ಗಾಂಧೀನಗರ: ಗುಜರಾತ್‌ನಲ್ಲಿ 18ರ ಹುಡುಗಿಯ ಸಾವು ಪ್ರಕರಣವೊಂದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸಾವಿಗೂ ಮುನ್ನ ತನ್ನ ಬಾಯ್‌ಫ್ರೆಂಡ್‌ಗೆ ‘ನನ್ನನ್ನು ಉಳಿಸು’ (Save Me) ಎಂದು ಮೊಬೈಲ್‌ನಲ್ಲಿ ಸಂದೇಶ ಕಳುಹಿಸಿರುವುದು, ಇದು ಕೊಲೆಯೇ ಎಂಬ ಪ್ರಶ್ನೆ ಹುಟ್ಟುಹಾಕಿದೆ.
ಚಂದ್ರಿಕಾ ಚೌಧರಿ (18)ಯನ್ನು ಆಕೆಯ ತಂದೆ ಸೆಡ್ಹೈ ಪಟೇಲ್ ಮತ್ತು ಚಿಕ್ಕಪ್ಪ ಶಿವಭಾಯ್ ಪಟೇಲ್ ಥರಾಡ್‌ನ ಡಾಂಟಿಯಾದ ತಮ್ಮ ಮನೆಯಲ್ಲಿ ಕೊಲೆ ಮಾಡಿದ್ದಾರೆ. ಆಕೆಯ ತಂದೆ ಕಾಣೆಯಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ ಎಂದು ಸಹಾಯಕ ಪೊಲೀಸ್ ಅಧೀಕ್ಷಕ ಸುಮನ್ ನಲಾ ತಿಳಿಸಿದ್ದಾರೆ. ಇದನ್ನೂ ಓದಿ: ನಟ ದರ್ಶನ್ ಜಾಮೀನು ರದ್ದು – ಸುಪ್ರೀಂ ಕೋರ್ಟ್ ತೀರ್ಪಿನಲ್ಲೇನಿದೆ?
ಚಂದ್ರಿಕಾ, ಹರೀಶ್ ಚೌಧರಿ ಜೊತೆ ಪ್ರೀತಿಯಲ್ಲಿದ್ದಳು. ಆದರೆ, ಆಕೆಯ ಕುಟುಂಬವು ಇದಕ್ಕೆ ವಿರುದ್ಧವಾಗಿತ್ತು. ಅವಳು ಬೇರೊಬ್ಬರನ್ನು ಮದುವೆಯಾಗಬೇಕೆಂದು ಕುಟುಂಬದವರು ಬಯಸಿದ್ದರು. ಮನೆಯವರ ಮನಸ್ಥಿತಿಯ ಬಗ್ಗೆ ಹರೀಶ್‌ಗೆ ಮಾಹಿತಿ ನೀಡಿದ್ದಳು. ‘ನನ್ನ ಜೀವಕ್ಕೆ ಅಪಾಯವಿದೆ. ನೀನು ನನ್ನ ಕರೆದುಕೊಂಡು ಹೋಗು’ ಎಂದು ಬಾಯ್‌ಫ್ರೆಂಡ್‌ಗೆ ಕೊನೆಯದಾಗಿ ಸಂದೇಶ ಕಳುಹಿಸಿದ್ದಳು.
‘ಬಂದು ನನ್ನನ್ನು ಕರೆದುಕೊಂಡು ಹೋಗು. ಇಲ್ಲದಿದ್ದರೆ, ಇಷ್ಟವಿಲ್ಲದವನ ಜೊತೆ ನನಗೆ ಮದುವೆ ಮಾಡ್ತಾರೆ. ನಾನು ಮದುವೆಗೆ ಒಪ್ಪದಿದ್ದರೆ, ಅವರು ನನ್ನನ್ನು ಕೊಲ್ಲುತ್ತಾರೆ. ನನ್ನನ್ನು ಕಾಪಾಡು ಎಂದು ಹರೀಶ್‌ಗೆ ಸಂದೇಶ ಕಳುಹಿಸಿದ್ದಳು. ಇದನ್ನೂ ಓದಿ: ಜಮ್ಮು ಕಾಶ್ಮೀರದ ಚಶೋತಿಯಲ್ಲಿ ಮೇಘಸ್ಫೋಟ – ದಿಢೀರ್ ಪ್ರವಾಹಕ್ಕೆ 10 ಸಾವು
ಸಂದೇಶ ಕಳುಹಿಸಿದ ಕೆಲವೇ ಗಂಟೆಗಳಲ್ಲಿ ಆಕೆ ಮೃತದೇಹ ಪತ್ತೆಯಾಗಿದೆ. ಆರಂಭದಲ್ಲಿ ಇದು ಆತ್ಮಹತ್ಯೆ ಎಂದು ಬಿಂಬಿಸಲಾಗಿತ್ತು. ಆದರೆ, ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರು, ತನಿಖೆಗೆ ದಾರಿ ಮಾಡಿಕೊಟ್ಟಿತು. ‘ನನ್ನ ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡಿಲ್ಲ, ಆಕೆಯನ್ನು ಕೊಲೆ ಮಾಡಿದ್ದಾರೆ’ ಎಂದು ಹರೀಶ್ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದ.