಿಪಟು ಸಂಗಪ್ಪ ಬಳಿಗೇರ ಸಾವನ್ನಪ್ಪಿದ ದುರ್ದೈವಿ. ಇಂದು ಬೆಳಗ್ಗೆ ವಾಯುವಿಹಾರಕ್ಕೆಂದು ತಮ್ಮ ಸ್ನೇಹಿತನೊಂದಿಗೆ ತೆರಳಿದ್ದರು. ಈ ವೇಳೆ ಅವರಿಗೆ ಏಕಾಏಕಿ ಹೃದಯಾಘಾತವಾಗಿ ಕೆಳಗಡೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ವ್ಯಕ್ತಿಗೆ ಚಾಕು ಇರಿತ – ರಕ್ತಸಿಕ್ತ ಪರಿಸ್ಥಿತಿಯಲ್ಲೇ ಠಾಣೆಗೆ ಬಂದ
ಧಾರವಾಡದ ಮದಿಹಾಳದ ಬಳಿ ಈ ಘಟನೆ ಸಂಭವಿಸಿದ್ದು, ಕುಸಿದು ಬಿದ್ದು ಸಾವನ್ನಪ್ಪಿದ ದೃಶ್ಯ ಶಾಲಾ ಕಟ್ಟಡದ ಮೇಲೆ ಹಾಕಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಂಗಪ್ಪ ಕುಸಿದು ಬಿದ್ದ ತಕ್ಷಣ ಆತನ ಸ್ನೇಹಿತ ಹಾಗೂ ಇತರರು ಸಂಗಪ್ಪನನ್ನು ಮೇಲೆಬ್ಬಿಸಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಸಂಗಪ್ಪ ಪ್ರಾಣಪಕ್ಷಿ ಹಾರಿ ಹೋಗಿತ್ತು. ಇದನ್ನೂ ಓದಿ: ಪಿಎಫ್‌ಐ ನಂತೆಯೇ RSSನ್ನೂ ಬ್ಯಾನ್ ಮಾಡಿ: ಕೇರಳ ವಿಪಕ್ಷಗಳ ಒತ್ತಾಯ

 
			
 
		 
		 
                                
                              
		