ಹೈದರಾಬಾದ್: ಕುಡಿದ ಅಮಲಿನಲ್ಲಿ ಸ್ವಂತ ಮಗಳ ಜೊತೆಗೆ ಅಸಭ್ಯವಾಗಿ ವರ್ತಿಸಿದ ಶಿಕ್ಷಕನನ್ನು ಆತನ ಪತ್ನಿಯೇ ಹೊಡೆದು ಕೊಲೆ ಮಾಡಿರುವ ಘಟನೆ ಆಂಧ್ರ ಪ್ರದೇಶದ ಅನಂತಪುರಂ ಜಿಲ್ಲೆಯ ಕಲ್ಯಾಣದುರ್ಗಂನಲ್ಲಿ ನಡೆದಿದೆ.
ಸದಾಶಿವ ಎಂಬಾತನೇ ಮೃತ ಶಿಕ್ಷಕ. ಶೋಭಾರಾಣಿ ಕೊಲೆ ಮಾಡಿದ ಆರೋಪಿ. ಕೊತಚೆರುವು ಜಿಲ್ಲೆಯ ಪ್ರೌಢಶಾಲೆಯೊಂದರಲ್ಲಿ ದೈಹಿಕ ಶಿಕ್ಷಕನಾಗಿ ಸದಾಶಿವ ಕರ್ತವ್ಯ ನಿರ್ವಹಿಸುತ್ತಿದ್ದನು. ಕಳೆದ 25 ವರ್ಷದ ಹಿಂದೆ ಸದಾಶಿವ ಹಾಗೂ ಶೋಭಾರಾಣಿ ಮದುವೆಯಾಗಿದ್ದರು. ಆದರೆ ಮದುವೆಯಾದ 5 ವರ್ಷದ ಬಳಿಕ ಸದಾಶಿವ ಕುಡಿಯಲು ಆರಂಭಿಸಿ ಬೇರೆ ಮಹಿಳೆಯರ ಸಂಬಂಧವನ್ನು ಇಟ್ಟುಕೊಂಡಿದ್ದ. ಹಾಗೆಯೆ ಹೆಂಡತಿ ಮಗಳನ್ನು ಬಿಟ್ಟು ಬೇರೆ ಮಹಿಳೆಯ ಜೊತೆ ಇರಲು ಆರಂಭಿಸಿದ್ದನು.
ವಾರಕ್ಕೊಮ್ಮೆ ಮನೆಗೆ ಬರುತ್ತಿದ್ದ ಸದಾಶಿವ ಪತ್ನಿ ಹಾಗೂ ಮಗಳಿಗೆ ಹೊಡೆದು ಹಿಂಸೆ ನೀಡುತ್ತಿದ್ದನು. ಆದರೂ ಇದನ್ನೆಲ್ಲ ಸಹಿಸಿಕೊಂಡು ಶೋಭಾ ತನ್ನ ಮಗಳನ್ನು ಹೇಗೋ ಕಷ್ಟ ಪಟ್ಟು ಸಾಕುತ್ತಿದ್ದಳು. ಬುಧವಾರ ರಾತ್ರಿ ಸದಾಶಿವ ಕುಡಿದು ಬಂದು ಶೋಭಾ ಜೊತೆ ಜಗಳವಾಡಿದ್ದಾನೆ. ಅಷ್ಟೆ ಅಲ್ಲದೆ ತನ್ನ ಸ್ವಂತ ಮಗಳ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಆಗ ಶೋಭಾ ಬೇರೆ ಉಪಾಯವಿಲ್ಲದೆ ಆತನ ತಲೆಗೆ ಕಟ್ಟಿಗೆ ತುಂಡಿನಿಂದ ಹೊಡಿದ್ದಾಳೆ. ಸದಾಶಿವನ ತಲೆಗೆ ಬಲವಾಗಿ ಪೆಟ್ಟು ಬಿದ್ದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಗುರುವಾರದಂದು ಈ ಘಟನೆ ಬೆಳಕಿಗೆ ಬಂದಿದ್ದು, ಆರೋಪಿ ಶೋಭಾಳನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv