ಬೆಂಗ್ಳೂರಲ್ಲಿ ಅದ್ಧೂರಿ ಕರಗ ಮಹೋತ್ಸವ

Public TV
1 Min Read

ಬೆಂಗಳೂರು: ಮಹಾನಗರಿಯ ಬಹುದೊಡ್ಡ ಹಬ್ಬ ಅಂದ್ರೆ ಅದು ಕರಗ ಮಹೋತ್ಸವ. ವಿಶ್ವ ವಿಖ್ಯಾತ ಬೆಂಗಳೂರು ಕರಗ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.

ಈ ಬಾರಿಯ ಕರಗವನ್ನು ಅರ್ಚಕ ಜ್ಞಾನೇಂದ್ರ ಅವರು ಹೊತ್ತಿದ್ರು. ದ್ರೌಪದಿ ದೇವಿಯ ಪ್ರತೀಕವಾಗಿ ನಡೆಯುವ ಈ ಕರಗ ಧರ್ಮರಾಯ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮಧ್ಯರಾತ್ರಿ 1.40 ನಿಮಿಷಕ್ಕೆ ಸರಿಯಾಗಿ ದೇವರ ಸನ್ನಿಧಿಯಿಂದ ಹೊರ ಬಂತು. ದೇವಸ್ಥಾನವನ್ನು ಮೂರು ಸುತ್ತು ಹಾಕಿ ರಥಕ್ಕೆ ಪೂಜೆ ಸಲ್ಲಿಸಿ ಕರಗ ಸಾಗಿತು.

ಸಿಎಂ ಸಿದ್ದರಾಮಯ್ಯ, ಸಂಸದ ಅನಂತಕುಮಾರ್, ಮೇಯರ್ ಪದ್ಮಾವತಿ, ಶಾಸಕರಾದ ಆರ್‍ವಿ ದೇವರಾಜ್, ಹ್ಯಾರಿಸ್, ಅರವಿಂದ್ ಲಿಂಬಾವಳಿ ಕರಗ ಮಹೋತ್ಸವದ ಸಂಭ್ರಮಕ್ಕೆ ಸಾಕ್ಷಿಯಾದ್ರು.

1.40ರ ಸಮಯಕ್ಕೆ ಸರಿಯಾಗಿ ಕರಗೋತ್ಸವ ಧರ್ಮರಾಯನ ಸನ್ನಿಧಿಯಾದ ತಿಗಳರ ಪೇಟೆಯಿಂದ ಹೊರಟು, ಚಿಕ್ಕಪೇಟೆ, ಬಳೆಪೇಟೆ ಮಾರ್ಗವಾಗಿ ಶಕ್ತಿ ಗಣಪತಿ, ಮುತ್ಯಾಲಮ್ಮ, ಅಣ್ಣಮ್ಮ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಲಾಯ್ತು. ನಗರದ ವಿವಿಧ ರಾಜ ಬೀದಿಗಳಲ್ಲಿ ಮೆರವಣಿಗೆ ಮುಗಿಸಿದ ಕರಗ, ಮರಳಿ ಧರ್ಮರಾಯ ಸ್ವಾಮಿ ದೇವಾಲಯಕ್ಕೆ ತಲುಪಿ ಧರ್ಮರಾಯನಿಗೆ ಪೂಜೆ ಸಲ್ಲಿಸುವ ಮೂಲಕ ಕರಗ ಮಹೋತ್ಸವಕ್ಕೆ ತೆರೆಬಿತ್ತು.

ಕರಗ ಮಹೋತ್ಸವದ ಹಿನ್ನಲೆ ಸಾವಿರಾರು ಭಕ್ತರು ದೂರದ ಊರುಗಳಿಂದ ಬಂದಿದ್ರು. ಯಾವುದೇ ಅಡಚಣೆ ಇಲ್ಲದಂತೆ ಪೊಲೀಸರು ಕೂಡ ಬಿಗಿ ಭದ್ರತೆ ಒದಗಿಸಿದ್ರು.

ಏಳನೇ ಬಾರಿಗೆ ಕರಗ ಹೊತ್ತಿದ್ದ ಅರ್ಚಕ ಜ್ಞಾನೇಂದ್ರ ಯಾವುದೇ ತೊಡಕುಗಳಿಲ್ಲದೇ ಕರಗ ಮಹೋತ್ಸವನ್ನು ನೆರವೇರಿಸಿದ್ರು. ಭಕ್ತರು ದ್ರೌಪದಮ್ಮನ ಕರಗ ಮತ್ತು ಧರ್ಮರಾಯಸ್ವಾಮಿಯ ಆರ್ಶಿವಾದವನ್ನು ಪಡೆದು ಕರಗ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಿದ್ರು.

  

        

Share This Article
Leave a Comment

Leave a Reply

Your email address will not be published. Required fields are marked *