118 ವರ್ಷದ ಸನ್ಯಾಸಿನಿ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ

Public TV
1 Min Read

ಪ್ಯಾರಿಸ್: ಇಡೀ ವಿಶ್ವದಲ್ಲಿಯೇ 118 ವರ್ಷದ ಫ್ರೆಂಚ್ ಸನ್ಯಾಸಿನಿಯನ್ನು ಅತ್ಯಂತ ಹಿರಿಯ ವ್ಯಕ್ತಿ ಎಂದು ಗುರುತಿಸಲಾಗಿದ್ದು, ಗಿನ್ನೆಸ್ ಬುಕ್‍ನಲ್ಲಿ ಅವರ ಹೆಸರು ದಾಖಲಾಗಿದೆ.

ಏಪ್ರಿಲ್ 19ರಂದು ವಿಶ್ವದಲ್ಲಿ ಹಿರಿಯ ವ್ಯಕ್ತಿ ಎನ್ನಿಸಿಕೊಂಡಿದ್ದ ಜಪಾನ್‍ನ ಕೇನ್ ತನಕಾ ಅವರು 119ರ ವಯಸ್ಸಿನಲ್ಲಿ ನಿಧರಾಗಿದ್ದರು. ಈ ಬೆನ್ನಲ್ಲೇ ವಿಶ್ವದಲ್ಲಿ ಹಿರಿಯ ವ್ಯಕ್ತಿಗಳು ಯಾರಿದ್ದಾರೆ ಎಂಬುದರ ಕುರಿತು ಚರ್ಚೆ ನಡೆಯುತ್ತಿತ್ತು. ಈಗ ಅದಕ್ಕೆ ತೆರೆ ಬಿದ್ದಿದ್ದು, ಸಿಸ್ಟರ್ ಆಂಡ್ರೆ ಅವರ ಹೆಸರು ಗಿನ್ನೆಸ್ ವಿಶ್ವ ದಾಖಲೆ ಸೇರಿದೆ. ಇವರು 11 ಫೆಬ್ರವರಿ 1904ರಂದು ಫ್ರಾನ್ಸ್‌ನಲ್ಲಿ ಜನಿಸಿದ್ದು, ಪೂರ್ಣ ಜೀವನ ನಡೆಸುತ್ತಿದ್ದಾರೆ.

ಈಗ ಸಿಸ್ಟರ್ ಆಂಡ್ರೆ ಅವರಿಗೆ ಅಧಿಕೃತವಾಗಿ 118 ವರ್ಷ 73 ದಿನಗಳ ವಯಸ್ಸಾಗಿದ್ದು, ಅತ್ಯಂತ ಹಿರಿಯ ವ್ಯಕ್ತಿ ಎಂದು ಗಿನ್ನೆಸ್ ವಿಶ್ವ ದಾಖಲೆಗಳು ದೃಢಪಡಿಸಿದೆ. ಇದನ್ನೂ ಓದಿ: ಮದುವೆ, ಪಾರ್ಟಿ ಸಮಾರಂಭಕ್ಕೆ ಗನ್ ನಿಷೇಧ 

ಹಿನ್ನೆಲೆ
ಸಿಸ್ಟರ್ ಆಂಡ್ರೆ ಅವರು ಪೂರ್ಣ ಜೀವನವನ್ನು ನಡೆಸುತ್ತಿದ್ದು, ತಮ್ಮ ಕಿರಿಯ ವಯಸ್ಸಿನಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಅಲ್ಲದೇ ಆಂಡ್ರೆ ಅವರು 2ನೇ ಮಹಾಯುದ್ಧದ ವೇಳೆ ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು. ಯುದ್ಧ ಮುಗಿದ ನಂತರ ಆಂಡ್ರೆ ಅವರು ಕ್ಯಾಥೊಲಿಕ್ ಸನ್ಯಾಸಿನಿಯಾದರು. ಈ ವೇಳೆ ಅವರು ಮೊದಲು ವಿಚಿ, ಆವೆಗ್ರ್ನೆ-ರೋನ್-ಆಲ್ಪೆಸ್ ಪ್ರದೇಶದ ಆಸ್ಪತ್ರೆಯಲ್ಲಿ ಅನಾಥರು ಮತ್ತು ವಯಸ್ಸಾದವರನ್ನು 28 ವರ್ಷಗಳ ಕಾಲ ನೋಡಿಕೊಳ್ಳುತ್ತಿದ್ದರು.

ತಮ್ಮ ಜೀವನದ ಬಹುಭಾಗವನ್ನು ಧಾರ್ಮಿಕ ಸೇವೆಗೆ ಮೀಸಲಿಟ್ಟಿರುವ ಸಿಸ್ಟರ್ ಆಂಡ್ರೆ ಅವರು ಅತ್ಯಂತ ಹಳೆಯ ಸನ್ಯಾಸಿನಿ ಎಂಬ ದಾಖಲೆಯನ್ನು ಸಹ ಹೊಂದಿದ್ದಾರೆ. ಕಳೆದ ವರ್ಷ ಸಿಸ್ಟರ್ ಆಂಡ್ರೆ ಅವರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಗುಣಮುಖರಾಗಿ ಬಂದಿದ್ದರು. ಈ ಹಿನ್ನೆಲೆ ವಿಶ್ವದಲ್ಲೇ ಕೋವಿಡ್-19 ಸೋಂಕಿನಿಂದ ಗುಣಮುಖರಾದ ಅತ್ಯಂತ ಹಿರಿಯ ವ್ಯಕ್ತಿ ಎಂಬ ಮತ್ತೊಂದು ದಾಖಲೆ ಮಾಡಿದ್ದಾರೆ.  ಇದನ್ನೂ ಓದಿ:  4ನೇ ಅಲೆ ತಡೆಯೋದು ನಮ್ಮ ಕೈಯಲ್ಲಿಯೇ ಇದೆ: ತಜ್ಞ ವೈದ್ಯರು 

Share This Article
Leave a Comment

Leave a Reply

Your email address will not be published. Required fields are marked *