ಫುಟ್‍ಪಾತ್ ಮೇಲೆ ಬೈಕ್ ಓಡಿಸುತ್ತಿದ್ದ ಸವಾರರ ಚಳಿ ಬಿಡಿಸಿದ ಬ್ರೇವ್ ಲೇಡಿ

Public TV
1 Min Read

ಬೆಂಗಳೂರು: ನಗರದಲ್ಲಿ ಫುಟ್‍ಪಾತ್ ಮೇಲೆಯೇ ಬೈಕ್ ಓಡಿಸುತ್ತಿದ್ದ ಸವಾರರಿಬ್ಬರ ಚಳಿ ಬಿಡಿಸಿರುವ ಮಹಿಳೆಯೊಬ್ಬರ ವಿಡಿಯೋವೊಂದು ಸಾಮಾಜಿಕ ಜಾಲತಾಣ ವಾಟ್ಸಪ್, ಫೇಸ್‍ಬುಕ್ ನಲ್ಲಿ ವೈರಲ್ ಆಗಿದೆ.

ಮಂಜು ಥಾಮಸ್ ಎಂಬವರೇ ಸವಾರರಿಗೆ ಚಳಿ ಬಿಡಿಸಿದ ಮಹಿಳೆ. ಶನಿವಾರ ರಾತ್ರಿ ಬೆಂಗಳೂರಿನ ಕಾರ್ಪೋರೇಷನ್ ಬಳಿ ಈ ಘಟನೆ ನಡೆದಿದೆ. ಕೆಎ 51 ಇಎಫ್ 7695 ನಂಬರಿನ ಹೋಂಡಾ ಆಕ್ಟಿವಾದಲ್ಲಿ ಇಬ್ಬರು ಯುವಕರು ಫುಟ್‍ಪಾತ್ ಮೇಲೆಯೇ ತಮ್ಮ ಬೈಕ್ ಚಲಾಯಿಸುತ್ತಿದ್ದರು. ಈ ವೇಳೆ ಯುವಕರನ್ನು ತಡೆದ ಮಂಜು ನಿಮಗೆ ಫುಟ್‍ಪಾತ್ ಯಾವುದು? ರಸ್ತೆ ಯಾವುದು? ಅಂತ ಗೊತ್ತಿಲ್ವಾ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ವೇಳೆ ಬೈಕ್ ಸವಾರರು ನಾವು ನಿಮ್ಮ ಲೆಕ್ಚರ್ ಕೇಳೋಕೆ ಇಲ್ಲಿ ಬಂದಿಲ್ಲ. ಎಲ್ಲರೂ ಫುಟ್‍ಪಾತ್ ಮೇಲೆಯೇ ಹೋಗ್ತಾ ಇದ್ದಾರೆ ಅಂತಾ ಎದುರುತ್ತರ ನೀಡಿದ್ದಾರೆ. ಒಬ್ಬ ವಿದ್ಯಾವಂತ ನಾಗರಿಕರಾಗಿ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುವುದು ತಪ್ಪಾಗುತ್ತದೆ ಅಂತಾ ತಿಳಿಸಿದ ಕೂಡಲೇ ಬೈಕ್ ಸವಾರರು ಫುಟ್‍ಪಾತ್ ಬಿಟ್ಟು ರಸ್ತೆ ಮೇಲೆ ಹೋಗಿದ್ದಾರೆ.

ಬೈಕ್ ಸವಾರರು ಫುಟ್‍ಪಾತ್ ನಿಂದ ತೆರಳುತ್ತಿದ್ದಂತೆ ಮಂಜು ಅವರು, ಕದಡಿದ ಟೈಲ್ಸ್ ಗಳನ್ನು ಸರಿಯಾಗಿ ಜೋಡಣೆ ಮಾಡಿ ತೆರಳಿದ್ದಾರೆ. ಮಂಜು ಅವರು ಸವಾರರನ್ನು ತರಾಟೆಗೆ ತೆಗೆದುಕೊಳ್ಳುವ ವಿಡಿಯೋವನ್ನು ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಹೀಗಾಗಿ ಇದೀಗ ಆ ವಿಡಿಯೋ ವೈರಲ್ ಆಗಿದೆ.

https://youtu.be/X8xPVw2A5wc

Share This Article
Leave a Comment

Leave a Reply

Your email address will not be published. Required fields are marked *