ನೆದರ್ಲ್ಯಾಂಡ್ಸ್ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ – ಅಫ್ಘಾನ್‌ ಸೆಮಿಗೆ ಪ್ರವೇಶಿಸುತ್ತಾ? ಲೆಕ್ಕಾಚಾರ ಏನು?

Public TV
2 Min Read

ಲಕ್ನೋ: ವಿಶ್ವಕಪ್‌ ಕ್ರಿಕೆಟ್‌ನಲ್ಲಿ (world Cup Cricket) ಬೌಲಿಂಗ್‌ ಮತ್ತು ಬ್ಯಾಟಿಂಗ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಅಫ್ಘಾನಿಸ್ತಾನ (Afghanistan) ಕ್ರಿಕೆಟ್‌ ಶಿಶು ನೆದರ್ಲ್ಯಾಂಡ್ಸ್ (Netherlands) ವಿರುದ್ಧ 7 ವಿಕೆಟ್‌ಗಳ ಜಯ ಸಾಧಿಸಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ನೆದರ್ಲ್ಯಾಂಡ್ಸ್ 46.3 ಓವರ್‌ಗಳಲ್ಲಿ 179 ರನ್‌ಗಳಿಗೆ ಆಲೌಟ್‌ ಆಯ್ತು. ಸುಲಭದ ಸವಾಲನ್ನು ಬೆನ್ನಟ್ಟಿದ ಅಫ್ಘಾನಿಸ್ತಾನ ಇನ್ನೂ 111 ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್‌ ನಷ್ಟಕ್ಕೆ 181 ರನ್‌ ಹೊಡೆಯುವ ಮೂಲಕ ಗೆಲುವು ದಾಖಲಿಸಿತು. ಈ ಗೆಲುವಿನೊಂದಿಗೆ ಸೆಮಿಫೈನಲ್‌ (Semi Final) ಪ್ರವೇಶದ ಕನಸನ್ನು ಜೀವಂತವಾಗಿಟ್ಟುಕೊಂಡಿತು.

ಅಫ್ಘಾನ್‌ ಪರವಾಗಿ ನಾಯಕ ಹಶ್ಮತುಲ್ಲಾ ಶಾಹಿದಿ ಔಟಾಗದೇ 56 ರನ್‌ (64 ಎಸೆತ, 6 ಬೌಂಡರಿ), ರಹಮತ್ ಶಾ 52 ರನ್‌ (54 ಎಸೆತ, 8 ಬೌಂಡರಿ), ಅಜ್ಮತುಲ್ಲಾ ಔಟಾಗದೇ 31 ರನ್‌ (28 ಎಸೆತ, 3 ಬೌಂಡರಿ) ಹೊಡೆದರು.

ಸೆಮಿ ಆಸೆ ಜೀವಂತ
ಭರ್ಜರಿ ಗೆಲುವಿನೊಂದಿಗೆ ಅಫ್ಘಾನಿಸ್ತಾನದ ಸೆಮಿ ಪ್ರವೇಶಕ್ಕೆ ಎರಡು ಹಜ್ಜೆ ಮಾತ್ರ ಬಾಕಿಯಿದ್ದು, ಅಂಕಪಟ್ಟಿಯಲ್ಲಿ 4 ಜಯದೊಂದಿಗೆ 8 ಅಂಕ ಪಡೆಯುವ ಅಫ್ಘಾನಿಸ್ತಾನ 5ನೇ ಸ್ಥಾನಕ್ಕೆ ಜಿಗಿದಿದೆ.

ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ಗಳು 8 ಅಂಕ ಪಡೆದರೂ ನೆಟ್‌ ರನ್‌ ರೇಟ್‌ನಿಂದಾಗಿ ಕ್ರಮವಾಗಿ ಮೂರು ಮತ್ತು ನಾಲ್ಕನೇಯ ಸ್ಥಾನವನ್ನು ಪಡೆದಿದೆ.  ಇದನ್ನೂ ಓದಿ: ಟೀಂ ಇಂಡಿಯಾ ಬೌಲರ್‌ಗಳಿಗೆ ಸ್ಪೆಷಲ್‌ ಬಾಲ್‌ ಕೊಡ್ತಿದ್ದಾರೆ – ಗೆಲುವಿನ ಬಗ್ಗೆ ಪಾಕ್‌ ಮಾಜಿ ಕ್ರಿಕೆಟಿಗ ಟೀಕೆ

ಆಸ್ಟ್ರೇಲಿಯಾಗೆ (Australia) ಇನ್ನೂ 3 ಪಂದ್ಯಗಳಿದ್ದರೆ ಅ‍ಫ್ಘಾನಿಸ್ತಾನ ಮತ್ತು ನ್ಯೂಜಿಲೆಂಡ್‌ಗೆ (New Zealand) 2 ಪಂದ್ಯಗಳಿವೆ. ನ.7 ರಂದು ಅಸ್ಟ್ರೇಲಿಯಾ, ನ.10 ರಂದು ದಕ್ಷಿಣ ಆಫ್ರಿಕಾದ ವಿರುದ್ಧ ಅಫ್ಘಾನಿಸ್ತಾನ ಸೆಣೆಸಾಡಲಿದೆ. ಈ ಎರಡು ಪಂದ್ಯಗಳನ್ನು ಗೆದ್ದರೆ ಅಫ್ಘಾನಿಸ್ತಾನ ಸೆಮಿ ಪ್ರವೇಶಿಸುವ ಸಾಧ್ಯತೆ ಹೆಚ್ಚಿದೆ.

ಶನಿವಾರ ಬೆಂಗಳೂರಿನಲ್ಲಿ ಪಾಕಿಸ್ತಾನ (Pakistan) ಮತ್ತು ನ್ಯೂಜಿಲೆಂಡ್‌ ಮಧ್ಯೆ ಪಂದ್ಯ ಇದ್ದರೆ ಅಹಮದಾಬಾದ್‌ನಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ಮಧ್ಯೆ ಪಂದ್ಯ ನಡೆಯಲಿದೆ. ನ್ಯೂಜಿಲೆಂಡ್‌ ಮತ್ತು ಆಸ್ಟ್ರೇಲಿಯಾ ಸೋತರೆ ಅಫ್ಘಾನಿಸ್ತಾನಕ್ಕೆ ಲಾಭ. ಒಂದು ವೇಳೆ ನ್ಯೂಜಿಲೆಂಡ್‌ ಮತ್ತು ಆಸ್ಟ್ರೇಲಿಯಾ ಗೆದ್ದರೆ ಅಫ್ಘಾನಿಸ್ತಾನದ ಉತ್ತಮ ರನ್‌ರೇಟ್‌ನಿಂದ ಉಳಿದ ಎರಡು ಪಂದ್ಯಗಳನ್ನು ಗೆಲ್ಲಬೇಕಾಗುತ್ತದೆ.

ಅಫ್ಘಾನಿಸ್ತಾನ ಸೆಮಿ ಭವಿಷ್ಯ ನ.7 ರಂದು ತೀರ್ಮಾನವಾಗಲಿದೆ. ಆಸ್ಟ್ರೇಲಿಯಾ ವಿರುದ್ಧ ಪಂದ್ಯ ಗೆದ್ದರೆ ಸಮಸ್ಯೆ ಇಲ್ಲ. ಈ ಪಂದ್ಯವನ್ನು ಸೋತರೆ ಉತ್ತಮ ರನ್‌ ರೇಟ್‌ ಇದ್ದರೆ ಮಾತ್ರ ಸೆಮಿ ಪ್ರವೇಶಿಸಬಹುದು. ಇನ್ನೊಂದು ಕಡೆಯಲ್ಲಿ ಪಾಕಿಸ್ತಾನಕ್ಕೂ ಎರಡು ಪಂದ್ಯಗಳಿವೆ. ಈ ಕಾರಣಕ್ಕೆ ಸೆಮಿ ಪ್ರವೇಶಕ್ಕೆ ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌, ಪಾಕಿಸ್ತಾನದ ಮಧ್ಯೆ ನೇರ ಸ್ಪರ್ಧೆ ನಡೆಯುತ್ತಿದೆ.


Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್