‌World Cup Semifinal: 48 ವರ್ಷಗಳ ವಿಶ್ವಕಪ್‌ ಇತಿಹಾಸದಲ್ಲಿ ಹೊಸ ಮೈಲುಗಲ್ಲು‌ ಸ್ಥಾಪಿಸಿದ ಶಮಿ.!

Public TV
2 Min Read

ಮುಂಬೈ: ಏಕದಿನ ವಿಶ್ವಕಪ್‌ ಟೂರ್ನಿಯ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಮೊಹಮ್ಮದ್‌ ಶಮಿ (Mohammed Shami) 50 ವಿಕೆಟ್‌ ಪಡೆದ ಭಾರತದ ಮೊದಲ ಬೌಲರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಶಮಿ 32.2 ಓವರ್‌ನಲ್ಲಿ ಕೇನ್‌ ವಿಲಿಯಮ್ಸನ್‌ (Kane Williamson) ಅವರನ್ನು ಔಟ್‌ ಮಾಡುವ ಮೂಲಕ ಈ ಮಹತ್ವದ ಮೈಲುಗಲ್ಲು ಸ್ಥಾಪಿಸಿದರು.

ಕೇವಲ 17 ಇನ್ನಿಂಗ್ಸ್‌ಗಳಲ್ಲೇ ಶಮಿ ಈ ಸಾಧನೆ ಮಾಡಿರುವುದು ವಿಶೇಷ. ಆಸ್ಟ್ರೇಲಿಯಾದ ಮೆಚೆಲ್‌ ಸ್ಟಾರ್ಕ್‌ 19 ಇನ್ನಿಂಗ್ಸ್‌ಗಲ್ಲಿ 50 ವಿಕೆಟ್‌ ಪಡೆದ ಸಾಧನೆ ಮಾಡಿದ್ದರು.

ಅದಕ್ಕಿಂತಲೂ ಮುಖ್ಯವಾಗಿ 48 ವರ್ಷಗಳ ವಿಶ್ವಕಪ್ ಇತಿಹಾಸದಲ್ಲಿ (World Cup History) ಅತಿಹೆಚ್ಚು ಬಾರಿ 5 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಆಸ್ಟ್ರೇಲಿಯಾದ ಮಿಚೆಲ್‌ ಸ್ಟಾರ್ಕ್‌ 3 ಬಾರಿ ಈ ಸಾಧನೆ ಮಾಡಿ 2ನೇ ಸ್ಥಾನದಲ್ಲಿದ್ದಾರೆ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಶಮಿ 18 ರನ್‌ ಬಿಟ್ಟುಕೊಟ್ಟು 5 ವಿಕೆಟ್‌ ಪಡೆದಿದ್ದರು.

ಇದಕ್ಕೂ ಮುನ್ನ ಧರ್ಮಶಾಲಾ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್‌ (New Zealand) ವಿರುದ್ಧದ ಪಂದ್ಯದಲ್ಲಿ 54 ರನ್‌ ಕೊಟ್ಟು 5 ವಿಕೆಟ್‌ ಕಿತ್ತಿದ್ದರು. ಇಂದು ಕಿವೀಸ್‌ ವಿರುದ್ಧ 5 ವಿಕೆಟ್‌ ಕಿತ್ತು ಮತ್ತೊಂದು ವಿಶೇಷ ಸಾಧನೆ ಮಾಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ರವೀಂದ್ರ ಜಡೇಜಾ 33 ರನ್‌ ಬಿಟ್ಟುಕೊಟ್ಟು, ಶಾಹೀನ್‌ ಶಾ ಅಫ್ರಿದಿ ಆಸ್ಟ್ರೇಲಿಯಾ ವಿರುದ್ಧ 54 ರನ್‌ ಬಿಟ್ಟುಕೊಟ್ಟು 5 ವಿಕೆಟ್‌ ಪಡೆದಿದ್ದು ಇದೇ ಟೂರ್ನಿಯಲ್ಲಿ ಎಂಬಿದನ್ನು ಮರೆಯುವಂತಿಲ್ಲ. ಇದನ್ನೂ ಓದಿ: ಸೆಮಿಸ್‌ನಲ್ಲೂ ಶಮಿ ಮಿಂಚು; ಕಿವೀಸ್‌ ವಿರುದ್ಧ 70 ರನ್‌ಗಳ ಭರ್ಜರಿ ಜಯ – 4ನೇ ಬಾರಿಗೆ ವಿಶ್ವಕಪ್‌ ಫೈನಲ್‌ಗೆ ಭಾರತ ಎಂಟ್ರಿ

ಈ ಸಾಧನೆಯೊಂದಿಗೆ ಮೊಹಮ್ಮದ್‌ ಶಮಿ ವಿಶ್ವಕಪ್ ಪಂದ್ಯಾವಳಿಗಳಲ್ಲಿ 50 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಬೌಲರ್ಸ್‌ಗಳ ಎಲೈಟ್‌ ಪಟ್ಟಿ ಸೇರಿದ್ದು, ಟಾಪ್‌-10 ಪಟ್ಟಿಯಲ್ಲಿ 6ನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಗ್ಲೇನ್‌ ಮೆಕ್‌ಗ್ರಾತ್‌ 71 ವಿಕೆಟ್, ಮುತ್ತಯ್ಯ ಮುರಳೀಧರನ್ 68 ವಿಕೆಟ್, ಮಿಚೆಲ್ ಸ್ಟಾರ್ಕ್ 59 ವಿಕೆಟ್, ಲಸಿತ್ ಮಾಲಿಂಗ 56 ವಿಕೆಟ್, ವಾಸಿಂ ಅಕ್ರಮ್ 55 ವಿಕೆಟ್ ಪಡೆದಿದು ಕ್ರಮವಾಗಿ ಮೊದಲ 5 ಸ್ಥಾನಗಳಲ್ಲಿದ್ದರೆ 54 ವಿಕೆಟ್‌ ಪಡೆದ ಶಮಿ ವಿಶ್ವದ ಟಾಪ್‌ ಬೌಲರ್‌ಗಳ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದಾರೆ. ಕೇವಲ 17 ಪಂದ್ಯ 17 ಇನ್ನಿಂಗ್ಸ್‌ಗಳಲ್ಲೇ ಶಮಿ ಈ ಸಾಧನೆ ಮಾಡಿರುವುದು ವಿಶೇಷ. ಇದನ್ನೂ ಓದಿ: ವಿಶ್ವದಾಖಲೆಯ ಶತಕ ಸಿಡಿಸಿದ ಕೊಹ್ಲಿಗೆ ಪಾಕ್‌ ಕ್ರಿಕೆಟಿಗನಿಂದ ʻಚಕ್ರವರ್ತಿʼ ಬಿರುದು – ಅಭಿನಂದನೆಗಳ ಮಹಾಪೂರ

Share This Article