ಬ್ಯಾಟಿಂಗ್ ಮಾಡ್ತಿರೋ ರಾಹುಲ್‌, ಕೊಹ್ಲಿಯನ್ನು ಹುರಿದುಂಬಿಸ್ತಿರೋ ಅಥಿಯಾ, ಅನುಷ್ಕಾ

By
1 Min Read

ಅಹಮದಾಬಾದ್: ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium) ನಡೆಯುತ್ತಿರುವ ಭಾರತ- ಆಸ್ಟ್ರೇಲಿಯಾ (India- Australia) ನಡುವೆ ಹಣಾಹಣಿ ನಡೆಯುತ್ತಿದೆ. ಪಂದ್ಯ ವೀಕ್ಷಿಸಲು ಸಾವಿರಾರು ಮಂದಿ ಜಮಾಯಿಸಿದ್ದಾರೆ. ಅಂತೆಯೇ ಕ್ರಿಕೆಟಿಗ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಹಾಗೂ ಕೆ.ಎಲ್ ರಾಹುಲ್ (KL Rahul) ಪತ್ನಿ ಅಥಿಯಾ ಶೆಟ್ಟಿ ಕೂಡ ಆಗಮಿಸಿದ್ದಾರೆ.

ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಭಾರತ ಟಾಸ್ ಸೋತಿದೆ. ಆಸ್ಟ್ರೇಲಿಯಾ (Australia) ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಬ್ಯಾಟಿಂಗ್ ಮಾಡುತ್ತಿರುವ ಟೀಂ ಇಂಡಿಯಾಗೆ ಅನುಷ್ಕಾ, ಅಥಿಯಾ ಹುರಿದುಂಬಿಸುತ್ತಿದ್ದಾರೆ. ಅನುಷ್ಕಾ ಹಾಗೂ ಅಥಿಯಾ (Athiya Shetty) ಫೋಟೋಗಳು ಸಾಮಾಜಿಕ ಜಾಲತಾಣಗಳಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ದಾಖಲೆಗಾಗಿ ಆಡದೇ ಇದ್ದರೂ ವಿಶ್ವದಾಖಲೆ ನಿರ್ಮಿಸಿದ ರೋಹಿತ್‌ ಶರ್ಮಾ

ಅನುಷ್ಕಾ ಶರ್ಮಾ ತನ್ನ ತಾಯಿಯೊಂದಿಗೆ ಮೂಲೆಯ ಸೀಟಿನಲ್ಲಿ ಕುಳಿತಿದ್ದಾರೆ. ಬಿಳಿ ಹೂವಿನ ಉಡುಪನ್ನು ಧರಿಸಿರುವ ಅನುಷ್ಕಾ ಸುಂದರವಾಗಿ ಕಾಣಿಸುತ್ತಿದ್ದಾರೆ. ತನ್ನ ತಾಯಿಯೊಂದಿಗೆ ಅನುಷ್ಕಾ ಕುಳಿತಿರುವುದು ಸೋಶಿಯಲ್ ಮೀಡಿಯಾದಲ್ಲಿರುವ ವೀಡಿಯೋದಲ್ಲಿ ಕಂಡುಬಂದಿದೆ. ಅನುಷ್ಕಾ ಜೊತೆ ಅಥಿಯಾ ಶೆಟ್ಟಿ ಕೂಡ ಕಾಣಿಸಿಕೊಂಡಿದ್ದಾರೆ.

1,32,000 ಪ್ರೇಕ್ಷಕರ ಆಸನ ಸಾಮರ್ಥ್ಯ ಹೊಂದಿರುವ ಪ್ರಸಿದ್ಧ ಕ್ರೀಡಾಂಗಣದಲ್ಲಿ ಅನುಷ್ಕಾ ಜೊತೆಗೆ ರಣವೀರ್ ಸಿಂಗ್, ದೀಪಿಕಾ ಪಡುಕೋಣೆ ಮತ್ತು ಅನಿಲ್ ಕಪೂರ್ ಕೂಡ ಪಂದ್ಯ ವೀಕ್ಷಿಸಲು ಅಹಮದಾಬಾದ್‍ಗೆ ಬಂದಿದ್ದಾರೆ. ಬಾಲಿವುಡ್‍ನ ಹೊರತಾಗಿ, ಮಾಜಿ ಕ್ರಿಕೆಟಿಗರಾದ ಕಪಿಲ್ ದೇವ್ ಮತ್ತು ಸಚಿನ್ ತೆಂಡೂಲ್ಕರ್ ಕೂಡ ಪಂದ್ಯ ವೀಕ್ಷಿಸಲು ಆಗಮಿಸಿದ್ದಾರೆ.

Share This Article