ಶತಮಾನದ ಸೋಜಿಗಕ್ಕೆ ಸಾಕ್ಷಿಯಾಯ್ತು ಜಗ- ಮಳೆ, ಮೋಡದ ಮಧ್ಯೆ ಕೆಂಬಣ್ಣದಲ್ಲಿ ಶಶಿ ಸ್ನಾನ

Public TV
1 Min Read

ಬೆಂಗಳೂರು: ಶತಮಾನದ ಸೋಜಿಗ, ಖಗೋಳದ ಕೌತುಕ ರಕ್ತ ಚಂದಿರ ಗ್ರಹಣ ಘಟಿಸಿದೆ. ಬೆಳ್ಳಗ್ಗಿದ್ದ ಚಂದಿರ ನಭಕ್ಕೇರುತ್ತಲೇ ತನ್ನ ಬಣ್ಣ ಬದಲಾಯಿಸಿದ್ದಾನೆ.

ಹಳದಿ ಗುಲಾಬಿ, ನೀಲಿ, ಕೆಂಪು, ಕಡು ಕೆಂಪು, ಕಡು ಕಪ್ಪು ಹೀಗೆ ವರ್ಣರಂಜಿತನಾಗಿ ಬಾನಂಗಳದಲ್ಲಿ ದಿನ ಕಳೆದ ಶಶಿ ಬಣ್ಣದೋಕುಳಿಯೆನ್ನೇ ಎರಚಿದ. ಅಲ್ಲಲ್ಲಿ ಮೋಡ, ಮಳೆಯ ಅಡೆತಡೆಯಲ್ಲಿ ಅದ್ಭುತವನ್ನು ಕಣ್ತುಂಬಿಕೊಳ್ಳಲು ಆಗದೇ ಕೆಲವರು ನಿರಾಸೆರಾಗಿದ್ದೂ ಉಂಟು. ದಾವಣಗೆರೆ, ಕೊಪ್ಪಳದಲ್ಲಿ ಕೆಂಪೇರಿದ ಚಂದಿರ ದೂರದ ಗ್ರೀಕ್‍ನ ಅಥೆನ್ಸ್, ಇಸ್ರೇಲ್, ಅಬುದಾಭಿ, ಸ್ವಿಟ್ಜರ್ಲೆಂಡ್, ದಕ್ಷಿಣ ಆಫ್ರಿಕಾ ಹೀಗೆ ಭೂ ಮಂಡಲದ ಬಹುತೇಕ ಎಲ್ಲೆಡೆಯೂ ರಂಗುರಂಗಾಗಿ ಆವರಿಸಿಕೊಂಡ.

             ಬೆಂಗಳೂರು

ಸೂರ್ಯ-ಚಂದ್ರರ ನಡುವೆ ಭೂಮಿ ಬಂದು ಗ್ರಹಣ ಸಂಭವಿಸಿದರೆ, ಕೆಂಪು ಗ್ರಹವೆಂದೇ ಕರೆಸಿಕೊಳ್ಳುವ ಮಂಗಳ 15 ವರ್ಷಗಳ ಬಳಿಕ ಮೊದಲ ಬಾರಿಗೆ ಭೂಮಿಯ ಸಮೀಪದಲ್ಲೇ ಹಾದುಹೋಗಿ ಗ್ರಹಣವನ್ನು ಮತ್ತಷ್ಟು ಕಳೆಗಟ್ಟಿಸಿತು. ರಾತ್ರಿ 10 ಗಂಟೆಗೆ 44 ನಿಮಿಷಕ್ಕೆ ಶುರುವಾದ ಗ್ರಹಣದಿಂದ ಶಶಿಗೆ ಮೋಕ್ಷ ಸಿಕ್ಕಿದ್ದು ಬೆಳಗ್ಗೆ 4 ಗಂಟೆ 58 ನಿಮಿಷಕ್ಕೆ. ಸಂಪೂರ್ಣ ಗ್ರಹಣಕ್ಕೆ ಸಾಕ್ಷಿಯಾಗಿದ್ದು ರಾತ್ರಿ 1 ಗಂಟೆಯಿಂದ ಮಧ್ಯರಾತ್ರಿ 2 ಗಂಟೆ 43 ನಿಮಿಷದವರೆಗೆ. ಇದು ಖಗೋಳ ಜಗತ್ತಲ್ಲೇ ಅತ್ಯಂತ ದೀರ್ಘಾವಧಿ ಸಂಪೂರ್ಣ ಗ್ರಹಣ. ಇನ್ನೊಂದು ಪೂರ್ಣ ಚಂದ್ರಗ್ರಹಣಕ್ಕೆ ನಾವು ಇನ್ಹತ್ತು ವರ್ಷ ಕಾಯಬೇಕಾಗಿದೆ.

ದಾವಣಗೆರೆ

Share This Article
Leave a Comment

Leave a Reply

Your email address will not be published. Required fields are marked *