WPL 2026: ಗುಜರಾತ್‌ ವಿರುದ್ಧ 7 ವಿಕೆಟ್‌ಗಳ ಜಯ – ಸತತ 4ನೇ ಬಾರಿ ಡೆಲ್ಲಿ ಫೈನಲ್‌ಗೆ

1 Min Read

– ಡಬ್ಲ್ಯೂಪಿಎಲ್‌ ಟ್ರೋಫಿಗೆ ಆರ್‌ಸಿಬಿ ಜೊತೆ ಸೆಣಸಾಟ

ವಡೋದರಾ: ಗುಜರಾತ್‌ ಜೈಂಟ್ಸ್‌ ವಿರುದ್ಧ ಎಲಿಮಿನೇಟರ್‌ ಪಂದ್ಯದಲ್ಲಿ 7 ವಿಕೆಟ್‌ಗಳ ಜಯದೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಸತತ 4ನೇ ಬಾರಿ ಡಬ್ಲ್ಯೂಪಿಎಲ್‌ ಟೂರ್ನಿಯ ಫೈನಲ್‌ಗೆ ಲಗ್ಗೆ ಇಟ್ಟಿದೆ. ಆರ್‌ಸಿಬಿ ವಿರುದ್ಧ ಪ್ರಶಸ್ತಿಗಾಗಿ ಸೆಣಸಾಡಲಿದೆ.

ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್‌ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 168 ರನ್‌ ಗಳಿಸಿತ್ತು. ಗುರಿ ಬೆನ್ನತ್ತಿದ ಡೆಲ್ಲಿ 15.4 ಓವರ್‌ಗಳಲ್ಲೇ ಗುರಿ ತಲುಪಿ 7 ವಿಕೆಟ್‌ಗಳ ಜಯ ಸಾಧಿಸಿತು.

ಬೆತ್‌ ಮೂನಿ (62) ಅಜೇಯ ಅರ್ಧಶತಕ ಹಾಗೂ ಜಾರ್ಜಿಯಾ ವೇರ್‌ಹ್ಯಾಮ್ 35 ರನ್‌ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್‌ಗಳು ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದರು. ಕಾಶ್ವೀ ಗೌತಮ್ 18, ಅನುಷ್ಕಾ ಶರ್ಮಾ 16 ರನ್‌ ಗಳಿಸಿದರು. ಗುಜರಾತ್‌ ವಿರುದ್ಧ ಚಿನೆಲ್ಲೆ ಹೆನ್ರಿ 3, ನಂದನಿ ಶರ್ಮಾ 2, ಮಿನ್ನು ಮಣಿ 1 ವಿಕೆಟ್‌ ಕಿತ್ತರು.

ಡೆಲ್ಲಿ ಪರ ಲಿಜೆಲ್ ಲೀ 43, ಜೆಮಿಮಾ ರೋಡ್ರಿಗಸ್ 41, ಲಾರಾ ವೋಲ್ವಾರ್ಡ್ 32, ಶಫಾಲಿ ವರ್ಮಾ 31 ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಡೆಲ್ಲಿ ತಂಡ ನಾಲ್ಕನೇ ಬಾರಿಗೆ ಡಬ್ಲ್ಯೂಪಿಎಲ್‌ ಫೈನಲ್‌ಗೆ ಎಂಟ್ರಿ ಕೊಟ್ಟಿದೆ. ಆದರೆ, ಇದುವರೆಗೂ ಪ್ರಶಸ್ತಿ ಜಯಿಸಿಲ್ಲ. ಮೊದಲ ಪ್ರಶಸ್ತಿ ನಿರೀಕ್ಷೆಯಲ್ಲಿ ಜೆಮಿಯಾ ಪಡೆ ಇದೆ. ಸ್ಮೃತಿ ಮಂಧಾನ ನಾಯಕತ್ವದ ಆರ್‌ಸಿಬಿ ತಂಡಕ್ಕೆ ಫೈನಲ್‌ನಲ್ಲಿ ಸವಾಲೊಡ್ಡಿದ್ದು, ಇದೇ ಫೆ.5 ರಂದು ಫೈನಲ್‌ ಪಂದ್ಯ ನಡೆಯಲಿದೆ.

Share This Article