ಮನೆಯಲ್ಲಿದ್ದ ಮಹಿಳೆಯರ ಮೇಲೆ ಅಪರಿಚಿತ ವ್ಯಕ್ತಿಯಿಂದ ಹಲ್ಲೆ; ಹಿಡಿದು ಪೊಲೀಸರಿಗೊಪ್ಪಿಸಿದ ಜನ

Public TV
1 Min Read

ಮಡಿಕೇರಿ: ಹಾಡಹಗಲೇ ಮಹಿಳೆಯರ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ದೋಚಲು ಯತ್ನಿಸಿದ ವ್ಯಕ್ತಿಯೊಬ್ಬನನ್ನ ಗ್ರಾಮಸ್ಥರು ಸೆರೆಹಿಡಿದು ಪೊಲೀಸರಿಗೆ (Kodagu Police) ಒಪ್ಪಿಸಿದ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಹಾಲುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಂಡಂಗೇರಿ ಪರಂಬು ಎಂಬಲ್ಲಿ ನಡೆದಿದೆ.

ಕೊಂಡಂಗೇರಿ ನಿವಾಸಿ ಸಾರಮ್ಮ (65) ಹಾಗೂ ಅವರ ಪುತ್ರಿ ಸಹನಾ ಮನೆಯಲ್ಲಿದ್ದಾಗ ಏಕಾಏಕಿ ನು‌ಗ್ಗಿದ ಅಪರಿಚಿತ ವ್ಯಕ್ತಿ ಸಾರಮ್ಮನ ಮೇಲೆ ಹಲ್ಲೆ ನಡೆಸಿ ಘಾಸಿಗೊಳಿಸಿದ್ದಾನೆ. ತಡೆಯಲು ಬಂದ ಪುತ್ರಿ ಸಹನಾ ಮೇಲೂ ಹಲ್ಲೆ ನಡೆಸಿ ಚಿನ್ನಾಭರಣ ಕಳವು ಮಾಡಲು ಯತ್ನಿಸಿದ್ದಾನೆ. ಈ ವೇಳೆ ಮಹಿಳೆ ಚೀರಿಕೊಂಡಾಗ ಸ್ಥಳೀಯರು ನೆರವಿಗೆ ಧಾವಿಸಿದ್ದಾರೆ. ಇದನ್ನೂ ಓದಿ: 1.25 ಲಕ್ಷ ಹಣ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಮಹಿಳಾ ಪಿಎಸ್‌ಐ

ಗ್ರಾಮದ ಮೂಲೆ ಮೂಲೆ ಜನರಿಗೆ ಸುದ್ದಿ ಮುಟ್ಟಿಸಿ ಖದೀಮನನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸಿದ್ದಾಪುರ ಪೊಲೀಸರು ವ್ಯಕ್ತಿಯನ್ನು ವಿಚಾರಿಸಿದಾಗ ಈತ ಪಾಲಿಬೆಟ್ಟದ ನಿವಾಸಿ ಮುನಾವರ್ (35) ಎಂದು ತಿಳಿದುಬಂದಿದೆ. ಈತನನ್ನು ವಿಚಾರಣೆಗೊಳಪಡಿಸಿ ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ದಾವಣಗೆರೆ ಶೃಂಗ ಸಮ್ಮೇಳನ – 15 ವರ್ಷಗಳ ಬಳಿಕ ಒಂದಾದ ಪಂಚಪೀಠಾಧೀಶರು

Share This Article