ವಡೋದರಾ: ಗ್ರೇಸ್ ಹ್ಯಾರಿಸ್ ಆಲ್ರೌಂಡ್ ಆಟ, ಸ್ಮೃತಿ ಮಂಧಾನ ಮ್ಯಾಜಿಕ್ ಫಿಫ್ಟಿ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ ಯುಪಿ ವಾರಿಯರ್ಸ್ ವಿರುದ್ಧ 8 ವಿಕೆಟ್ ಭರ್ಜರಿ ಜಯ ಸಾಧಿಸಿದೆ.
ತನ್ನ ಪಾಲಿನ ಕೊನೆಯ ಲೀಗ್ ಪಂದ್ಯವನ್ನಾಡಿದ ಆರ್ಸಿಬಿ ವಾರಿಯರ್ಸ್ ವಿರುದ್ಧ ಅದ್ಭುತ ಜಯದೊಂದಿಗೆ ಡಬ್ಲ್ಯೂಪಿಎಲ್ ಇತಿಹಾಸದಲ್ಲಿ ಫಸ್ಟ್ ಟೈಮ್ ನೇರವಾಗಿ ಫೈನಲ್ಗೆ ಲಗ್ಗೆಯಿಟ್ಟಿದೆ. ಮಹಿಳಾ ಪ್ರೀಮಿಯರ್ ಲೀಗ್ನ (WPL) 2ನೇ ಆವೃತ್ತಿಯಲ್ಲಿ ಆರ್ಸಿಬಿ, ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದು, ಮೊದಲ ಬಾರಿಗೆ ಫೈನಲ್ ಪ್ರವೇಶಿಸಿತ್ತು.
🚨 RCB QUALIFIED FOR THE 2ND FINAL IN THE WPL. 🚨
– Captain Smriti Mandhana and her army!!pic.twitter.com/XiXMohxPEQ
— Mufaddal Vohra (@mufaddal_vohra) January 29, 2026
ಪಂದ್ಯದ ʻಕ್ಲಾಕ್ʼ ಬದಲಿಸಿದ ಕ್ಲರ್ಕ್!
ಆರಂಭಿಕರಾಗಿ ಕಣಕ್ಕಿಳಿದಿದ್ದ ನಾಯಕಿ ಮೆಗ್ ಲ್ಯಾನಿಂಗ್ ಹಾಗೂ ದೀಪ್ತಿ ಶರ್ಮಾ ಸ್ಫೋಟಕ ಇನ್ನಿಂಗ್ಸ್ ಕಟ್ಟಲು ಮುಂದಾಗಿದ್ದರು. ಹೀಗಾಗಿ ಪವರ್ ಪ್ಲೇ ಹೊತ್ತಿಗೆ ಯಾವುದೇ ವಿಕೆಟ್ ನಷ್ಟವಿಲ್ಲದೇ ಈ ಜೋಡಿ 50 ರನ್ ಕಲೆಹಾಕಿತ್ತು. ಆ ಬಳಿಕವೂ ಸ್ಫೋಟಕ ಬ್ಯಾಟಿಂಗ್ ಮುಂದುವರಿಸಿತ್ತು ಈ ಜೋಡಿ. ಆದ್ರೆ 9ನೇ ಓವರ್ನಲ್ಲಿ ಬೌಲಿಂಗ್ಗೆ ಇಳಿದ ನಾಡಿನ್ ಡಿ ಕ್ಲರ್ಕ್ ಮೊದಲ ಎಸೆತದಲ್ಲೇ ನಾಯಕಿ ಮೆಗ್ಲ್ಯಾನಿಂಗ್ ವಿಕೆಟ್ ಕಿತ್ತರು. ಅದೇ ಓವರ್ನ 5ನೇ ಎಸೆತದಲ್ಲಿ ಸ್ಫೋಟಕ ಆಟಗಾರ್ತಿ ಜೋನ್ಸ್ ವಿಕೆಟ್ ಉರುಳಿಸಿದರು. ಇದು ಪಂದ್ಯದ ಗತಿಯನ್ನೇ ಬದಲಿಸಿತು.
