ಕೋವಿಡ್‌ಗಿಂತಲೂ ಭಯಾನಕ – ಮುಂದಿನ ಸಾಂಕ್ರಾಮಿಕ ಎದುರಿಸಲು ಸಿದ್ಧರಾಗಿ: WHO ಎಚ್ಚರಿಕೆ

Public TV
1 Min Read

ಜಿನೀವಾ: ಕೋವಿಡ್‌ನಿಂದಾಗಿ (Covid-19) ಬಳಲಿರುವ ಜಗತ್ತು ಇದೀಗ ಮತ್ತೊಂದು ಸಾಂಕ್ರಾಮಿಕದ (Pandemic) ಭೀತಿಯಲ್ಲಿದೆ. ಮುಂಬರುವ ಸಾಂಕ್ರಾಮಿಕ ರೋಗಕ್ಕೆ ಜಗತ್ತು ಸಿದ್ಧವಾಗಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಎಚ್ಚರಿಕೆ ನೀಡಿದೆ.

who

ಮುಂದಿನ ಸಾಂಕ್ರಾಮಿಕ ರೋಗಕ್ಕೆ ಜಗತ್ತು ಸಿದ್ಧವಾಗಬೇಕು. ಇದು ಕೋವಿಡ್-19 ಗಿಂತಲೂ ಹೆಚ್ಚು ಮಾರಣಾಂತಿಕವಾಗಿರಬಹುದು. ಪ್ರಪಂಚದಾದ್ಯಂತ ಕೋವಿಡ್ ಪ್ರಕರಣಗಳು ಸ್ವಲ್ಪಮಟ್ಟಿಗೆ ಸ್ಥಿರಗೊಳ್ಳುತ್ತಿದ್ದರೂ ಕೋವಿಡ್‌ನ ಅಂತ್ಯ ಜಾಗತಿಕ ಆರೋಗ್ಯ ಬೆದರಿಕೆಯ ಅಂತ್ಯವಲ್ಲ ಎಂದು ಡಬ್ಲ್ಯುಹೆಚ್‌ಒನ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ (Tedros Adhanom Ghebreyesus) ಹೇಳಿದ್ದಾರೆ. ಇದನ್ನೂ ಓದಿ: ಆರ್‌ವಿ ರಸ್ತೆ, ಬೊಮ್ಮಸಂದ್ರ ಪ್ರಯಾಣಿಕರಿಗೆ ಗುಡ್ ನ್ಯೂಸ್ – ವರ್ಷಾಂತ್ಯಕ್ಕೆ ಹಳದಿ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭ

76ನೇ ವಿಶ್ವ ಆರೋಗ್ಯ ಅಸೆಂಬ್ಲಿಯಲ್ಲಿ ಮಾತನಾಡಿದ ಘೆಬ್ರೆಯೆಸಸ್, ರೋಗ ಹಾಗೂ ಸಾವಿನ ಸಂಖ್ಯೆಯನ್ನು ಉಲ್ಬಣಗೊಳಿಸುವ ಮತ್ತೊಂದು ರೂಪಾಂತರದ ಬೆದರಿಕೆ ಇನ್ನೂ ಕೂಡಾ ಉಳಿದಿದೆ. ಮುಂದಿನ ಸಾಂಕ್ರಾಮಿಕ ಜಗತ್ತಿಗೆ ಕರೆಗಂಟೆಯಾಗಿದ್ದು, ಮತ್ತೆ ಭೀತಿಯನ್ನು ಹುಟ್ಟಿಸಲಿದೆ. ಇದಕ್ಕಾಗಿ ನಾವು ನಿರ್ಣಾಯಕವಾಗಿ, ಸಾಮೂಹಿಕವಾಗಿ ಹಾಗೂ ಸಮಾನವಾಗಿ ಉತ್ತರ ನೀಡಲು ಸಿದ್ಧರಾಗಿರಬೇಕು ಎಂದು ಸಲಹೆ ನೀಡಿದರು. ಇದನ್ನೂ ಓದಿ: ಚಿಲ್ಲರೆ ವ್ಯಾಪಾರಿಗಳು ಗ್ರಾಹಕರ ಮೊಬೈಲ್ ನಂಬರ್ ಕೇಳುವಂತಿಲ್ಲ – ಕೇಂದ್ರ ಸರ್ಕಾರ

Share This Article