ಇಂದಿನಿಂದ ಮಹಿಳಾ ಪ್ರೀಮಿಯರ್‌ ಲೀಗ್‌ – ಉದ್ಘಾಟನಾ ಪಂದ್ಯದಲ್ಲಿ ಹಾಲಿ Vs ಮಾಜಿ ಚಾಂಪಿಯನ್ಸ್‌ಗಳ ಹಣಾಹಣಿ

3 Min Read

ನವದೆಹಲಿ: 4ನೇ ಆವೃತ್ತಿಯ ಮಹಿಳಾ ಪ್ರೀಮಿಯರ್‌ ಲೀಗ್‌ (WPL 2026) ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಮೊದಲ ಪಂದ್ಯ ಜನವರಿ 9 ರಿಂದ (ಇಂದಿನಿಂದ) ಆರಂಭ ಆಗಲಿದೆ. ಉದ್ಘಾಟನಾ ಪಂದ್ಯದಲ್ಲೇ ಹಾಲಿ ಚಾಂಪಿಯನ್ಸ್‌ ಮುಂಬೈ ಇಂಡಿಯನ್ಸ್‌ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ (RCB) ಸೆಣಸಲಿವೆ.

ಇಂದು ಸಂಜೆ 6:30 ರಿಂದ ಮುಂಬೈನ ಡಿವೈ ಪಾಟೀಲ ಕ್ರೀಡಾಂಗಣದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದ್ದು, 7:30ಕ್ಕೆ ಪಂದ್ಯ ಶುರುವಾಗಲಿದೆ.

2025 ರಲ್ಲಿ ಮುಂಬೈ ಇಂಡಿಯನ್ಸ್‌ (MI Womens) ಚಾಂಪಿಯನ್ಸ್ ಆಗಿ ಹೊರಹೊಮ್ಮಿದ್ರೆ, 2024ರಲ್ಲಿ ಆರ್‌ಸಿಬಿ (RCB Women) ಟ್ರೋಫಿ ಗೆದ್ದಿದೆ. ಕಳೆದ ಬಾರಿ ಬೆಂಗಳೂರು ತಂಡ ಸೋಲನುಭವಿಸಿ ಲೀಗ್‌ ಸುತ್ತಿನಲ್ಲೇ ಟೂರ್ನಿಯಿಂದ ಹೊರಬಿದ್ದಿದ್ದು, 2026 ರಲ್ಲಿ ಕಪ್ ಗೆಲ್ಲಲೇಬೇಕೆಂದು ಪಣ ತೊಟ್ಟಿದೆ. ಮುಂಬೈ ಇಂಡಿಯನ್ಸ್‌ ನಡೆದ ಮೂರು ಸೀಸನ್‌ಗಳಲ್ಲಿ ಎರಡು ಬಾರಿ ಟ್ರೋಫಿ ಎತ್ತಿ ಹಿಡಿದಿದೆ. ಆರ್‌ಸಿಬಿ ಒಂದು ಬಾರಿ ಗೆದ್ದಿದೆ. ಈ ಬಾರಿ 4ನೇ ಆವೃತ್ತಿಯಲ್ಲಿ ಟ್ರೋಫಿ ಗೆಲ್ಲುವ ಸಾಲಿನಲ್ಲಿ ಇವೆರಡು ತಂಡಗಳ ಹೆಸರುಗಳು ಮುಂಚೂಣಿಯಲ್ಲಿವೆ.

ಇನ್ನೂ ಈ ಬಾರಿ ಇವರೆಡು ತಂಡಗಳನ್ನು ಹೊರತುಪಡಿಸಿ ಉಳಿದ 3 ತಂಡಗಳಿಗೆ ಹೊಸ ನಾಯಕಿಯರನ್ನ ಆಯ್ಕೆ ಮಾಡಲಾಗಿದೆ. ಒಟ್ಟು 5 ಟೀಂ ಗಳು ಟ್ರೋಫಿಗಾಗಿ ಕಾದಾಟ ನಡೆಸಲಿವೆ.

