50 ರನ್‌ ಅಂತರದಲ್ಲಿ 7 ವಿಕೆಟ್‌ ಪತನ – ಮುಂಬೈ ವಿರುದ್ಧ ಡೆಲ್ಲಿಗೆ ಭರ್ಜರಿ ಜಯ

Public TV
2 Min Read

ಬೆಂಗಳೂರು: ಬೌಲಿಂಗ್‌ ಮತ್ತು ಬ್ಯಾಟಿಂಗ್‌ನಲ್ಲಿ ಮಿಂಚಿದ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals Women) ಮುಂಬೈ (Mumbai Indians Women) ವಿರುದ್ಧ ಭರ್ಜರಿ 9 ರನ್‌ಗಳ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಜಿಗಿದಿದೆ.

ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಮುಂಬೈ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 123 ರನ್‌ ಗಳಿಸಿತು. ಸುಲಭ ಸವಾಲನ್ನು ಬೆನ್ನಟ್ಟಿದ ಡೆಲ್ಲಿ 1 ವಿಕೆಟ್‌ ನಷ್ಟಕ್ಕೆ 124 ರನ್‌ ಗಳಿಸಿತು.

 

ಆರಂಭಿಕ ಆಟಗಾರ್ತಿಯರಾದ ಶಫಾಲಿ ವರ್ಮಾ (Shafali Verma) ಮತ್ತು ನಾಯಕಿ ಮೆಗ್ ಲ್ಯಾನಿಂಗ್ (Meg Lanning) ಮೊದಲ ವಿಕೆಟಿಗೆ 85 ರನ್‌ ಜೊತೆಯಾಟವಾಡುವಾಗಲೇ ಡೆಲ್ಲಿ ಜಯಗಳಿಸುವುದು ಖಚಿತವಾಗಿತ್ತು.

ಶಫಾಲಿ ವರ್ಮಾ 43 ರನ್‌ (28 ಎಸೆತ, 4 ಬೌಂಡರಿ, 3 ಸಿಕ್ಸ್‌) ಹೊಡೆದರೆ ಮೆಗ್‌ ಲ್ಯಾನಿಂಗ್‌ ಔಟಾಗದೇ 60 ರನ್‌ (49 ಎಸೆತ, 9 ಬೌಂಡರಿ) ಸಿಡಿಸಿದರು. ಜೆಮಿಮಾ ರೋಡ್ರಿಗಸ್ ಔಟಾಗದೇ 15 ರನ್‌ ಹೊಡೆದರು.

 


ಮುಂಬೈ ಇಂಡಿಯನ್ಸ್‌ 35 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡರೂ 73 ರನ್‌ ಆದಾಗ ನಾಯಕಿ ಹರ್ಮನ್‌ ಪೀತ್‌ ಕೌರ್‌ ಔಟಾದ ಬೆನ್ನಲ್ಲೇ ಪತನ ಆರಂಭವಾಯಿತು. 50 ರನ್‌ ಅಂತರದಲ್ಲಿ 7 ವಿಕೆಟ್‌ ಪತನಗೊಂಡ ಪರಿಣಾಮ ಮುಂಬೈ ಕೇವಲ 123 ರನ್‌ ಗಳಿಸಿತು.

Share This Article