ಅಪಾರ್ಟ್‍ಮೆಂಟ್ ಮೇಲಿಂದ ಬಿದ್ದು ಮಹಿಳೆ ಸಾವು

Public TV
1 Min Read

ಬೆಂಗಳೂರು: ಅಪಾರ್ಟ್‍ಮೆಂಟ್ ಮೇಲಿಂದ ಬಿದ್ದು ಮಹಿಳೆಯೊಬ್ಬಳು ಸಾವನ್ನಪ್ಪಿದ ಘಟನೆ ಯಲಹಂಕ (Yelahanka) ಬಳಿಯ ನಾಗೇನಹಳ್ಳಿಯಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಲಕ್ನೋ ಮೂಲದ ಅಮೃತಾ ಶರ್ಮ (27) ಎಂದು ಗುರುತಿಸಲಾಗಿದೆ. ಅಪಾರ್ಟ್‍ಮೆಂಟ್‍ನ 10ನೇ ಮಹಡಿಯಿಂದ ಮಹಿಳೆ ಕೆಳಗೆ ಬಿದ್ದಿದ್ದಾಳೆ ಎಂದು ತಿಳಿದು ಬಂದಿದೆ. ಗುರುವಾರ ರಾತ್ರಿ ಸುಮಾರು 10 ಗಂಟೆಗೆ ಈ ಘಟನೆ ನಡೆದಿದೆ. ಕೂಡಲೇ ಮಹಿಳೆಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾಳೆ. ಇದನ್ನೂ ಓದಿ: ಲಾರಿ ಬೈಕ್ ನಡುವೆ ಭೀಕರ ಅಪಘಾತ – ಎರಡು ತುಂಡಾಯ್ತು ದೇಹ

ಮಹಿಳೆಯ ತಂದೆ ಇತ್ತೀಚೆಗೆ ಮೃತಪಟ್ಟಿದ್ದರು. ಇದರಿಂದ ಆಕೆ ಮಾನಸಿಕವಾಗಿ ನೊಂದಿದ್ದಳು ಎಂದು ತಿಳಿದು ಬಂದಿದೆ. ರಾತ್ರಿ ಎಲ್ಲರೂ ಮನೆಯಲ್ಲಿ ಇರುವಾಗ ಮಹಿಳೆ ಮಾತ್ರ ಅಡುಗೆ ಕೋಣೆಯ ಬಾಲ್ಕನಿಯಲ್ಲಿದ್ದಳು. ಈ ವೇಳೆ ಘಟನೆ ನಡೆದಿದೆ. ಮೃತ ಮಹಿಳೆಗೆ 2 ವಷದ ಹಿಂದಷ್ಟೆ ಮದುವೆಯಾಗಿತ್ತು. ಆಕೆಯ ತಾಯಿ ಲಕ್ನೋದಲ್ಲಿ ವಾಸವಾಗಿದ್ದಾರೆ ಎಂದು ತಿಳಿದು ಬಂದಿದೆ.

ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಅಂಬೇಡ್ಕರ್ ಅಸ್ಪತ್ರೆಗೆ (Ambedkar Hospital) ರವಾನೆ ಮಾಡಲಾಗಿದೆ. ಈ ಸಂಬಂಧ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕಾಯಿ ಆರಿಸುವಾಗ ತೆಂಗಿನಕಾಯಿ ಗೊನೆ ಬಿದ್ದು ಬಾಲಕ ಸಾವು

Share This Article