ವಡೋದರಾ: ರಾಯಲ್ ಚಾಲೆಂಜರ್ಸ್(RCB) ತಂಡದ ನಾಯಕಿ ಸ್ಮೃತಿ ಮಂದಾನ (Smriti Mandhana) ಡಬ್ಲ್ಯೂಪಿಎಲ್‌ನಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ.
ಇಲ್ಲಿಯವರೆಗೆ ಚಾಂಪಿಯನ್ ಪಟ್ಟ ಅಲಂಕರಿಸಿದ ನಾಯಕಿಯರಿಗೆ ಆರೆಂಜ್ ಕ್ಯಾಪ್ (Orange Cap) ಸಿಕ್ಕಿರಲಿಲ್ಲ. ಆದರೆ ಸ್ಮೃತಿ ಮಂದನಾ ಫೈನಲಿನಲ್ಲಿ ಅರ್ಧಶತಕ ಸಿಡಿಸಿ ಒಟ್ಟು 377 ರನ್ ಹೊಡೆಯುವ ಮೂಲಕ ಆರೆಂಜ್ ಕ್ಯಾಪ್ ಪಡೆದರು.
ಈ ಪಂದ್ಯಕ್ಕೂ ಮುನ್ನ ಸ್ಮೃತಿ 290 ರನ್ ಹೊಡೆದಿದ್ದರೆ ಮುಂಬೈ ಇಂಡಿಯನ್ಸ್ (MI) ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ 342 ಹೊಡೆಯುವ ಮೂಲಕ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಮೊದಲ ಸ್ಥಾನದಲ್ಲಿದ್ದರು. ಆದರೆ ಸ್ಮೃತಿ 87 ರನ್(41 ಎಸೆತ,12 ಬೌಂಡರಿ, 3 ಸಿಕ್ಸ್) ಹೊಡೆಯುವ ಮೂಲಕ ಅತಿ ಹೆಚ್ಚು ರನ್ ಹೊಡೆದ ಆಟಗಾರ್ತಿಯರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದರು.
ತಾನು ಆಡಿದ 9 ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಸ್ಮೃತಿ ಅವರಿಗೆ ಆರೆಂಜ್ ಕ್ಯಾಪ್ ಧರಿಸುವ ಅವಕಾಶ ಸಿಕ್ಕಿರಲಿಲ್ಲ.ಹೀಗಾಗಿ ಪ್ರಶಸ್ತಿ ಪಡೆಯುವಾಗ ಆರೆಂಜ್ ಕ್ಯಾಪ್ ಧರಿಸಿ ಪ್ರಶಸ್ತಿ ಪಡೆದರು.
2024 ಆರ್‌ಸಿಬಿ ಮೊದಲ ಬಾರಿಗೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಈ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಆಲ್‌ರೌಂಡರ್ ಎಲ್ಲಿಸ್ ಪೆರ್ರಿ ಆರೆಂಜ್ ಕ್ಯಾಪ್ ಧರಿಸಿದ್ದರು.
WPL 2026 ಸ್ಮೃತಿ ಸಾಧನೆ
– ಆರೆಂಜ್ ಕ್ಯಾಪ್ ವಿನ್ನರ್ – 377 ರನ್
– WPL ವೇಗದ ಅರ್ಧಶತಕ – 23 ಎಸೆತ
– ಆವೃತ್ತಿಯೊಂದರಲ್ಲಿ ಅತಿ ಹೆಚ್ಚು ರನ್ ಸಿಡಿಸಿದ ಭಾರತೀಯ ಆಟಗಾರ್ತಿ – 377 ರನ್
– WPL ಫೈನಲಿನಲ್ಲಿ ಅತಿ ಹೆಚ್ಚು ರನ್ ಸಿಡಿಸಿದ ಆಟಗಾರ್ತಿ – 87 ರನ್
– 1 ಸಾವಿರ ರನ್ ಹೊಡೆದ ಹೊಡೆದ ಆಟಗಾರ್ತಿಯರ ಕ್ಲಬ್ ಸೇರ್ಪಡೆ – 1023
ಈ ಹಿಂದಿನ ಆರೆಂಜ್ ಕ್ಯಾಪ್ ವಿನ್ನರ್
2023 – ಮೆಗ್ ಲ್ಯಾನಿಂಗ್ – ದೆಹಲಿ ಕ್ಯಾಪಿಟಲ್ಸ್ 345
2024 – ಎಲ್ಲಿಸ್ ಪೆರ್ರಿ – ರಾಯಲ್ ಚಾಲೆಂಜರ್ಸ್ ಬೆಂಗಳೂರು – 347
2025 – ನ್ಯಾಟ್ ಸಿವರ್-ಬ್ರಂಟ್ – ಮುಂಬೈ ಇಂಡಿಯನ್ಸ್ – 523
2026 – ಸ್ಮೃತಿ ಮಂಧಾನ ರಾಯಲ್ ಚಾಲೆಂಜರ್ಸ್ ಬೆಂಗಳೂರು – 377