ಯಾರು ಹೊಸ ನಾಯಕಿಯರು?
ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕಿಯಾಗಿ ಈ ಬಾರಿ ಜೆಮಿಮಾ ರೊಡ್ರಿಗಸ್, ಯುಪಿ ವಾರಿಯರ್ಸ್‌ಗೆ ಆಸ್ಟ್ರೇಲಿಯನ್ ಆಟಗಾರ್ತಿ ಮೆಗ್ ಲ್ಯಾನಿಂಗ್ ಹಾಗೂ ಆ್ಯಶ್ಲೀ ಗಾರ್ಡ್ನರ್ ಅವರು ಗುಜರಾತ್ ಜೈಂಟ್ಸ್ ತಂಡವನ್ನ ಮುನ್ನಡೆಸಲಿದ್ದಾರೆ. ಇನ್ನೂ ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್ ತಂಡದ ನಾಯಕಿಯರಾಗಿ ಕ್ರಮವಾಗಿ ಸ್ಮೃತಿ ಮಂಧಾನ ಮತ್ತು ಹರ್ಮನ್‌ ಪ್ರೀತ್‌ ಕೌರ್ ಅವರೇ ಮುಂದುವರಿದಿದ್ದಾರೆ.

ಯಾವ ತಂಡಗಳಿಗೆ ಯಾರು ನಾಯಕಿಯರು?
* ಡೆಲ್ಲಿ ಕ್ಯಾಪಿಟಲ್ಸ್ – ಜೆಮಿಮಾ ರೊಡ್ರಿಗಸ್
* ಯುಪಿ ವಾರಿಯರ್ಸ್‌ – ಮೆಗ್ ಲ್ಯಾನಿಂಗ್
* ಗುಜರಾತ್ ಜೈಂಟ್ಸ್ – ಆಶ್ಲೀ ಗಾರ್ಡ್ನರ್
* ಆರ್‌ಸಿಬಿ – ಸ್ಮೃತಿ ಮಂಧಾನ
* ಮುಂಬೈ ಇಂಡಿಯನ್ಸ್ – ಹರ್ಮನ್‌ ಪ್ರೀತ್‌ ಕೌರ್‌

5 ತಂಡಗಳ ಬಲಾ ಬಲ ಹೇಗಿದೆ?
ಆರ್‌ಸಿಬಿ:
ಸ್ಮೃತಿ ಮಂಧಾನ (ನಾಯಕಿ), ರಿಚಾ ಘೋಷ್ (ವಿಕೆಟ್ ಕೀಪರ್), ಶ್ರೇಯಾಂಕಾ ಪಾಟೀಲ್, ಜಾರ್ಜಿಯಾ ವೋಲ್, ನಾಡಿನ್ ಡಿ ಕ್ಲರ್ಕ್, ರಾಧಾ ಯಾದವ್, ಲಾರೆನ್ ಬೆಲ್, ಲಿನ್ಸೆ ಸ್ಮಿತ್, ಪ್ರೇಮಾ ರಾವತ್, ಅರುಂಧತಿ ರೆಡ್ಡಿ, ಸಯಾಲಿ ಸತ್ಘರೆ, ಪೂಜಾ ವಸ್ತ್ರಾಕರ್, ಗ್ರೇಸ್ ಹ್ಯಾರಿಸ್, ಗೌತಮಿ ನಾಯಕ್, ಪ್ರತ್ಯೂಷಾ ಕುಮಾರ್, ದಯಾಳನ್ ಹೇಮಲತಾ.

ಮುಂಬೈ ಇಂಡಿಯನ್ಸ್
ಹರ್ಮನ್‌ಪ್ರೀತ್ ಕೌರ್ (ನಾಯಕಿ), ನ್ಯಾಟ್ ಸಿವರ್-ಬ್ರಂಟ್, ಹೀಲಿ ಮ್ಯಾಥ್ಯೂಸ್, ಅಮನ್‌ಜೋತ್ ಕೌರ್, ಜಿ. ಕಮಲಿನಿ, ಅಮೆಲಿಯಾ ಕೆರ್, ಶಭ್ನಮ್‌ ಇಸ್ಮಾಯಿಲ್, ಸಂಸ್ಕೃತಿ ಗುಪ್ತಾ, ಸಜನಾ ಸಜೀವನ್, ರಾಹಿಲಾ ಫಿರ್ದೌಸ್, ನಿಕೋಲಾ ಕ್ಯಾರಿ, ಪೂನಂ ಖೆಮ್ನಾರ್, ತ್ರಿವೇಣಿ ವಸಿಸ್ಠ, ನಲ್ಲಾ ರೆಡ್ಡಿ, ಸೈಕಾ ಇಶಾಕ್, ಮಿಲ್ಲಿ ಇಲ್ಲಿಂಗ್ರೋತ್.

