ನಿರ್ವಾಹಕನ ಶರ್ಟ್ ಹಿಡಿದೆಳೆದು ರೌದ್ರಾವತಾರ ತೋರಿದ ಮಹಿಳೆಯರು – ವಿಡಿಯೋ ವೈರಲ್

Public TV
1 Min Read

ಬೆಳಗಾವಿ: ಬಸ್ ನಿರ್ವಾಹಕನ (Bus Conductor) ವಿರುದ್ಧ ಸಿಡಿದೆದ್ದ ಮಹಿಳಾ (Women) ಪ್ರಯಾಣಿಕರು ಕರ್ತವ್ಯದಲ್ಲಿದ್ದ ನಿರ್ವಾಹಕನ ಶರ್ಟ್ (Shirt) ಹಿಡಿದೆಳೆದು ರೌದ್ರಾವತಾರ ತೋರಿದ ಘಟನೆ ಸವದತ್ತಿ (Savadatti) ಯಲ್ಲಮ್ಮನ ಗುಡ್ಡದಲ್ಲಿ ನಡೆದಿದೆ.

ಜಿಲ್ಲೆಯ ಸವದತ್ತಿ ತಾಲೂಕಿನ ಶ್ರೀರೇಣುಕಾ ದೇವಿ ಯಲ್ಲಮ್ಮನ ಗುಡ್ಡದಲ್ಲಿ ಶುಕ್ರವಾರ ಮಧ್ಯಾಹ್ನ ಘಟನೆ ನಡೆದಿದ್ದು, ಘಟನೆಯ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗಿದೆ. ಸವದತ್ತಿ ಡಿಪೋಗೆ ಸೇರಿದ ಬಸ್‌ನಲ್ಲಿ ನಿರ್ವಾಹಕ ಹಾಗೂ ಮಹಿಳಾ ಪ್ರಯಾಣಿಕರು ಕೈ ಕೈ ಮಿಲಾಯಿಸಿದ್ದಾರೆ. KA 22 F 1863 ಸಂಖ್ಯೆಯ NWKRTC ಬಸ್‌ನಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಶಿವಕುಮಾರ್‌ ನೀವು ಏನು ಸೂಪರ್‌ಮ್ಯಾನಾ: ಅಶ್ವಥ್ ನಾರಾಯಣ ವಾಗ್ದಾಳಿ

ಕ್ಷುಲ್ಲಕ ಕಾರಣಕ್ಕೆ ನಿರ್ವಾಹಕ ಬಿ.ಎಸ್.ಭದ್ರಣ್ಣವರ್ ಮತ್ತು ಮಹಿಳಾ ಪ್ರಯಾಣಿಕರ ಮಧ್ಯೆ ವಾಗ್ವಾದ ನಡೆದಿದೆ. ವಾಗ್ವಾದ ವಿಕೋಪಕ್ಕೆ ತಿರುಗಿ ಮಹಿಳೆಯ ಮೇಲೆ ಕೈ ಮಾಡಲು ನಿರ್ವಾಹಕ ಮುಂದಾಗಿದ್ದಾನೆ. ಈ ವೇಳೆ ನಿರ್ವಾಹಕನ ಮೇಲೆ ಮಹಿಳಾ ಪ್ರಯಾಣಿಕರು ತಿರುಗಿ ಬಿದ್ದಿದ್ದಲ್ಲದೇ ಪರಸ್ಪರ ಬಸ್ ನಿರ್ವಾಹಕ ಮತ್ತು ಮಹಿಳಾ ಪ್ರಯಾಣಿಕರು ಹೊಡೆದಾಡಿಕೊಂಡಿದ್ದಾರೆ. ನಿರ್ವಾಹಕ ಮತ್ತು ಮಹಿಳೆಯರ ಈ ಜಟಾಪಟಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಹಸಿದವರ ಕೂಗಿಗೆ ಸಿದ್ದರಾಮಯ್ಯರ ಕಿವಿ ಯಾವಾಗಲೂ ತೆರೆದಿರುತ್ತದೆ: ನಾಡೋಜ ಹಂಪನಾ

Share This Article