ಪಾಕ್‌ವಿರುದ್ಧ ಭಾರತಕ್ಕೆ 8 ವಿಕೆಟ್‌ಗಳ ಭರ್ಜರಿ ಜಯ

1 Min Read

ಬ್ಯಾಂಕಾಕ್‌: ಏಷ್ಯಾ ಕಪ್‌ ವುಮೆನ್‌ ರೈಸಿಂಗ್‌ ಸ್ಟಾರ್‌(Women’s Asia Cup Rising Stars) ಟೂರ್ನಿಯಲ್ಲಿ ಭಾರತ ಎ (India A) ತಂಡ ಪಾಕಿಸ್ತಾನದ (Pakistan) ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಪಾಕ್‌ 18.5 ಓವರ್‌ಗಳಲ್ಲಿ 93 ರನ್‌ಗಳಿಗೆ ಆಲೌಟ್‌ ಆಗಿತ್ತು. ಸುಲಭದ ಸವಾಲನ್ನು ಬೆನ್ನಟ್ಟಿದ ಭಾರತ ಇನ್ನೂ 59 ಎಸೆತ ಬಾಕಿ ಇರುವಂತೆಯೇ 2 ವಿಕೆಟ್‌ ನಷ್ಟಕ್ಕೆ 97 ರನ್‌ ಹೊಡೆದು ಜಯಗಳಿಸಿತು. ಇದನ್ನೂ ಓದಿ:  ಸ್ಟಾಪ್‌ ಸ್ಟಾರ್ಟ್‌ ಆಕ್ಷನ್ – ಉಸ್ಮಾನ್ ತಾರಿಖ್‌ನಂತೆಯೇ ಕ್ಯಾಪ್ಟನ್‌ ಸೂರ್ಯ ಬೌಲಿಂಗ್‌ ಮಾಡಿದ್ದೇಕೆ?

ಭಾರತದ ಪರ ದಿನೇಶ್‌ ವೃಂದ ಔಟಾಗದೇ 55 ರನ್‌(29 ಎಸೆತ, 12 ಬೌಂಡರಿ) ಅನುಷ್ಕಾ ಶರ್ಮಾ 24 ರನ್‌(26 ಎಸೆತ, 4 ಬೌಂಡರಿ) ಹೊಡೆದರು. ಇದನ್ನೂ ಓದಿ: ಪಾಕ್‌ವಿರುದ್ಧ ಭಾರತಕ್ಕೆ 8 ವಿಕೆಟ್‌ಗಳ ಭರ್ಜರಿ ಜಯ
ಬೌಲಿಂಗ್‌ನಲ್ಲಿ ಸೈಮಾ ಠಾಕೂರ್‌ ನಾಯಕಿ ರಾಧಾ ಯಾದವ್‌ , ಪ್ರೇಮಾ ರಾವತ್‌ ಅವರು ತಲಾ 2 ವಿಕೆಟ್‌ ಪಡೆದರು.
Share This Article