ಯುಪಿ ವಾರಿಯರ್ಸ್
ಮೆಗ್ ಲ್ಯಾನಿಂಗ್ (ನಾಯಕಿ), ಶ್ವೇತಾ ಸೆಹ್ರಾವತ್, ದೀಪ್ತಿ ಶರ್ಮಾ, ಸೋಫಿ ಎಕ್ಲೆಸ್ಟೋನ್, ಫೋಬೆ ಲಿಚ್‌ಫೀಲ್ಡ್, ಕಿರಣ್ ನವಗಿರೆ, ಹರ್ಲೀನ್ ಡಿಯೋಲ್, ಕ್ರಾಂತಿ ಗೌಡ್, ಆಶಾ ಸೋಭಾನ, ಡಿಯಾಂಡ್ರ ಡಾಟಿನ್, ಶಿಖಾ ಪಾಂಡೆ, ಶಿಪ್ರಾ ಗಿರಿ, ಸಿಮ್ರಾನ್ ಶೇಖ್, ಕ್ಲೋಯ್ ಟ್ರಯೋನ್, ಸುಮನ್ ಮೀನಾ, ಜಿ ತ್ರಿಷಾ, ಪತ್ರಿಕಾ ರಾವಲ್, ಚಾರ್ಲಿ ನಾಟ್.

ಡೆಲ್ಲಿ ಕ್ಯಾಪಿಟಲ್ಸ್
ಜೆಮಿಮಾ ರೋಡ್ರಿಗಸ್ (ನಾಯಕಿ), ಶಫಾಲಿ ವರ್ಮಾ, ಮಾರಿಜಾನ್ನೆ ಕಪ್, ನಿಕಿ ಪ್ರಸಾದ್, ಲಾರಾ ವೊಲ್ವಾರ್ಡ್ಟ್, ಚಿನೆಲ್ಲೆ ಹೆನ್ರಿ, ಶ್ರೀ ಚರಣಿ, ಸ್ನೇಹ್‌ ರಾಣಾ, ಲಿಜೆಲ್ಲೆ ಲೀ, ದೀಯಾ ಯಾದವ್, ತನಿಯಾ ಭಾಟಿಯಾ, ಮಮತಾ ಮಡಿವಾಲಾ, ನಂದಿನಿ ಶರ್ಮಾ, ಲೂಸಿ ಹ್ಯಾಮಿಲ್‌ಟನ್, ಮಿನ್ನು ಮಣಿ, ಅಲನಾ ಕಿಂಗ್.

ಗುಜರಾತ್ ಜೈಂಟ್ಸ್
ಆಶ್ಲೀ ಗಾರ್ಡ್ನರ್ (ನಾಯಕಿ), ಬೆತ್ ಮೂನಿ, ಸೋಫಿ ಡಿವೈನ್, ರೇಣುಕಾ ಸಿಂಗ್ ಠಾಕೂರ್, ಭಾರತಿ ಫುಲ್ಮಾಲಿ, ಟಿಟಾಸ್ ಸಾಧು, ಕಾಶೀ ಗೌತಮ್, ಕನಿಕಾ ಅಹುಜಾ, ತನುಜಾ ಕನ್ವರ್, ಜಾರ್ಜಿಯಾ ವೇರ್ಹ್ಯಾಮ್, ಅನುಷ್ಕಾ ಶರ್ಮಾ, ಹ್ಯಾಪಿ ಕುಮಾರಿ, ಕಿಮ್ ಗಾರ್ತ್, ಯಸ್ತಿಕಾ ಭಾಟಿಯಾ, ಶಿವಾನಿ ಸಿಂಗ್, ಡ್ಯಾನಿ ವ್ಯಾಟ್ ಹಾಡ್ಜ್, ರಾಜೇಶ್ವರಿ ಗಾಯಕ್ವಾಡ್, ಆಯುಷಿ ಸೋನಿ.

Share This Article