500 ರೂ. ಕೊಟ್ಟು ಲೈಂಗಿಕ ಕ್ರಿಯೆಗೆ ಇಬ್ಬರು ಮಹಿಳೆಯರಿಂದ ಆಹ್ವಾನ

Public TV
1 Min Read

ಬೆಂಗಳೂರು: ಪುರುಷನ ಮೇಲೆ ಇಬ್ಬರು ಮಹಿಳೆಯರು ಅಸಭ್ಯವಾಗಿ ವರ್ತನೆ ಮಾಡಿರುವ ಘಟನೆ ಮೆಜೆಸ್ಟಿಕ್‍ನ ಕೆಎಸ್‍ಆರ್ ಟಿಸಿ ಟರ್ಮಿನಲ್ 2 ಬಳಿ ನಡೆದಿದೆ.

ಮಣಿಕಂಠ ಎಂಬಾತನಿಗೆ ಇಬ್ಬರು ಮಹಿಳೆಯರು ಕಿರುಕುಳ ನೀಡಿದ್ದಾರೆ. ಶನಿವಾರ ತಡರಾತ್ರಿ 12-15ಕ್ಕೆ ಈ ಘಟನೆ ನಡೆದಿದ್ದು, ಮಣಿಕಂಠ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದರು. ಈ ವೇಳೆ ಇಬ್ಬರು ಮಹಿಳೆಯರು ಬಂದು ಮಣಿಕಂಠನಿಗೆ 500 ರೂ. ಕೊಟ್ಟು ಲೈಂಗಿಕ ಕ್ರಿಯೆಗೆ ಆಹ್ವಾನಿಸಿದ್ದಾರೆ.

ಅಷ್ಟೇ ಅಲ್ಲದೇ ಬಲವಂತವಾಗಿ ಆಟೋದಲ್ಲಿ ಕೂರಿಸಿಕೊಂಡಿದ್ದಾರೆ. ನಂತರ ಮಣಿಕಂಠನ ಪರ್ಸ್, ಹಣವನ್ನ ದೋಚಲು ಯತ್ನಿಸಿದ್ದಾರೆ. ಈ ವೇಳೆ ಮಣಿಕಂಠ ವಿರೋಧಿಸಿದ್ದಕ್ಕೆ ಕಿರುಚಾಡಿ ಅತ್ಯಾಚಾರ ಮಾಡುತ್ತಿದ್ದಾನೆ ಎಂದು ಹೇಳುತ್ತೇವೆ ಅಂತ ಇಬ್ಬರು ಮಹಿಳೆಯರು ಬೆದರಿಸಿದ್ದಾರೆ. ಬಳಿಕ ಮಣಿಕಂಠನ ಬಳಿಯಿದ್ದ ಹಣವನ್ನ ದರೋಡೆ ಮಾಡಿ ಇಬ್ಬರು ಮಹಿಳೆಯರು ಹೋಗಿದ್ದಾರೆ.

ಇತ್ತ ಮಣಿಕಂಠ ಮಹಿಳೆಯರ ವಿರುದ್ಧ ಬೆದರಿಕೆ ಪ್ರಕರಣ ದಾಖಲಿಸಿದ್ದಾರೆ. ಈ ಕುರಿತು ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *