ಪ್ರಪಂಚದ ಕ್ಯೂಟೆಸ್ಟ್ ಮಗುವಿಗೆ ಕೊರೊನಾ ವದಂತಿ – ತಾಯಿ ಸ್ಪಷ್ಟನೆ

Public TV
3 Min Read

ಇರಾನ್: ಪ್ರಪಂಚದ ಕ್ಯೂಟೆಸ್ಟ್ ಬೇಬಿ ಕೊರೊನಾದಿಂದ ಬಳಲುತ್ತಿದ್ದಾಳೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಇದೀಗ ಈ ಬಗ್ಗೆ ಬಾಲಕಿಯ ತಾಯಿ ತನ್ನ ಮಗಳ ಇನ್‍ಸ್ಟಾ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಬಾಲಕಿಯ ಫೋಟೋ ಹಾಕಿ ಅದಕ್ಕೆ, ಪ್ರಪಂಚದ ಕ್ಯೂಟೆಸ್ಟ್ ಬೇಬಿಗಾಗಿ ಎಲ್ಲರೂ ಪ್ರಾರ್ಥನೆ ಮಾಡಿ. ಏಕೆಂದರೆ ಆಕೆ ಕೊರೊನಾದಿಂದ ಬಳಲುತ್ತಿದ್ದಾಳೆ. ದಯವಿಟ್ಟು ಎಲ್ಲರೂ ಮಗುವಿಗಾಗಿ ಪ್ರಾರ್ಥನೆ ಮಾಡಿ ಎಂದು ಪೋಸ್ಟ್ ಮಾಡಿದ್ದರು. ಇದನ್ನು ನೋಡಿದ ಜನರು ಇದರು ನಿಜ ಎಂದು ತಿಳಿದು ಬಾಲಕಿ ಶೀಘ್ರವಾಗಿ ಗುಣವಾಗಲಿ ಎಂದು ಕಮೆಂಟ್ ಮಾಡುವ ಮೂಲಕ ಈ ಪೋಸ್ಟ್ ಅನ್ನು ಶೇರ್ ಮಾಡಿಕೊಳ್ಳುತ್ತಿದ್ದರು. ಇದನ್ನೂ ಓದಿ: ಹೆಣ್ಣು ಶಿಶುವಿಗೆ ಕೊರೊನಾ ಎಂದ ಹೆಸರಿಟ್ಟ ಚಿಕ್ಕಪ್ಪ

ಸಾಮಾಜಿಕ ಜಾಲತಾಣಗಳಲ್ಲಿ ಬಾಲಕಿಗೆ ಸಂಬಂಧಿಸಿದ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಅಂತರಾಷ್ಟ್ರೀಯ ಮಾಧ್ಯಮವೊಂದು ಪಿನ್‍ಇಂಟೆರೆಸ್ಟ್ ನಲ್ಲಿ ಬಾಲಕಿಯನ್ನು ಹುಡುಕಿದೆ. ಈ ವೇಳೆ ಆಕೆ ಪ್ರಸಿದ್ಧ ಚೈಲ್ಡ್ ಮಾಡೆಲ್ ಅನಾಹಿತಾ ಹಶೆಮ್ಜಾಡೆ ಎಂಬುದು ತಿಳಿಯಿತು. ತಕ್ಷಣ ಆಕೆಯನ್ನು ಇನ್‍ಸ್ಟಾದಲ್ಲಿ ಹುಡುಕಿದಾಗ ಆಕೆ ಆರೋಗ್ಯವಾಗಿರುವುದು ತಿಳಿಯಿತು. ಬಾಲಕಿಯ ಇನ್‍ಸ್ಟಾವನ್ನು ಆಕೆಯ ತಾಯಿ ನಿರ್ವಹಿಸುತ್ತಿದ್ದಾರೆ.

ಸೋಶಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿರುವ ಪೋಸ್ಟ್ ನೋಡಿ ನೆಟ್ಟಿಗರು ಬಾಲಕಿಯ ಪೋಸ್ಟ್ ಗೆ ಕಮೆಂಟ್ ಮಾಡುವ ಮೂಲಕ ಆಕೆಯ ಆರೋಗ್ಯವನ್ನು ವಿಚಾರಿಸಿದ್ದಾರೆ. ಈ ಕಮೆಂಟ್‍ಗಳನ್ನು ಗಮನಿಸಿದ ಬಾಲಕಿಯ ತಾಯಿ ನನ್ನ ಮಗಳು ಆರೋಗ್ಯವಾಗಿದ್ದಾಳೆ. ಆಕೆ ಕೊರೊನಾದಿಂದ ಬಳಲುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇದಾದ ಕೆಲವೇ ಹೊತ್ತಿನಲ್ಲಿ ಬಾಲಕಿಯ ತಾಯಿ ಮಗಳು ಹಾಲು ಕುಡಿಯುತ್ತಿರುವ ಫೋಟೋವನ್ನು ಇನ್‍ಸ್ಟಾ ಸ್ಟೋರಿಯಲ್ಲಿ ಹಂಚಿಕೊಂಡು, “ಆರೋಗ್ಯ ಹಾಗೂ ಸುರಕ್ಷಿತವಾಗಿದ್ದಾಳೆ” ಎಂದು ಬರೆದುಕೊಂಡಿದ್ದಾರೆ.

ನೀಲಿ ಕಣ್ಣಿನ ಮೂಲಕವೇ ಗಮನ ಸೆಳೆದ ನಾಲ್ಕು ವರ್ಷದ ಅನಾಹಿತಾ ಹಶೆಮ್ಜಾಡೆ ಪ್ರಸಿದ್ಧ ಚೈಲ್ಡ್ ಮಾಡೆಲ್ ಹಾಗೂ ಇಂಟರ್‌ನೆಟ್ ಸೆನ್ಸೆಶನ್. ಅನಾಹಿತಾಗೆ ಇನ್‍ಸ್ಟಾದಲ್ಲಿ ಏಳೂವರೆ ಲಕ್ಷ ಫಾಲೋವರ್ಸ್ ಹೊಂದಿದ್ದು, ಆಕೆಯನ್ನು ಪ್ರಪಂಚದ ಕ್ಯೂಟೆಸ್ಟ್ ಚೈಲ್ಡ್ ಎಂದುಕರೆಯುತ್ತಾರೆ. ಆಕೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

 

View this post on Instagram

 

بساطِ زرنگی هایتان را اطراف آدم هایِ ساده و مهربان پهن نکنید، انصاف نیست! کاش آدم هایی که انتخاب کرده اند خوب باشند را پشیمان نکنید… دست از سرِ این نسلِ اصیلِ رو به انقراض بردارید! باور کنید، حتی کوچکترین ضربه به این جور آدم ها، تاوان دارد… یادم می آید مادرم همیشه می گفت: ”خدا بدجور پشتِ آدمهای ساده ایستاده” حواستان باشد؛ مبادا خدا را عصبانی کنید! #نرگس_صرافیان_طوفان . . لباس زيبا از @modas_hautecouture . . photo by @copolpa.babyphoto . . . . #anahita#anahitahashemzade#آناهيتا#آناهيتاهاشمزاده#اصفهان#اصفهاني

A post shared by Anahita Hashemzadeh | آناهيتا (@annahiita.hashemzadeh) on

Share This Article
Leave a Comment

Leave a Reply

Your email address will not be published. Required fields are marked *