ರಾಜ್ಯದ 6 ಜಿಲ್ಲೆಗಳಲ್ಲಿ ಹೆಣ್ಮಕ್ಕಳೇ ಸ್ಟ್ರಾಂಗ್‌ ಗುರೂ!

Public TV
1 Min Read

ಬೆಂಗಳೂರು: ರಾಜಕೀಯ ವಲಯದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ತೀರ ಕಡಿಮೆಯಿದ್ದರೂ, ಹಕ್ಕು ಚಲಾವಣೆಯಲ್ಲಿ ಮಾತ್ರ ಪುರುಷರಿಗಿಂತ ಮಹಿಳೆಯರೇ ಒಂದು ಕೈ ಮುಂದಿದ್ದಾರೆ. ರಾಜ್ಯದ 6 ಜಿಲ್ಲೆಗಳಲ್ಲಿ ಹೆಣ್ಣುಮಕ್ಕಳೇ ಸ್ಟ್ರಾಂಗ್‌ ಆಗಿದ್ದಾರೆ.

ಮೇ 10 ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಪುರುಷರನ್ನೂ ಮೀರಿಸಿ ಮಹಿಳೆಯರು ಮತಗಟ್ಟೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಹಕ್ಕು ಚಲಾಯಿಸಿದ್ದಾರೆ. ಉಡುಪಿ, ದಕ್ಷಿಣ ಕನ್ನಡ, ಕೊಡಗು, ರಾಮನಗರ, ಮಂಡ್ಯ, ಚಾಮರಾಜನಗರ ಜಿಲ್ಲೆಗಳಲ್ಲಿ ಮಹಿಳೆಯರಿಂದಲೇ ಹೆಚ್ಚು ಮತ ಚಲಾವಣೆ ಆಗಿದೆ ಎಂದು ಅಂಕಿಅಂಶದಿಂದ ತಿಳಿದು ಬಂದಿದೆ. ಇದನ್ನೂ ಓದಿ: 25 ದಿನಗಳಲ್ಲಿ 4.12 ಲಕ್ಷ ಕೇಸ್, 22.89 ಕೋಟಿ ದಂಡ – ರಾಜಕೀಯ ನಾಯಕರಿಗೆ ಬಿಸಿ ಮುಟ್ಟಿಸಿದ ಟ್ರಾಫಿಕ್ ಪೊಲೀಸ್

ಈ ಆರು ಜಿಲ್ಲೆಗಳ ಪೈಕಿ ಯಾವ ಜಿಲ್ಲೆಯಲ್ಲಿ ಪುರುಷರು ಹಾಗೂ ಮಹಿಳೆಯರು ಎಷ್ಟು ಮತದಾನ ಮಾಡಿದ್ದಾರೆ? ಈ ಎರಡೂ ವರ್ಗದವರಿಗೆ ಇರುವ ಮತಗಳ ಅಂತರ ಎಷ್ಟು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಯಾವ ಜಿಲ್ಲೆಯಲ್ಲಿ ಎಷ್ಟು ಮತ; ಅಂತರ?
ಉಡುಪಿ – 45,755 ಅಂತರ (ಪುರುಷರ ಮತದಾನ – 3,86,361, ಮಹಿಳೆಯರ ಮತದಾನ -4,32,116)
ದಕ್ಷಿಣ ಕನ್ನಡ – 35,589 (ಪುರುಷರ ಮತದಾನ – 6,61,368, ಮಹಿಳೆಯರ ಮತದಾನ – 6,96,957)
ಕೊಡಗು – 3,333 (ಪುರುಷರ ಮತದಾನ – 1,68,843, ಮಹಿಳೆಯರ ಮತದಾನ – 1,72,176)
ರಾಮನಗರ – 3,032 (ಪುರುಷರ ಮತದಾನ – 3,83,152, ಮಹಿಳೆಯರ ಮತದಾನ – 3,86,184)
ಮಂಡ್ಯ – 2,822 (ಪುರುಷರ ಮತದಾನ – 6,46,227, ಮಹಿಳೆಯರ ಮತದಾನ – 6,49,049)
ಚಾಮರಾಜನಗರ – 487 (ಪುರುಷರ ಮತದಾನ – 3,50,738, ಮಹಿಳೆಯರ ಮತದಾನ – 3,51,225) ಇದನ್ನೂ ಓದಿ: ಬೆಂಗ್ಳೂರಿನ 4 ಮತ ಎಣಿಕಾ ಕೇಂದ್ರಗಳಿಗೆ ಬಿಗಿ ಬಂದೋಬಸ್ತ್- 1,500 ಪೊಲೀಸರ ನಿಯೋಜನೆ

Share This Article