ಗುಪ್ತಾಂಗದಲ್ಲಿ ದೋಷವಿದೆ – ಪರಿಹಾರ ಬೇಕೆಂದ್ರೆ 5 ಬಾರಿ ಸೆಕ್ಸ್ ಎಂದ ಕಾಮಿಸ್ವಾಮಿ ಅರೆಸ್ಟ್

Public TV
2 Min Read

ಬೆಂಗಳೂರು: ನಿನ್ನ ಗುಪ್ತಾಂಗದಲ್ಲಿ ದೋಷವಿದ್ದು, ಪರಿಹಾರ ಬೇಕು ಎಂದರೆ 5 ಬಾರಿ ಸೆಕ್ಸ್ ಮಾಡಬೇಕು ಎಂದ ಕಾಮಿ ಸ್ವಾಮಿಯನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.

ಗಣೇಶ್ ಮತ್ತು ಮಣಿಕಂಠ ಲೈಂಗಿಕ ಕಿರುಕುಳ ನೀಡಿದ ತಂದೆ-ಮಗ. ಮಹಿಳೆಗೆ ಈಗಾಗಲೇ ಮದುವೆಯಾಗಿದ್ದು, ಪತಿಯಿಂದ ಬೇರೆಯಾಗಿ ವಾಸಿಸುತ್ತಿದ್ದಾರೆ. ಮಹಿಳೆ ಬಾಣಸವಾಡಿಯ ಕಂಪನಿಯಲ್ಲಿ ಮಾನವ ಸಂಪನ್ಮೂಲ ಅಧಿಕಾರಿಯಾಗಿ ಕೆಲಸ ಮಾಡಿಕೊಂಡಿದ್ದಾರೆ. ಮಹಿಳೆಗೆ ಸರ್ಪ ದೋಷವಿದ್ದು, ತನ್ನ ಪರಿಚಯಸ್ಥರಿಂದ ಆರೋಪಿ ತಂದೆ-ಮಗನನ್ನು ಭೇಟಿ ಮಾಡಿದ್ದರು. ಕಳೆದ ಶನಿವಾರ ತಂದೆ-ಮಗ ಸರ್ಪ ದೋಷ ಪರಿಹರಿಸುವುದಾಗಿ ಹೇಳಿ 10 ರಿಂದ ರಾತ್ರಿ 11ವರೆಗೂ ಮಹಿಳೆಯ ಮನೆಯಲ್ಲಿ ಪೂಜೆ ಮಾಡಿದ್ದಾರೆ. ಪೂಜೆ ನಂತರ ಪೂಜೆ ಮಾಡಿದ್ದ ವಸ್ತುಗಳನ್ನು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬಿಡಬೇಕು ಎಂದು ಹೇಳಿದ್ದಾರೆ.

ಇದೇ ವೇಳೆ ತಂದೆ-ಮಗ ಕುಕ್ಕೆಯಲ್ಲಿ ಎರಡು ಪ್ರತ್ಯೇಕ ರೂಮ್ ಮಾಡಿ ಕಾಮದಾಟ ಆಡಲು ಸ್ಕೆಚ್ ಹಾಕಿದ್ದರು. ಅಲ್ಲದೆ ತಂದೆ ಗಣೇಶ್ ನಿನ್ನ ಗುಪ್ತಾಂಗದಲ್ಲಿ ದೋಷವಿದೆ. ಪರಿಹಾರ ಮಾಡಬೇಕು ಎಂದರೆ 5 ಬಾರಿ ಸೆಕ್ಸ್ ಮಾಡಬೇಕು. ನನ್ನ ಜೊತೆ ಅಲ್ಲದೆ ನನ್ನ ಮಗನ ಜೊತೆಯೂ ಸೆಕ್ಸ್ ಮಾಡಬೇಕು. ನೀನು ಈ ವಿಷಯವನ್ನು ನಿನ್ನ ತಂದೆ-ತಾಯಿಯ ಬಳಿ ಹೇಳಬಾರದು ಎಂದು ಮಹಿಳೆಗೆ ಹೇಳಿದ್ದಾನೆ. ಸ್ವಾಮೀಜಿಯ ಮಾತು ಕೇಳಿದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಕಾಮಿ ಸ್ವಾಮಿಯ ಮಗ ಮಣಿಕಂಠನನ್ನು ಬಂಧಿಸಿದ್ದಾರೆ.

