MSc ಓದಿ ಕಸ ಗುಡಿಸುತ್ತಿದ್ದ ಮಹಿಳೆಗೆ ಸರ್ಕಾರಿ ಕೆಲಸ ಕೊಟ್ಟ ಸಚಿವರು

Public TV
2 Min Read

ಹೈದರಾಬಾದ್: ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರೂ ಕಸ ಗುಡಿಸುವ ಕೆಲಸ ಮಾಡುತ್ತಿದ್ದ ಮಹಿಳೆಗೆ ತೆಲಂಗಾಣದ ಪೌರಾಡಳಿತ ಸಚಿವ ಕೆ.ಟಿ. ರಾಮರಾವ್ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಷನ್(ಜೆಎಚ್‍ಎಂಸಿ)ನಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಸಹಾಯಕ ಕೀಟಶಾಸ್ತ್ರಜ್ಞರ ಕೆಲಸ ನೀಡಿದ್ದಾರೆ.

ಎಂಎಸ್‍ಸಿ(ಸಾವಯವ ರಸಾಯನ ಶಾಸ್ತ್ರ) ಮಾಡಿದ ಎ.ರಜನಿ, ಜಿಎಚ್‍ಎಂಸಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕಸ ಗುಡಿಸುವ ಕೆಲಸ ಮಾಡುತ್ತಿದ್ದರು. ತೆಲುಗಿನ ದಿನಪತ್ರಿಕೆಯೊಂದರಲ್ಲಿ ಮಹಿಳೆ ಬಗ್ಗೆ ಪ್ರಕಟವಾದ ವರದಿಗೆ ಪ್ರತಿಕ್ರಿಯಿಸಿದ ಸಚಿವರು, ಆಕೆಯ ವಿದ್ಯಾರ್ಹತೆಗೆ ಅನುಗುಣವಾಗಿ ಕೆಲಸ ನೀಡಿದ್ದಾರೆ.

hydrabad women

ರಜನಿ ಅವರನ್ನು ಸಚಿವರ ಬಳಿ ನಗರಾಭಿವೃದ್ಧಿಯ ವಿಶೇಷ ಮುಖ್ಯ ಕಾರ್ಯದರ್ಶಿಯಾಗಿರುವ ಅರವಿಂದ್ ಕುಮಾರ್‌‌ರವರು ಕರೆದುಕೊಂಡು ಹೋಗಿ ಕೆಲಸ ಕೊಡಿಸಿರುವುದಾಗಿ ತಿಳಿಸಿದ್ದಾರೆ.  ರುಜುವಾತುಗಳನ್ನು ಪರಿಶೀಲಿಸಿದ ಬಳಿಕ ರಜನಿಗೆ ಕೆಲಸ ನೀಡಲು ಆದೇಶಿಸಲಾಯಿತು ಎಂದು ಅರವಿಂದ್ ಕುಮಾರ್‍ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತಿಳಿಸಿದ್ದಾರೆ. ಇಬ್ಬರು ಹೆಣ್ಣು ಮಕ್ಕಳಿರುವ ರಜನಿಗೆ ಸಚಿವರು ಕರೆದು ಕೀಟಶಾಸ್ತ್ರ ವಿಭಾಗದಲ್ಲಿ ಸಹಾಯಕ ಕೀಟಶಾಸ್ತ್ರಜ್ಞರಾಗಿ ಕೆಲಸ ಕೊಟ್ಟು, ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದಾಗಭಾವುಕರಾಗಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಹೆಮ್ಮೆಯಿಂದ ಬದುಕಿದ್ದು, ಅವಮಾನದಿಂದ ಬದುಕಲು ಸಾಧ್ಯವಾಗ್ತಿಲ್ಲ: ಗಿರಿ ಡೆತ್‍ನೋಟ್

ವಾರಂಗಲ್ ಜಿಲ್ಲೆಯವರಾಗಿದ್ದು, ಕೃಷಿ ಕಾರ್ಮಿಕರ ಕುಟುಂಬದಲ್ಲಿ ಜನಿಸಿದ್ದಾರೆ. ಹಣಕಾಸಿ ಸಮಸ್ಯೆ ಇದ್ದರೂ ಕೂಡ ಅವರ ಪೋಷಕರ ಬೆಂಬಲದಿಂದಾಗಿ ತಮ್ಮ ವಿದ್ಯಾಭ್ಯಾಸವನು ಮುಂದುವರಿಸಿದರು ಮತ್ತು 2013ರಲ್ಲಿ ಪ್ರಥಮ ದರ್ಜೆ ಜೊತೆಗೆ ಎಂಎಸ್‍ಸಿ(ಸಾವಯವ ರಸಾಯನ ಶಾಸ್ತ್ರ)ಯಲ್ಲಿ ಉತ್ತೀರ್ಣರಾದರು. ಅಲ್ಲದೇ ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ಪಿಎಚ್‍ಡಿ ಅರ್ಹತೆ ಪಡೆದರು. ಆದರೆ ಈ ಮಧ್ಯೆ ವಕೀಲರೊಬ್ಬರು ವಿವಾಹವಾಗಿ ಹೈದರಾಬಾದ್‍ಗೆ ಸ್ಥಳಾಂತರಗೊಂಡಿದ್ದಾಗಿ ತಿಳಿಸಿದ್ದಾರೆ.

ರಜನಿಗೆ ಎರಡು ಮಕ್ಕಳ ತಾಯೊಯಾದ ನಂತರ ಕೂಡ ಉದ್ಯೋಗಕ್ಕಾಗಿ ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವುದನ್ನು ಮುಂದುವರಿಸಿದ್ದರು. ಆದರೆ ಅವರ ಪತಿ ಹೃದಯ ಸಮಸ್ಯೆಯಿಂದ ಹಾಸಿಗೆ ಹಿಡಿದಿದ್ದರಿಂದ ಕುಟುಂಬ ಇಕ್ಕಟ್ಟಿನ ಸ್ಥಿತಿಗೆ ಸಿಲುಕಿತು. ನಂತರ ಕುಟುಂಬವನ್ನು ನಡೆಸಲು ಆಕೆಯ ಅತ್ತೆ ಸೇರಿದಂತೆ ಐವರು ತರಕಾರಿ ಮಾರಾಟ ಮಾಡಲು ಆರಂಭಿಸಿದರು. ಇದರಿಂದ ಗಳಿಸಿದ ಹಣದಿಂದಾಗಿ ರಜನಿ ಜಿಎಚ್‍ಎಂಸಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಸ ಗುಡಿಸುವ ಕೆಲಸ ಪಡೆದು ತಿಂಗಳಿಗೆ 10,000ರೂ, ಸಂಬಳ ತೆಗೆದುಕೊಳ್ಳುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ:ಪಾಕ್ ಗೂಢಾಚಾರಿ ಜಿತೇಂದರ್ ಸಿಂಗ್ ಕಾಟನ್ ಪೇಟೆಯನ್ನೇ ಆಯ್ಕೆ ಮಾಡ್ಕೊಂಡಿದ್ದೇಕೆ..?

Share This Article
Leave a Comment

Leave a Reply

Your email address will not be published. Required fields are marked *