World Cup 2023: ಗುಡ್‌ನ್ಯೂಸ್‌ – ಪಾಕ್‌ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಸೇರಲಿದ್ದಾರೆ ಗಿಲ್‌

Public TV
1 Min Read

ಅಹಮದಾಬಾದ್‌: ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಟೀಂ ಇಂಡಿಯಾ (Team India) ಸ್ಟಾರ್‌ ಪ್ಲೇಯರ್‌ ಶುಭಮನ್‌ ಗಿಲ್‌ (Shubman Gill) ಆರೋಗ್ಯದಲ್ಲಿ ಚೇತರಿಸಿಕೊಳ್ಳುತ್ತಿದ್ದು, ಇಂದು (ಅ.12) ಚೈನ್ನೈನಿಂದ ಅಹಮದಾಬಾದ್‌ಗೆ ಹಾರಲು ಸಜ್ಜಾಗಿದ್ದಾರೆ.

ಬಿಸಿಸಿಐ (BCCI) ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಗಿಲ್‌, ಇಂದು ವಾಣಿಜ್ಯ ವಿಮಾನದಲ್ಲಿ ಚೆನ್ನೈನಿಂದ ಅಹಮದಾಬಾದ್‌ಗೆ ಪ್ರಯಾಣ ಬೆಳೆಸಲಿದ್ದು, ಪಾಕಿಸ್ತಾನ (Pakistan) ವಿರುದ್ಧ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಸೇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ವಿಶ್ವಕಪ್‌ (World Cup) ಟೂರ್ನಿಯ ಆರಂಭಿಕ ಎರಡು ಪಂದ್ಯಗಳನ್ನು ಕಳೆದುಕೊಂಡಿರುವ ಗಿಲ್‌, ಶೀಘ್ರದಲ್ಲೇ ಪ್ಲೇಯಿಂಗ್‌-11ನಲ್ಲಿ ಸ್ಥಾನ ಪಡೆದುಕೊಳ್ಳಲು ಉತ್ಸುಕರಾಗಿದ್ದಾರೆ. ಆದ್ದರಿಂದ ವೈದ್ಯಕೀಯ ತಂಡವೂ ಆಟಗಾರನ ಮೇಲೆ ಹದ್ದಿನ ಕಣ್ಣಿಟ್ಟಿದೆ.

ಎರಡು ದಿನಗಳ ಹಿಂದೆಯಷ್ಟೇ ಶುಭಮನ್‌ ಗಿಲ್‌ ಅವರ ಆರೋಗ್ಯ ಸ್ಥಿತಿಯಲ್ಲಿ ವ್ಯತ್ಯಾಸ ಕಂಡುಬಂದಿತ್ತು. ಅವರ ಪ್ಲೇಟ್‌ಲೆಟ್‌ಗಳು (ರಕ್ತದ ಕಣಗಳು) ಪ್ರತಿ ಮೈಕ್ರೋಲೀಟರ್‌ಗೆ 1,00,000 ಕ್ಕಿಂತ ಕಡಿಮೆಯಾದ ನಂತರ ಅವರನ್ನು ಚೆನ್ನೈನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ವಲ್ಪ ಪ್ರಮಾಣದಲ್ಲಿ ಚೇತರಿಕೆ ಕಂಡುಬಂದ ನಂತರ ಅದೇ ದಿನ ಡಿಸ್ಚಾರ್ಜ್‌ ಮಾಡಲಾಗಿ, ಹೋಟೆಲ್‌ನಲ್ಲೇ ಇರಿಸಿ ಆರೈಕೆ ಮಾಡುವುದನ್ನು ವೈದ್ಯಕೀಯ ತಂಡ ಮುಂದುವರಿಸಿತ್ತು. ಇದನ್ನೂ ಓದಿ: ಶತಕ ಸಿಡಿಸಿ ಎರಡು ದಾಖಲೆ ಬರೆದ ಮಲಾನ್‌ – ಇಂಗ್ಲೆಂಡ್‌ಗೆ 137ರನ್‌ಗಳ ಭರ್ಜರಿ ಜಯ

ಸದ್ಯ ಶುಭಮನ್‌ ಗಿಲ್‌ ಆರೋಗ್ಯದಲ್ಲಿ 70-80% ಚೇತರಿಕೆ ಕಂಡುಬಂದಿದ್ದು, ಯಾವಾಗ ಬೇಕಾದರೂ ತಂಡಕ್ಕೆ ಮರಳಬಹುದು ಎಂದು ಬ್ಯಾಟಿಂಗ್‌ ಕೋಚ್‌ ವಿಕ್ರಮ್‌ ರಾಥೋರ್‌ ಹೇಳಿದ್ದಾರೆ. ಇದನ್ನೂ ಓದಿ: ಲಂಕಾ ವಿರುದ್ಧ ಮೋಸದಾಟವಾಡಿತಾ ಪಾಕ್‌? – ಮತ್ತೆ ಮತ್ತೆ ಟೀಕೆಗೆ ಗುರಿಯಾಗ್ತಿರೋದೇಕೆ?

ಇದೇ ಅಕ್ಟೋಬರ್‌ 14 ರಂದು ಬಹುನಿರೀಕ್ಷಿತ ಭಾರತ-ಪಾಕಿಸ್ತಾನ ನಡುವಿನ ಹೈವೋಲ್ಟೇಜ್‌ ಪಂದ್ಯ ನಡೆಯಲಿದೆ. ಇದನ್ನೂ ಓದಿ: ಪಾಕ್ ನೆಲದಲ್ಲೇ ಆಡಿದ ಫೀಲ್ ನೀಡಿದೆ – ಅಭಿಮಾನಿಗಳ ಬೆಂಬಲಕ್ಕೆ ಪಾಕ್ ಆಟಗಾರ ರಿಜ್ವಾನ್ ಪ್ರತಿಕ್ರಿಯೆ

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್