ಭಾಷಣ ಮಾಡುತ್ತಲೇ ಮಲ್ಲಿಕಾರ್ಜುನ ಖರ್ಗೆ ಅಸ್ವಸ್ಥ – ಮೋದಿಯನ್ನ ಅಧಿಕಾರದಿಂದ ಕೆಳಗಿಳಿಸುವವರೆಗೆ ಸಾಯಲ್ಲ ಎಂದ ʻಕೈʼನಾಯಕ

Public TV
2 Min Read

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಥುವಾದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಇದ್ದಕ್ಕಿದ್ದಂತೆ ಮಾತನಾಡುವಾಗ ಅಸ್ವಸ್ಥರಾಗಿದ್ದಾರೆ. ಕೆಲ ಸಮಯದ ಬಳಿಕ ಮತ್ತೆ ವೇದಿಕೆಗೆ ಬಂದ ಅವರು ಮೋದಿ ವಿರುದ್ಧ ಗುಡುಗಿದ್ದಾರೆ. ಜೊತೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmi) ಪ್ರತ್ಯೇಕ ರಾಜ್ಯ ಸ್ಥಾನಮಾನ ಮರುಸ್ಥಾಪಿಸುತ್ತೇವೆ ಎಂಬುದಾಗಿಯೂ ಭರವಸೆ ನೀಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಅಂತಿಮ ಹಂತದ ಚುನಾವಣಾ ಪ್ರಚಾರ (Assembly Elections Campain) ಸಭೆಯಲ್ಲಿ ಭಾನುವಾರ ಮಾತನಾಡುವ ಖರ್ಗೆ ಅವರು ಅಸ್ವಸ್ಥರಾದರು. ತಕ್ಷಣ ಸುತ್ತುವರಿದ ಪಕ್ಷದ ಮುಖಂಡರು ಅವರನ್ನು ಕುರ್ಚಯಲ್ಲಿ ಕೂರಿಸಿದರು. ಕೆಲ ನಿಮಿಷಗಳ ನಂತರ, ಮತ್ತೆ ವೇದಿಕೆಗೆ ಬಂದ ಖರ್ಗೆ ಅವರು ಮೋದಿ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಜಮ್ಮು-ಕಾಶ್ಮೀರ: ಕಥುವಾ ಎನ್‌ಕೌಂಟರ್‌ನಲ್ಲಿ ಓರ್ವ ಭಯೋತ್ಪಾದಕನ ಹತ್ಯೆ – ಉಗ್ರರಿಗಾಗಿ ಮುಂದುವರಿದ ಶೋಧ

ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕ ರಾಜ್ಯ ಸ್ಥಾನಮಾನ ಮರುಸ್ಥಾಪಿಸಲು ಹೋರಾಟ ಮಾಡುತ್ತೇವೆ. ನನಗೆ ಈಗ 83 ವರ್ಷ, ನಾನು ಅಷ್ಟು ಬೇಗ ಸಾಯುವುದಿಲ್ಲ. ಪ್ರಧಾನಿ ಮೋದಿ ಅವರನ್ನ ಅಧಿಕಾರದಿಂದ ಕೆಳಗಿಳಿಸುವವರೆಗೂ ನಾನು ಜೀವಂತವಾಗಿರುತ್ತೇನೆ ಎಂದು ಗುಡುಗಿದ್ದಾರೆ.

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಮನಸ್ಸು ಮಾಡಿದ್ದರೆ ಒಂದೆರಡು ವರ್ಷಗಳ ಹಿಂದೆಯೇ ಚುನಾವಣೆ ಮಾಡಬಹುದಿತ್ತು. ಆದ್ರೆ ಬಿಜೆಪಿಗರು ಎಂದಿಗೂ ಚುನಾವಣೆ ನಡೆಸಲು ಬಯಸುವುದಿಲ್ಲ. ಸುಪ್ರೀಂ ಕೋರ್ಟ್ ಆದೇಶದ ನಂತರ ಅವರು ಚುನಾವಣೆಗೆ ತಯಾರಿ ಆರಂಭಿಸಿದರು ಎಂದಿದ್ದಾರೆ. ಇದನ್ನೂ ಓದಿ: BBK 11:ಹೊಸ ಸೀಸನ್, ಹೊಸ ಮನೆಗೆ 17 ಹೊಸ ಕಂಟೆಸ್ಟೆಂಟ್ಸ್- ಯಾರಿಗೆ ಸ್ವರ್ಗ, ನರಕ?

ಬಿಜೆಪಿಗರು ರಾಜ್ಯಪಾಲರದ ಮೂಲಕ ರಿಮೋಟ್-ನಿಯಂತ್ರಿತ ಸರ್ಕಾರವನ್ನು ನಡೆಸಲು ಬಯಸಿದ್ದರು. ಪ್ರಧಾನಿ ಮೋದಿ ಕಳೆದ 10 ವರ್ಷಗಳಲ್ಲಿ ಭಾರತದ ಯುವಕರಿಗೆ ಏನನ್ನೂ ನೀಡಿಲ್ಲ. 10 ವರ್ಷಗಳಲ್ಲಿ ನಿಮ್ಮ ಸಮೃದ್ಧಿಯನ್ನು ಮರಳಿ ತರಲು ಸಾಧ್ಯವಾಗದ ವ್ಯಕ್ತಿಯನ್ನು ನೀವು ನಂಬಬಹುದೇ? ಯಾವುದೇ ಬಿಜೆಪಿ ನಾಯಕರು ನಿಮ್ಮ ಮುಂದೆ ಬಂದರೆ, ಅವರು ಪ್ರಗತಿ ತಂದಿದ್ದಾರೋ ಇಲ್ಲವೋ ಕೇಳಿ ಎಂದು ಕರೆ ನೀಡಿದ್ದಾರೆ. ಇದನ್ನೂ ಓದಿ: IPL Mega Auction | ಹಿಟ್‌ಮ್ಯಾನ್ ರೋಹಿತ್‌ ಇನ್‌ – ಡುಪ್ಲೆಸಿ ಔಟ್‌ – ಆರ್‌ಸಿಬಿಗೆ ಆನೆ ಬಲ

Share This Article