World Cup 2023: ಮಾರಕ ಬೌಲಿಂಗ್‌ ದಾಳಿಗೆ ತಿಣುಕಾಡಿದ ಭಾರತ – ಇಂಗ್ಲೆಂಡ್‌ಗೆ 230 ರನ್‌ ಗುರಿ

By
2 Min Read

ಲಕ್ನೋ: ಮಾರಕ ಬೌಲಿಂಗ್‌ ದಾಳಿ ನಡುವೆಯೂ ಸವಾಲಿನ ಮೊತ್ತ ಕಲೆಹಾಕಿರುವ ಟೀಂ ಇಂಡಿಯಾ (Team India) 50 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 229 ರನ್‌ ಗಳಿಸಿ ಎದುರಾಳಿ ಇಂಗ್ಲೆಂಡ್‌ (England) ತಂಡಕ್ಕೆ 230 ರನ್‌ಗಳ ಗುರಿ ನೀಡಿದೆ.

ಲಕ್ನೋದ ಏಕನಾ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದು ಮೊದಲು ಫೀಲ್ಡಿಂಗ್‌ ಆಯ್ದುಕೊಂಡ ಇಂಗ್ಲೆಂಡ್‌ ತಂಡವು ಬ್ಯಾಟಿಂಗ್‌ ಮಾಡುವ ಅವಕಾಶವನ್ನು ಟೀಂ ಇಂಡಿಯಾಕ್ಕೆ ಬಿಟ್ಟುಕೊಟ್ಟಿತು. ಉತ್ತಮ ಫಾರ್ಮ್‌ ಹೊಂದಿರುವ ಟೀಂ ಇಂಡಿಯಾ ಸ್ಪಿನ್‌ ಪಿಚ್‌ನಲ್ಲಿ ಬೃಹತ್‌ಮೊತ್ತ ಕಲೆಹಾಕುವ ಗುರಿ ಹೊಂದಿತ್ತು. ಆದ್ರೆ ಅಗ್ರಕ್ರಮಾಂಕದ ಬ್ಯಾಟರ್‌ಗಳಾದ ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ (Virat Kohli), ಶ್ರೇಯಸ್‌ ಅಯ್ಯರ್‌ ಅಲ್ಪ ಮೊತ್ತಕ್ಕೆ ಕೈಕೊಟ್ಟ ಪರಿಣಾಮ ಟೀಂ ಇಂಡಿಯಾ 50 ಓವರ್‌ಗಳಲ್ಲಿ ಕೇವಲ 229 ರನ್‌ ಗಳಿಸಲಷ್ಟೇ ಸಾಧ್ಯವಾಯಿತು.

ಶುಭಮನ್‌ ಗಿಲ್‌ 9 ರನ್‌, ಶ್ರೇಯಸ್‌ ಅಯ್ಯರ್‌ 4 ರನ್‌ ಗಳಿಸಿದ್ರೆ, ವಿರಾಟ್‌ ಕೊಹ್ಲಿ 9 ಎಸೆತಗಳಲ್ಲಿ ಒಂದೂ ರನ್‌ ಗಳಿಸದೇ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದರು. ಆದ್ರೆ 4ನೇ ವಿಕೆಟ್‌ಗೆ ಜೊತೆಯಾದ ಕೆ.ಎಲ್‌ ರಾಹುಲ್‌ ಹಾಗೂ ರೋಹಿತ್‌ ಶರ್ಮಾ (Rohit Sharma) ಜೋಡಿ 111 ಎಸೆತಗಳಲ್ಲಿ 91 ರನ್‌ಗಳ ಜೊತೆಯಾಟ ನೀಡಿ ಚೇತರಿಕೆ ಕಂಡಿತ್ತು. ಕೆ.ಎಲ್‌ ರಾಹುಲ್‌ (KL Rahul) 58 ಎಸೆತಗಳಲ್ಲಿ 39 ರನ್‌ ಗಳಿಸಿ ಔಟಾಗುತ್ತಿದ್ದಂತೆ ಟೀಂ ಇಂಡಿಯಾ ಒಂದೊಂದೇ ವಿಕೆಟ್‌ ಕಳೆದುಕೊಂಡಿತು.

ಆಂಗ್ಲರ ವಿರುದ್ಧ ಹೋರಾಡಿದ ರೋಹಿತ್‌ ಶರ್ಮಾ 101 ಎಸೆತಗಳಲ್ಲಿ 87 ರನ್‌ (3 ಸಿಕ್ಸರ್‌, 10 ಬೌಂಡರಿ) ಗಳಿಸಿದ್ರೆ, ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಸೂರ್ಯಕುಮಾರ್‌ ಯಾದವ್‌ (Suryakumar Yadav) 47 ಎಸೆತಗಳಲ್ಲಿ 49 ರನ್‌ (1 ಸಿಕ್ಸರ್‌, 4 ಬೌಂಡರಿ) ಗಳಿಸಿ ಅರ್ಧಶತಕದಿಂದ ವಂಚಿತರಾದರು. ಕೊನೆಯಲ್ಲಿ ಜಸ್ಪ್ರೀತ್‌ ಬುಮ್ರಾ 16 ರನ್‌, ರವೀಂದ್ರ ಜಡೇಜಾ 8 ರನ್‌, ಮೊಹಮ್ಮದ್‌ ಶಮಿ 1 ರನ್‌ ಗಳಿಸಿದ್ರೆ, ಕುಲ್ದೀಪ್‌ ಯಾದವ್ ‌9 ರನ್‌ ಗಳಿಸಿ ಕ್ರೀಸ್‌ನಲ್ಲಿ ಉಳಿದರು.

ಇಂಗ್ಲೆಂಡ್‌ ಪರ ಡೇವಿಡ್‌ ವಿಲ್ಲಿ (David Willey) 3 ವಿಕೆಟ್‌ ಕಿತ್ತರೆ, ಕ್ರಿಸ್‌ ವೋಕ್ಸ್‌ ಮತ್ತು ಆದಿಲ್‌ ರಶೀದ್‌ ತಲಾ 2 ವಿಕೆಟ್‌ ಹಾಗೂ ಮಾರ್ಕ್‌ವುಡ್‌ ಒಂದು ವಿಕೆಟ್‌ ಪಡೆದು ಮಿಂಚಿದರು.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್