ಬಳಿಕ 20ನೇ ಓವರ್ನ 2ನೇ ಎಸೆತದಲ್ಲಿ ಸೋಫಿ ಎಕ್ಲಿಸ್ಟೋನ್, 5ನೇ ಎಸೆತದಲ್ಲಿ ಸಿಮ್ರನ್ ಶೈಖಾ ಅವರ ವಿಕೆಟ್ ಉರುಳಿಸಿ, ಅಲ್ಪಮೊತ್ತಕ್ಕೆ ವಾರಿಯರ್ಸ್ ತಂಡವನ್ನ ಕಟ್ಟಿಹಾಕಲು ಕಾರಣವಾದರು. ಇದರೊಂದಿಗೆ ಗ್ರೇಸ್ ಹ್ಯಾರಿಸ್ 2 ವಿಕೆಟ್ ಹಾಗೂ ಲೂರೆನ್ ಬೆಲ್, ಶ್ರೇಯಾಂಕ ಪಾಟೀಲ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.
THE DELIGHTFUL STROKES OF GRACE HARRIS. pic.twitter.com/Z88KoCisH8
— Mufaddal Vohra (@mufaddal_vohra) January 29, 2026
ಇಲ್ಲಿನ ಕೊಟಾಂಬಿ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಕ್ರೀಸ್ಗಿಳಿದ ಯುಪಿ ವಾರಿಯರ್ಸ್ 8 ವಿಕೆಟ್ ನಷ್ಟಕ್ಕೆ 143 ರನ್ಗಳನ್ನಷ್ಟೇ ಗಳಿಸಿತ್ತು. ಅಲ್ಪಮೊತ್ತದ ಗುರಿ ಬೆನ್ನಟ್ಟಿದ ಆರ್ಸಿಬಿ 13.1 ಓವರ್ಗಳಲ್ಲೇ ಕೇವಲ 2 ವಿಕೆಟ್ ನಷ್ಟಕ್ಕೆ 147 ರನ್ ಬಾರಿಸಿ ಜಯ ಸಾಧಿಸಿತು.
ರುಬ್ಬಿದ ಗ್ರೇಸ್ ಹ್ಯಾರಿಸ್
ಇನ್ನೂ ಅಲ್ಪಮೊತ್ತದ ಚೇಸ್ ಆರಂಭಿಸಿದ ಆರ್ಸಿಬಿ ಪರ ಗ್ರೇಸ್ ಹ್ಯಾರಿಸ್ ಬೊಂಬಾಟ್ ಬ್ಯಾಟಿಂಗ್ ನಡೆಸಿದರು. ಮೊದಲ ಓವರ್ನಿಂದಲೇ ವಾರಿಯರ್ಸ್ ಪಡೆಯನ್ನ ಹಿಗ್ಗಾಮುಗ್ಗಾ ಚೆಂಡಾಡಿದರು. ಒಟ್ಟು 37 ಎಸೆತಗಳನ್ನು ಎದುರಿಸಿದ ಹ್ಯಾರಿಸ್ 75 ರನ್ (2 ಸಿಕ್ಸರ್, 13 ಬೌಂಡರಿ) ಚಚ್ಚುವ ಮೂಲಕ ತಂಡ ನಿರಾಯಾಸವಾಗಿ ಗೆಲ್ಲುವಂತೆ ಮಾಡಿದರು. ಇದರೊಂದಿಗೆ ನಾಯಕಿ ಸ್ಮೃತಿ ಮಂಧಾನ ಕೂಡ ಸ್ಫೋಟಕ 54 ರನ್ (27 ಎಸೆತ, 2 ಸಿಕ್ಸರ್, 8 ಬೌಂಡರಿ), ಜಾರ್ಜಿಯಾ ವೋಲ್ 16 ರನ್ ಗಳಿಸಿ ಮಿಂಚಿದರು.
ಇದಕ್ಕೂ ಮುನ್ನ ವಾರಿಯರ್ಸ್ ಪರ ದೀಪ್ತಿ ಶರ್ಮಾ 55 ರನ್, ನಾಯಕಿ ಮೆಗ್ ಲ್ಯಾನಿಂಗ್ 41 ರನ್ ಗಳಿಸಿದ್ದು ಬಿಟ್ಟರೆ, ಉಳಿದೆಲ್ಲರೂ ಅಲ್ಪ ಮೊತ್ತಕ್ಕೆ ಔಟಾದರು.

