ರಾಧಾ ಯಾದವ್‌ ಹಿಟ್‌ ವಿಕೆಟ್‌ ಆಗಿದ್ರಾ? ಯಾಕೆ ಇಷ್ಟೊಂದು ಚರ್ಚೆ?

1 Min Read

ವಡೋದರಾ: ಕೊನೆಯ ಓವರ್‌ನಲ್ಲಿ ಸತತ ಎರಡು ಬೌಂಡರಿ ಸಿಡಿಸಿ ಆರ್‌ಸಿಬಿಗೆ(RCB) ಗೆಲುವು ತಂದುಕೊಟ್ಟ ರಾಧಾ ಯಾದವ್‌ (Radha Yadav) ಹಿಟ್‌ ವಿಕೆಟ್‌ ಆಗಿದ್ರಾ ಎಂಬ ವಿಚಾರ ಈಗ ಜೋರಾಗಿ ಚರ್ಚೆ ನಡೆಯುತ್ತಿದೆ.

ಶ್ರೀ ಚರಣಿ (Shree Charani) ಎಸೆದ 4ನೇ ಎಸೆತವನ್ನು ರಾಧಾ ಯಾದವ್‌ ಔಟ್‌ ಸೈಡ್‌ ಆಫ್‌ ಕಡೆಗೆ ಜೋರಾಗಿ ಹೊಡೆದರು. ಬ್ಯಾಟ್‌ನಿಂದ ಹೊಡೆಯುವಾಗ ವಿಕೆಟ್‌ ಮೇಲಿದ್ದ ಬೆಲ್ಸ್‌ ಹಾರಿದೆ. ಬೆಲ್ಸ್‌ ಹಾರುತ್ತಿರುವುದನ್ನು ನೋಡಿ ಅಭಿಮಾನಿಗಳು ರಾಧಾ ಯಾದವ್‌ ಹಿಟ್‌ ವಿಕೆಟ್‌ ಆಗಿದ್ದಾರೆ ಎಂದು ಕಮೆಂಟ್‌ ವ್ಯಕ್ತಪಡಿಸುತ್ತಿದ್ದಾರೆ.

ನಿಜವಾಗಿ ಆಗಿದ್ದೇನು?
ರಾಧಾ ಯಾದವ್‌ ಹಿಂದೆ ಬಂದು ಹೊಡೆದಿದ್ದಾರೆ. ಹೊಡೆಯುವ ಸಂದರ್ಭದಲ್ಲಿ ಕೀಪರ್‌ ಲಿಝೆಲ್‌ ಲೀ ಅವರು ಕೈ ವಿಕೆಟ್‌ಗೆ ತಾಗಿದೆ. ರಾಧಾ ಯಾದವ್‌ ಬ್ಯಾಟ್‌ನಲ್ಲಿ ಹೊಡೆಯುವ ಸಮಯ ಮತ್ತು ಲಿಝೆಲ್‌ ಲೀ ಕೈ ವಿಕೆಟ್‌ಗೆ ತಾಗುವ ಸಮಯ ಒಂದೇ ಆಗಿದ್ದರಿಂದ ಹಿಟ್‌ ವಿಕೆಟ್‌ ಆದಂತೆ ಕಾಣುತ್ತದೆ.

ಮುಂದುಗಡೆ ಕ್ಯಾಮೆರಾ ನೋಡುವಾಗ ಹಿಟ್‌ ವಿಕೆಟ್‌ ಆದಂತೆ ಕಂಡರೂ ಎಡಗಡೆಯಲ್ಲಿರುವ ಕ್ಯಾಮೆರಾದಲ್ಲಿ ಲಿಝೆಲ್‌ ಲೀ ಕೈ ವಿಕೆಟ್‌ಗೆ ತಾಗುವುದು ಸ್ಪಷ್ಟವಾಗಿ ಕಾಣುತ್ತಿದೆ.

ರಾಧಾ ಯಾದವ್‌ ಬ್ಯಾಟ್‌ನಿಂದ ಬೀಸಿದ ಚೆಂಡು ಬೌಂಡರಿಗೆ ಹೋಗುತ್ತಿದ್ದಂತೆ ಆರ್‌ಸಿಬಿ ಆಟಗಾರ್ತಿಯರು ಮೈದಾನಕ್ಕೆ ನುಗ್ಗಿ ಸಂಭ್ರಮಿಸಿದರು. ಈ ಮೂಲಕ ಆರ್‌ಸಿಬಿ ಎರಡನೇ ಬಾರಿ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿತು.

Share This Article