ಐಆರ್‌ಎಸ್ ಅಧಿಕಾರಿಯ ಫ್ಲಾಟ್‍ನಲ್ಲಿ ಮಹಿಳೆಯ ಶವ ಪತ್ತೆ – ಕೊಲೆ ಆರೋಪ

By
1 Min Read

ಲಕ್ನೋ: ಭಾರತೀಯ ಕಂದಾಯ ಇಲಾಖೆಯ (IRS) ಅಧಿಕಾರಿ ಸೌರಭ್ ಮೀನಾ ಅವರ ನೋಯ್ಡಾದ (Noida) ಅಪಾರ್ಟ್‍ಮೆಂಟ್‍ನಲ್ಲಿ ಯುವತಿಯೊಬ್ಬಳ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅಧಿಕಾರಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮೃತ ಮಹಿಳೆಯನ್ನು ಭಾರತ್ ಹೆವಿ ಇಲೆಕ್ಟ್ರಿಕಲ್ಸ್ ಲಿಮಿಟೆಡ್‍ನ (ಬಿಹೆಚ್‍ಇಎಲ್) ಮಾನವ ಸಂಪನ್ಮೂಲ ಅಧಿಕಾರಿ ಶಿಲ್ಪಾ ಗೌತಮ್ ಎಂದು ಗುರುತಿಸಲಾಗಿದೆ. ಶಿಲ್ಪಾ ಹಾಗೂ ಸೌರಭ್ ಕಳೆದ ಮೂರು ವರ್ಷಗಳಿಂದ ಸಂಬಂಧ ಹೊಂದಿದ್ದರು. ಅವರು ಡೇಟಿಂಗ್ ಅಪ್ಲಿಕೇಶನ್ (Dating app) ಮೂಲಕ ಪರಿಚಯವಾಗಿದ್ದು, ಸೌರಭ್ ಮದುವೆಯಾಗುವುದಾಗಿ ಭರವಸೆ ನೀಡಿದ್ದರು ಎಂದು ಯುವತಿಯ ಕುಟುಂಬಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: ಹನುಮಾನ್ ಚಾಲೀಸಾ ಹಾಕಲು ಅನುಮತಿ ಇಲ್ಲ, ರಸ್ತೆಯಲ್ಲಿ ನಮಾಜ್‌ ಮಾಡಲು ಅನುಮತಿ ಬೇಕಿಲ್ಲ: ಬಿಜೆಪಿ ಕಿಡಿ

ಶಿಲ್ಪಾಳ ತಂದೆ ಗೌತಮ್, ಸೌರಭ್ ವಿರುದ್ಧ ವಂಚನೆ ಮತ್ತು ದೈಹಿಕ ಕಿರುಕುಳದ ಆರೋಪ ಮಾಡಿದ್ದು, ಆಗಾಗ ಆಕೆಯ ಮೇಲೆ ಹಲ್ಲೆ ನಡೆಸುತ್ತಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಸಾವಿಗೆ ನಿಖರ ಕಾರಣ ತಿಳಿಯಲು ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ. ಅಲ್ಲದೇ ಇಬ್ಬರ ಮೊಬೈಲ್ ಫೋನ್‍ಗಳು ಹಾಗೂ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಇದನ್ನೂ ಓದಿ: ಯಾದಗಿರಿಯಲ್ಲಿ ತಡರಾತ್ರಿವರೆಗೂ ಭಾರೀ ಮಳೆ- ಮಹಿಳೆ ಸಾವು, ಜನಜೀವನ ಅಸ್ತವ್ಯಸ್ತ

Share This Article