ದೂರಿನಲ್ಲಿ ಏನಿದೆ?
ನನಗೆ ಸರ್ಪ ದೋಷವಿದ್ದು, ಜಗನ್ನಾಥ್ ಎಂಬವರು ನನಗೆ ಗಣೇಶ್ ಹಾಗೂ ಮಣಿಕಂಠ ಅವರ ಪರಿಚಯ ಮಾಡಿಸಿದ್ದರು. ಆಗ ಅವರು ಸರ್ಪ ದೋಷ ನಿವಾರಣೆಗೆ ಪೂಜೆ ಮಾಡಿಸಬೇಕು ಎಂದರೆ 40 ಸಾವಿರ ರೂ. ಆಗುತ್ತದೆ ಎಂದು ಹೇಳಿದ್ದರು. ಬಳಿಕ ಗಣೇಶ್ ಎಂಬವರು ನನ್ನ ಜೊತೆ ಪ್ರತ್ಯೇಕವಾಗಿ ಮಾತನಾಡಿ, ನಿನಗೆ ಎಷ್ಟು ಜನ ಬಾಯ್‍ಫ್ರೆಂಡ್ ಇದ್ದಾರೆ ಎಂದು ಕೇಳಿದ್ದಾರೆ. ಅಲ್ಲದೆ ನಿನ್ನದ್ದು ವೇಶ್ಯೆಯ ಜಾತಕವಾಗಿದ್ದು, ಎಷ್ಟು ಜನವನ್ನು ಮದುವೆ ಮಾಡಿದರೂ ಅದು ನಿಲ್ಲುವುದಿಲ್ಲ ಎಂದು ಹೇಳಿದ್ದಾರೆ.

ಶನಿವಾರ ಪೂಜೆ ಮಾಡುವುದ್ದಾಗಿ ಹೇಳಿ ಮನೆಗೆ ಬಂದಿದ್ದರು. ಪೂಜೆ ನೆರವೇರಿಸಿದ ನಂತರ ಪ್ರತ್ಯೇಕವಾಗಿ ರೂಮಿಗೆ ಕರೆದು ನೀನು ನಾನು ಹೇಳಿದ ಹಾಗೆ ಮಾಡಬೇಕು. ಆಗ ನಿನ್ನ ದೋಷ ಪರಿಹಾರವಾಗುತ್ತದೆ ಎಂದು ಲೈಂಗಿಕವಾಗಿ ಪ್ರೇರೇಪಣೆ ಮಾಡಿ ಕುಕ್ಕೆ ಸುಬ್ರಮಣ್ಯಕ್ಕೆ ಹೋಗಲು ಪುಸಲಾಯಿಸಿದ್ದಾನೆ. ಗಣೇಶ್ ಮಾತು ಕೇಳಿ ಭಾನುವಾರ ನಾನು ನನ್ನ ತಂದೆ-ತಾಯಿ ಜೊತೆ ಕುಕ್ಕೆಗೆ ಹೋಗಿ ಅಲ್ಲಿ ಪೂಜೆ ನೆರವೇರಿಸಿದ್ದೇವೆ. ಪೂಜೆ ನಂತರ ಗಣೇಶ್ ತನ್ನ ಮಗ ಮಣಿಕಂಠ ಹಾಗೂ ನನ್ನ ತಂದೆ-ತಾಯಿಯನ್ನಯ ಹೊರಗೆ ನಿಲ್ಲಿಸಿ ನನ್ನನ್ನು ರೂಮಿಗೆ ಕರೆದುಕೊಂಡು ಹೋಗಿ ಬಾಗಿಲು ಹಾಕಿದ್ದಾನೆ.

ರೂಮಿನ ಬಾಗಿಲು ಹಾಕಿದ ನಂತರ ನಾನು 5 ಬಾರಿ ತಾಳಿ ಕಟ್ಟಿ, 5 ಬಾರಿ ನಿನ್ನ ಜೊತೆ ಲೈಂಗಿಕ ಕ್ರಿಯೆ ಮಾಡುತ್ತೇನೆ. ಆಗ ನಿನ್ನ ದೋಷ ಪರಿಹಾರವಾಗುತ್ತದೆ. ನನ್ನನ್ನು ದೇವರೆಂದು ನೋಡು ಎಂದು ಹೇಳಿ ಮೊಬೈಲಿನಲ್ಲಿ ಪೂಜೆಯ ಬಗ್ಗೆ ಒಂದು ವಿಡಿಯೋವನ್ನು ಸಹ ತೋರಿಸಿದ್ದಾನೆ. ಸರ್ಪ ದೋಷ ಪರಿಹಾರ ಪೂಜೆ ಮಾಡುವ ನೆಪದಲ್ಲಿ ಅವರು ಲೈಂಗಿಕವಾಗಿ ಪ್ರಚೋದನೆ ನೀಡಿದ್ದಾರೆ. ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Share This Article
1 Comment

Leave a Reply

Your email address will not be published. Required fields are marked *