ಚೆನ್ನೈ ರಸ್ತೆಯಲ್ಲಿ ಪೀಸ್ ಪೀಸ್ ಮಾಡಿದ ಮಹಿಳೆಯ ಶವ ತುಂಬಿದ ಸೂಟ್‍ಕೇಸ್ ಪತ್ತೆ – ಕೊಲೆಯಾಗಿದ್ದು ಸೆಕ್ಸ್ ವರ್ಕರ್!

Public TV
1 Min Read

-ಸೆಕ್ಸ್‌ಗೆ ಕರೆಸಿ ಕೊಂಡವನೇ ಹಣ ಕೇಳಿದ್ದಕ್ಕೆ ಕೊಲೆ ಮಾಡಿ ಕೊಚ್ಚಿ ಕೊಂದ!

ಚೆನ್ನೈ: ರಸ್ತೆ ಬದಿಯಲ್ಲಿ ಪತ್ತೆಯಾದ ಸೂಟ್‍ಕೇಸ್‍ನಲ್ಲಿ ಮಹಿಳೆಯ ತುಂಡರಿಸಿದ ದೇಹದ ಭಾಗಗಳು ಪತ್ತೆಯಾಗಿರುವ ಘಟನೆ ಚೆನ್ನೈ (Chennai) ತೊರೈಪಾಕ್ಕಂನಲ್ಲಿ ಬೆಳಕಿಗೆ ಬಂದಿದೆ.

ಚೆನ್ನೈನ ಐಟಿ ಕಾರಿಡಾರ್ ಬಳಿ ಬೆಳಗ್ಗೆ ವಾಕಿಂಗ್ ಹೋಗುವವರಿಗೆ ಮೃತ ದೇಹ ಕೊಳೆತ ವಾಸನೆ ಬಂದಿದೆ. ಈ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದ ವೇಳೆ ರಸ್ತೆ ಬದಿಯಲ್ಲಿ ಸೂಟ್‍ಕೇಸ್ ಒಂದು ಪತ್ತೆಯಾಗಿತ್ತು. ಇದನ್ನು ಗಮನಿಸಿದ ಸ್ಥಳೀಯರು ಸೂಟ್‍ಕೇಸ್ ಓಪನ್ ಮಾಡಿದ್ದಾರೆ ಈ ವೇಳೆ ಅದರಲ್ಲಿ ಮಹಿಳೆಯ ತುಂಡರಿಸಿದ್ದ ದೇಹ ಪತ್ತೆಯಾಗಿದೆ ಗಾಬರಿಗೊಂಡ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಸ್ಥಳಕ್ಕೆ ಧಾವಿಸಿದ ಪೊಲೀಸರು (Police), ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ. ಮಹಿಳೆಯ ಮೊಬೈಲ್‍ನ ಕರೆಯ ದಾಖಲೆ ಹಾಗೂ ಸೂಟ್‍ಕೇಸ್ ಪತ್ತೆಯಾದ ಪ್ರದೇಶದ ಸುತ್ತ ಮುತ್ತಲಿನ ಸಿಸಿ ಟಿವಿ ಪರಿಶೀಲನೆ ನಡೆಸಿದ ವೇಳೆ ಅದೇ ಪ್ರದೇಶದ ನಿವಾಸಿಯಾಗಿರುವ ಮಣಿಕಂದನ್‍ನನ್ನು (22) ಪೊಲೀಸರು ಬಂಧಿಸಿದ್ದಾರೆ.

ಮಹಿಳೆ ಚೆನ್ನೈನ ಮಾಧವರಂ ಬಳಿಯ ಪೊನ್ನಿಯಮ್ಮನ್ ಮೇಡು ನಿವಾಸಿಯಾಗಿದ್ದು, ಆಕೆ ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದರು. ಆಕೆಯ ಸಹೋದರ ಮೊಬೈಲ್ ಅಪ್ಲಿಕೇಶನ್ ಬಳಸಿ ನಗರದ ತೊರೈಪಕ್ಕಂನಲ್ಲಿ ಆಕೆಯ ಫೋನ್ ಇರುವ ಸ್ಥಳವನ್ನು ಪತ್ತೆಹಚ್ಚಿದ್ದರು. ಅಲ್ಲದೇ ತೋರೈಪಕ್ಕಂಗೆ ಧಾವಿಸಿ ಬುಧವಾರ (ಸೆಪ್ಟೆಂಬರ್ 18, 2024) ರಾತ್ರಿ ಪೊಲೀಸ್ ಗಸ್ತು ತಂಡದ ಸಹಾಯವನ್ನು ಕೋರಿದ್ದರು ಎಂದು ಪೊಲಿಸರು ತಿಳಿಸಿದ್ದಾರೆ.

ಬೇರೆ ವ್ಯಕ್ತಿಯ ಮೂಲಕ ಮಹಿಳೆಯ ಸ್ನೇಹ ಬೆಳೆಸಿದ್ದ ಮಣಿಕಂದನ್, ಆಕೆಯನ್ನು ಸೆಕ್ಸ್‌ಗಾಗಿ ಮನೆಗೆ ಕರೆಸಿಕೊಂಡಿದ್ದ. ನಂತರ ಹಣದ ವಿಚಾರಕ್ಕೆ ಅವರಿಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಬಳಿಕ ಆಕೆಯನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

Share This Article