ಆಪರೇಷನ್ ಸಿಂಧೂರ ವೇಳೆ ಭಾರತದ ಸೇನಾ ಶಕ್ತಿಯನ್ನ ಇಡೀ ವಿಶ್ವವೇ ನೋಡಿದೆ; ಸಂಸತ್ ಅಧಿವೇಶನಕ್ಕೂ ಮುನ್ನ ಮೋದಿ ಮಾತು

Public TV
2 Min Read

– ಶುಭಾಂಶು ಶುಕ್ಲಾ ಸಾಧನೆ ಕೊಂಡಾಡಿದ ಪ್ರಧಾನಿ – ಅಂತರಿಕ್ಷದಲ್ಲಿ ತ್ರಿವರ್ಣ ಧ್ವಜ ಹೆಮ್ಮೆಯ ಕ್ಷಣ ಎಂದು ಬಣ್ಣನೆ

ನವದೆಹಲಿ: ʻಆಪರೇಷನ್ ಸಿಂಧೂರʼದಲ್ಲಿ (Operation Sindoor) ಶೇ.100ರಷ್ಟು ಗುರಿಯನ್ನು ಸಾಧಿಸಲಾಗಿದೆ. ಇಂದು ಇಡೀ ವಿಶ್ವವೇ ಭಾರತದ ಸೇನಾ ಶಕ್ತಿಯತ್ತ ಆಕರ್ಷಿತವಾಗಿವೆ. ಭಾರತದ ಸೇನಾ ಶಕ್ತಿಯನ್ನ ಇಡೀ ವಿಶ್ವವೇ ನೋಡಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಹೇಳಿದರು.

ಸಂಸತ್ (Parliament) ಮುಂಗಾರು ಅಧಿವೇಶನ ಆರಂಭಕ್ಕೂ ಮುನ್ನ ಅವರು, ಆಪರೇಷನ್ ಸಿಂಧೂರ ಹಾಗೂ ಭಯೋತ್ಪಾದನೆ ಕುರಿತು ಮಾತನಾಡಿದರು ವಿಜಯೋತ್ಸವದ ಸಂಭ್ರಮಕ್ಕಾಗಿಯೇ ಈ ಮುಂಗಾರು ಅಧಿವೇಶನ (Monsoon session) ಎಂದು ಹೇಳಿದರು. ಇಡೀ ವಿಶ್ವವೇ ಭಾರತದ ಸೇನಾ ಶಕ್ತಿಯ ಬಲವನ್ನ ನೋಡಿದೆ. ಆಪರೇಷನ್ ಸಿಂಧೂರದಲ್ಲಿ ಭಾರತ ಸೇನೆಯು ನಿಗದಿಪಡಿಸಿದ ಶೇ.100ರಷ್ಟು ಗುರಿಯನ್ನು ಸಾಧಿಸಿದೆ. ʻಆಪರೇಷನ್ ಸಿಂಧೂರʼ ಅಡಿಯಲ್ಲಿ ಭಯೋತ್ಪಾದಕರ ನೆಲೆಗಳನ್ನು ಕೇವಲ 22 ನಿಮಿಷಗಳಲ್ಲಿ ನೆಲ ಸಮ ಮಾಡಲಾಯಿತು ಎಂದು ಬಣ್ಣಿಸಿದರು.

ಈ ಮಳೆಗಾಲದ ಅಧಿವೇಶನವು ವಿಜಯೋತ್ಸವದ ಆಚರಣೆಯಾಗಿದೆ. ಇಡೀ ಜಗತ್ತು ಭಾರತದ ಶಕ್ತಿಯನ್ನ ನೋಡಿದೆ. ಭಾರತದ ಈ ಹೊಸ ರೂಪದ ಸೇನಾ ಶಕ್ತಿಗೆ ಇಡೀ ವಿಶ್ವವೇ ಆಕರ್ಷಿತವಾಗಿದೆ. ಇತ್ತೀಚಿನ ದಿನಗಳಲ್ಲಿ, ನಾನು ವಿದೇಶಕ್ಕೆ ಭೇಟಿ ನೀಡಿದಾಗಲೆಲ್ಲಾ ಭಾರತದಲ್ಲಿ ತಯಾರಿಸಿದ ಶಸ್ತ್ರಾಸ್ತ್ರಗಳ ಕಡೆಗೆ ಪ್ರಪಂಚ ಆಕರ್ಷಣೆಗೊಳಗಾಗಿರುವುದನ್ನ ನಾನು ಗಮನಿಸಿದೆ ಎಂದು ಹೇಳಿದರು.

