ಬ್ಯಾಟಿಂಗ್, ಬೌಲಿಂಗ್‍ನಲ್ಲಿ ನಮ್ಮ ತಂಡ ದಾಖಲೆ ಸೃಷ್ಟಿಸುತ್ತದೆ: ಪ್ರಿಯಾಂಕಾ ಗಾಂಧಿ

Public TV
1 Min Read

– ನಿರ್ಭೀತಿಯಿಂದ ಆಟವಾಡಿ ಅಂದ್ರು ರಾಗಾ

ಹೈದರಾಬಾದ್: ಇಂದು ವಿಶ್ವಕಪ್ (World Cup 2023) ಫೈನಲ್ ಪಂದ್ಯ ನಡೆಯಲಿದ್ದು, ಬ್ಯಾಟಿಂಗ್ (Batting) ಹಾಗೂ ಬೌಲಿಂಗ್‍ನಲ್ಲಿ (Bowling) ನಮ್ಮ ತಂಡ ದಾಖಲೆ ಸೃಷ್ಟಿಸುತ್ತದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ (Priyanka Gandhi) ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತೆಲಂಗಾಣದಲ್ಲಿ ವಿಶ್ವಕಪ್ ಫೈನಲ್ ಮ್ಯಾಚ್ ಕುರಿತು ಮಾತನಾಡಿದ ಅವರು, ಇಂದು ವರ್ಲ್ಡ್ ಕಪ್ ಫೈನಲ್ ಮ್ಯಾಚ್ ಇದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ತಮ್ಮ ಟೀಂ ದಾಖಲೆ ಬರೆಯುತ್ತದೆ. ಇದು ಒಗ್ಗಟ್ಟಿನ ಸಂಕೇತವಾಗಿದೆ. ಟೀಂ ಇಂಡಿಯಾಗೆ ‌(Team India) ಶುಭಾಶಯ ಎಂದು ಹೇಳಿದ್ದಾರೆ.

ಇತ್ತ ಕೈ ನಾಯಕ ರಾಹುಲ್ ಗಾಂಧಿ (Rahul Gandhi) ಕೂಡ ಟೀಂ ಇಂಡಿಯಾಗೆ ಶುಭಾಶಯ ತಿಳಿಸಿದ್ದಾರೆ. ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು ಬ್ಲೂ ಬಾಯ್ಸ್ (Bkue Boys) ಗೆ ಶುಭಾಶಯಗಳು. ಒಂದು ಬಿಲಿಯನ್‍ಗಿಂತಲೂ ಹೆಚ್ಚು ಹೃದಯಗಳು ನಿಮಗಾಗಿ ಮಿಡಿಯುತ್ತಿವೆ. ಹೀಗಾಗಿ ನಿರ್ಭೀತಿಯಿಂದ ಆಟವಾಡಿ ಗೆದ್ದು ಬನ್ನಿ. ವಿಶ್ವಕಪ್ ಮನೆಗೆ ತನ್ನಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವಿಶ್ವಕಪ್‍ನೊಂದಿಗೆ ಮಗ ಮನೆಗೆ ಮರಳುತ್ತಾನೆ: ಶಮಿ ತಾಯಿ ವಿಶ್ವಾಸ

ಭಾರತ ಹಾಗೂ ಆಸ್ಟ್ರೇಲಿಯಾ (IND Vs AUS) ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದು ಮಧ್ಯಾಹ್ನ 2 ಗಂಟೆಗೆ ಅಹ್ಮದಾಬಾದ್‍ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium Ahemadabad) ಹಣಾಹಣಿ ನಡೆಯಲಿದ್ದು, ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸೆ ಸೇರಿದಂತೆ ಭಾರತದ ಕ್ರಿಕೆಟ್ ದಿಗ್ಗಜರು, ಟೀಮ್ ಇಂಡಿಯಾ ಆಟಗಾರರ ಕುಟುಂಬದವರು, ಬಾಲಿವುಡ್, ಸ್ಯಾಂಡಲ್‍ವುಡ್ ನಟ-ನಟಿಯರು ಭಾರತ ಗೆಲ್ಲಲಿ ಎಂದು ಶುಭಕೋರಿದ್ದಾರೆ. ಮತ್ತೊಂದೆಡೆ ಟೀಮ್ ಇಂಡಿಯಾ ಗೆಲುವಿಗೆ ದೇಶಾದ್ಯಂತ ಹೋಮ-ಹವನಗಳು ನಡೆಯುತ್ತಿದೆ.

Share This Article