ಸಿಗ್ನಲ್ ಜಂಪ್ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಎಎಸ್‍ಐ ಮೇಲೆ ಹಲ್ಲೆಗೈದ ಮಹಿಳಾ ಟೆಕ್ಕಿ!

Public TV
1 Min Read

ಬೆಂಗಳೂರು: ಇವತ್ತಿನ ದಿನಗಳಲ್ಲಿ ಸರ್ಕಾರಿ ಕೆಲಸ ಮಾಡೋದೆ ಕಷ್ಟವಾಗಿದೆ. ಅದೂ ರಸ್ತೆ ಬದಿಯಲ್ಲಿ ನಿಂತ್ಕೊಂಡು ಹೊಗೆ ಧೂಳು ತಿಂದುಕೊಂಡು ಟ್ರಾಫಿಕ್ ಕಂಟ್ರೋಲ್ ಮಾಡೋ ಪೊಲೀಸ್ರ ಗೋಳಂತು ಕೇಳಲೇಬೇಡಿ.

ಹೌದು. ಬೆಂಗಳೂರು ಟ್ರಾಫಿಕ್ ನಿಯಂತ್ರಿಸೋದರಲ್ಲಿ ಪೊಲೀಸರು ಹೈರಾಣಾಗಿ ಹೋಗ್ತಾರೆ. ಯಾವ ಜನ್ಮದ ಕರ್ಮವೋ ಏನೊ ವಿಧಿ ಇಲ್ಲ ಅಂತಾ ಕೆಲಸ ಮಾಡ್ಕೊಂಡು ಹೋಗ್ತಿದ್ದಾರೆ. ಬೆಳಗ್ಗೆಯಿಂದ ಧೂಳು, ಹೊಗೆಯಲ್ಲಿ ಕೆಲಸ ಮಾಡಬೇಕಾದ ಪೊಲೀಸ್ರು ಸಂಚಾರಿ ನಿಯಮಗಳನ್ನ ಪಾಲಿಸದವರ ಮೇಲೂ ಕೂಡ ಕಣ್ಣಿಟ್ಟಿರ್ತಾರೆ. ಇಂದಿರಾನಗರದ 80 ಅಡಿ ರಸ್ತೆಯಲ್ಲಿ ಮಹಿಳಾ ಟೆಕ್ಕಿ ಹಾರಿಕಾ ಬಸೂರ್ ಟೂ ವ್ಹೀಲರ್‍ನಲ್ಲಿ ಸಿಗ್ನಲ್ ಜಂಪ್ ಮಾಡ್ತಾಳೆ. ಇದನ್ನ ಪ್ರಶ್ನಿಸಿದ ಇಂದಿರಾ ನಗರ ಸಂಚಾರಿ ಎಎಸ್‍ಐ ಫ್ರಭು ರತ್ನಾಕರ್ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾಳೆ.

ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಟೆಕ್ಕಿ ಎಎಸ್‍ಐಗೆ ಹಲ್ಲೆ ನಡೆಸಿದ್ದಾಳೆ. ಇನ್ನು ಸಹಾಯಕ್ಕೆ ಬಂದ ಸಾರ್ವಜನಿಕರ ಮೇಲೂ ಟೆಕ್ಕಿ ಹಲ್ಲೆ ನಡೆಸಿದ್ದಾಳೆ. ಹೆಲ್ಮೆಟ್ ಹಾಗು ಪರ್ಸ್‍ನಿಂದ ಬಾರಿಸ್ತಾಳೆ. ನಂತ್ರ ಇಂದಿರಾನಗರ ಲಾ ಅಂಡ್ ಆರ್ಡರ್ ಪೊಲೀಸ್ರಿಗೆ ಕರೆ ಮಾಡಿದ ಎಎಸ್‍ಐ ಮಹಿಳಾ ಟೆಕ್ಕಿಯ ಮೇಲೆ ದೂರು ನೀಡ್ತಾರೆ. ಸರ್ಕಾರಿ ಕೆಲಸಕ್ಕೆ ಅಡ್ಡಿ ಮತ್ತು ಹಲ್ಲೆ ನಡೆಸಿದ ಆರೋಪದ ಮೇಲೆ ಪೊಲೀಸ್ರು ಸದ್ಯ ಪ್ರಕರಣ ದಾಖಲಿಸಿಕೊಂಡು ಟೆಕ್ಕಿಯನ್ನ ಜೈಲಿಗೆ ಕಳಿಸಿದ್ದಾರೆ.

ಟ್ರಾಫಿಕ್ ಪೊಲೀಸರು ಹಾಗೂ ವಾಹನ ಸವಾರರ ಮೇಲೆ ವಾದಗಳು ನಡೆಯುತ್ತವೆ. ಇವುಗಳನ್ನು ಆದಷ್ಟು ಕಡಿಮೆ ಮಾಡಕ್ಕೆ ಪ್ರಯತ್ನ ಮಾಡ್ತಾ ಇದ್ದೀವಿ. ಎದುರು ಪಾರ್ಟಿನೇ ಪೊಲೀಸರ ಮೇಲೆ ಹಲ್ಲೆ ಮಾಡಿದ್ರೆ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಅಂತಾ ಡಿಸಿಪಿ ಅಭಿಷೇಕ್ ಗೋಯಲ್ ಹೇಳಿದ್ದಾರೆ.

ಒಟ್ಟಿನಲ್ಲಿ ಪದೇ ಪದೇ ಈ ರೀತಿಯಲ್ಲಿ ಸಂಚಾರಿ ಪೊಲೀಸ್ರ ಮೇಲಿನ ಹಲ್ಲೆಗಳು ಮರುಕಳಿಸ್ತಾನೆ ಇವೆ. ಹೀಗಾಗಿ ಸೂಕ್ರ ಕ್ರಮಕೈಗೊಳ್ಳುವುದರಿಂದ ಇಂತಹ ಪ್ರಕರಣಗಳನ್ನ ತಪ್ಪಿಸಲು ಸಾಧ್ಯ.

Share This Article
Leave a Comment

Leave a Reply

Your email address will not be published. Required fields are marked *