ಇದೇ ವೇಳೆ ಆಕ್ಸಿಯಂ-4 ಮಿಷನ್ ಮೂಲಕ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭೇಟಿ ನೀಡಿದ ಶುಭಾಂಶು ಶುಕ್ಲಾ ಅವರ ಸಾಧನೆಗಳನ್ನು ಪ್ರಧಾನಿ ಮೋದಿ ಶ್ಲಾಘಿಸಿದರು. ಈ ಮಳೆಗಾಲದ ಅಧಿವೇಶನವು ವಿಜಯೋತ್ಸವದ ಆಚರಣೆಯಾಗಿದೆ. ಈ ಋತುವು ರಾಷ್ಟ್ರೀಯ ಹೆಮ್ಮೆ ಮತ್ತು ವಿಜಯೋತ್ಸವದ ಋತುವಾಗಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಮೊದಲ ಬಾರಿಗೆ ಭಾರತೀಯ ತ್ರಿವರ್ಣ ಧ್ವಜವನ್ನು ಹಾರಿಸುವುದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ವಿಷಯವಾಗಿದೆ. ಈ ಯಶಸ್ವಿ ಪ್ರಯಾಣವು ದೇಶದಲ್ಲಿ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆಯ ಕಡೆಗೆ ಹೊಸ ಉತ್ಸಾಹ ತುಂಬುತ್ತಿದೆ. ಇಡೀ ಸಂಸತ್ತು ಮತ್ತು ದೇಶದ ಜನತೆ ಈ ಹೆಮ್ಮೆಯಲ್ಲಿ ಒಂದೇ ಧ್ವನಿಯಲ್ಲಿ ಸೇರಿಕೊಂಡಾಗ ಅದು ಮತ್ತಷ್ಟು ಯಶಸ್ವಿಯಾಗುತ್ತದೆ ಎಂದು ಹೇಳಿದರು.

ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಸದಸ್ಯರು ಈ ವಿಜಯೋತ್ಸವ ಆಚರಿಸುತ್ತಾರೆಂಬ ಭರವಸೆಯಿದೆ. ಇದು ಭಾರತೀಯ ರಕ್ಷಣಾ ಪಡೆಗಳ ಉತ್ಸಾಹವನ್ನ ಮತ್ತಷ್ಟು ಬಲಪಡಿಸುತ್ತದೆ ಮತ್ತು ಸೇನಾ ಕ್ಷೇತ್ರದಲ್ಲಿ ಸಂಶೋಧನೆ, ನಾವೀನ್ಯತೆ ಮತ್ತು ಉತ್ಪಾದನೆಯನ್ನ ಪ್ರೋತ್ಸಾಹಿಸುತ್ತದೆ ಎಂದು ತಿಳಿಸಿದರು. ಕಳೆದ 10 ವರ್ಷಗಳಲ್ಲಿ ಮೊದಲ ಬಾರಿಗೆ ದೇಶದಲ್ಲಿ ನೀರಿನ ಸಂಗ್ರಹ ಸುಮಾರು 3 ಪಟ್ಟು ಹೆಚ್ಚಾಗಿದೆ, ಇದು ಇಡೀ ದೇಶಕ್ಕೆ. ವಿಶೇಷವಾಗಿ ರೈತರು, ಹಳ್ಳಿಗಳು ಮತ್ತು ಸಾಮಾನ್ಯ ಕುಟುಂಬಗಳಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಿದರು.

Share This Article