ಕೆಲಸಕ್ಕೆ ಬರಲ್ಲ ಎಂದಿದ್ದಕ್ಕೆ ಕಾರ್ಮಿಕರ ಮೇಲೆ ಮನಬಂದಂತೆ ಥಳಿತ

Public TV
1 Min Read

ವಿಜಯಪುರ: ಕೆಲಸಕ್ಕೆ ಬರುವುದಿಲ್ಲ ಎಂದ ಕಾರ್ಮಿಕರಿಗೆ ಹಿಗ್ಗಾ ಮುಗ್ಗಾ ಥಳಿಸಿದ (Assult) ಘಟನೆ ವಿಜಯಪುರದ (Vijayapura)  ಗಾಂಧಿನಗರ ಏರಿಯಾದಲ್ಲಿರುವ ಇಟ್ಟಂಗಿ ಭಟ್ಟಿಯಲ್ಲಿ ನಡೆದಿದೆ.

ಮಾಲೀಕ ಖೇಮು ರಾಠೋಡ ಹಾಗೂ ಸಂಬಂಧಿಕರು ಮನ ಬಂದಂತೆ ಹಲ್ಲೆ ನಡೆಸಿದ್ದಾರೆ. ಸದಾಶಿವ ಮಾದರ, ಸದಾಶಿವ ಬಬಲಾದಿ, ಉಮೇಶ ಮಾದರ ಮೇಲೆ ಹಲ್ಲೆ ನಡೆದಿದ್ದು ಕಾರ್ಮಿಕರು ಈಗ ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರತಿದಿನ ಕಾರ್ಮಿಕರಿಗೆ 600 ರೂ. ಕೂಲಿ ನೀಡಲಾಗುತ್ತಿತ್ತು. ಕಳೆದ ಸಂಕ್ರಮಣದಂದು ಮನೆಗೆ ತೆರಳಿದ್ದ ಕಾರ್ಮಿಕರು ಮರಳಿ 16 ರಂದು ಇಟ್ಟಿಗೆ ಭಟ್ಟಿಗೆ ಬಂದಿದ್ದರು. ಬಂದ ಕಾರ್ಮಿಕರು ತಮ್ಮ ಸಾಮಾನುಗಳನ್ನು ಕೊಂಡೊಯ್ಯಲು ಮುಂದಾಗುತ್ತಿದ್ದರು.

ಈ ವಿಚಾರ ತಿಳಿದ ಮಾಲೀಕ ಬೇರೆ ಕಡೆ ಕೆಲಸಕ್ಕೆ ಹೋಗುತ್ತಿರುವುದು ಯಾಕೆ ಎಂದು ಹೇಳಿ ತನ್ನ ಜನರನ್ನು ಕರೆಸಿ ಹಲ್ಲೆ ಮಾಡಿಸಿದ್ದಾನೆ. ಮೂರು ದಿನ ಕೂಡಿ ಹಾಕಿ ಪೈಪ್‌ನಿಂದ ಬೆನ್ನು, ಕಾಲು, ಸೊಂಟದ ಮೇಲೆ  ಮನ ಬಂದಂತೆ ಥಳಿಸಿದ್ದಾರೆ.

  

Share This Article