ನಟಿ ರಮೋಲ ಒಂದು ದಿನದ ಖರ್ಚು ಕೇಳಿದ್ರೆ ಶಾಕ್ ಆಗ್ತೀರಾ!

Public TV
1 Min Read

ನ್ನಡತಿ, ಸೀತಾರಾಮ (Seetharama Serial) ಸೀರಿಯಲ್‌ಗಳ ಮೂಲಕ ಗಮನ ಸೆಳೆದಿರುವ ನಟಿ ರಮೋಲ (Ramola) ಒಂದು ದಿನ ಖರ್ಚು ಮಾಡುವ ಹಣದ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಹಂಚಿಕೊಂಡಿದ್ದಾರೆ. ಒಂದು ದಿನಕ್ಕೆ ನಟಿಯು ಖರ್ಚು ಮಾಡುವ ಹಣದ ಬೆಲೆ ಕೇಳಿ ಫ್ಯಾನ್ಸ್ ದಂಗಾಗಿದ್ದಾರೆ. ಇದನ್ನೂ ಓದಿ:ಒಳಉಡುಪು ಧರಿಸದೆ ಬ್ಲೇಜರ್‌ನಲ್ಲಿ ಬೋಲ್ಡ್ ಪೋಸ್ ಕೊಟ್ಟ ‘ಅಖಂಡ’ ಚಿತ್ರದ ನಟಿ

ರಮೋಲ ಸದ್ಯ ‘ಭರ್ಜರಿ ಬ್ಯಾಚುಲರ್ಸ್‌ 2’ (Bharjari Bachelors 2) ಆ್ಯಕ್ಟೀವ್ ಆಗಿದ್ದಾರೆ. ಈ ಶೋನಲ್ಲಿ ಮೆಂಟರ್ ಆಗಿರುವ ಅಮೃತಾಗೆ ಅವರ ಒಂದು ದಿನದ ಖರ್ಚು ಎಷ್ಟು ಎಂದು ನಿರೂಪಕ ನಿರಂಜನ್ ಪ್ರಶ್ನೆ ಕೇಳಿದ್ದಾರೆ. ಆಗ ಅವರು ಒಂದು ದಿನಕ್ಕೆ 3000 ರೂ. ಖಾಲಿ ಮಾಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ:‘ಲಕ್ಷ್ಮಿ ಬಾರಮ್ಮ’ ನಟಿ ಜೊತೆ ‘ಬಿಗ್ ಬಾಸ್’ ಕಿಶನ್ ಡ್ಯಾನ್ಸ್- ಬೆರಗಾದ ಫ್ಯಾನ್ಸ್

ಬಳಿಕ ‘ಬಿಗ್ ಬಾಸ್’ ಖ್ಯಾತಿಯ ಪವಿ ಪೂವಪ್ಪಗೆ ಎಷ್ಟು ಖರ್ಚು ಮಾಡ್ತೀರಾ? ಎಂದು ಕೇಳಲಾಗಿದೆ. ಅದಿಕ್ಕೆ, ಇದಿಕ್ಕೆ ಅಂತ ದಿನಕ್ಕೆ 1500 ರೂ. ಮೇಲೆ ಬೇಕು ಎಂದಿದ್ದಾರೆ. ಆ ನಂತರ ಇದೇ ಪ್ರಶ್ನೆಯನ್ನು ರಮೋಲಗೆ ಕೇಳಲಾಗಿದೆ. ಆಗ ಅವರು ದಿನಕ್ಕೆ 10,000 ರೂ. ಬೇಕು ಎಂದು ಹೇಳಿದ್ದಾರೆ. ಈ ಮಾತು ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ. ನಟಿಯ ಈ ವಿಡಿಯೋ ವೈರಲ್ ಆಗ್ತಿದೆ. ‘ನಿಮ್ಮ ಗಂಡ ಪುಣ್ಯವಂತ ಬಿಡಿ’ ಎಂದೆಲ್ಲಾ ನೆಟ್ಟಿಗರು ನಟಿಯ ಕಾಲೆಳೆದಿದ್ದಾರೆ.

ಅಂದಹಾಗೆ, ‘ಭರ್ಜರಿ ಬ್ಯಾಚುಲರ್ಸ್‌ 2’ನಲ್ಲಿ ರಕ್ಷಕ್ ಬುಲೆಟ್‌ಗೆ ರಮೋಲ ಮೆಂಟರ್ ಆಗಿದ್ದಾರೆ. ರವಿಚಂದ್ರನ್ ಮತ್ತು ರಚಿತಾ ರಾಮ್ ಕಾರ್ಯಕ್ರಮ ಜಡ್ಜ್ ಆಗಿದ್ದಾರೆ.

Share This Article