10 ವರ್ಷದ ಮಗನ ಮೇಲೆ 5 ನಿಮಿಷ ಕುಳಿತು ಹತ್ಯೆ ಮಾಡಿದ 154 ಕೆಜಿ ತೂಕದ ತಾಯಿ

Public TV
1 Min Read

ವಾಷಿಂಗ್ಟನ್‌: 154 ಕೆಜಿಗಿಂತಲೂ ಹೆಚ್ಚು ತೂಕವಿರುವ ಮಹಿಳೆಯೊಬ್ಬರು ತನ್ನ 10 ವರ್ಷದ ಮಗನ ಮೇಲೆ ಕುಳಿತು ಕೊಂದಿರುವ ಘಟನೆ ಅಮೆರಿಕದ ಇಂಡಿಯಾನಾ ರಾಜ್ಯದಲ್ಲಿ ನಡೆದಿದೆ.

ಡಕೋಟಾ ಲೆವಿ ಸ್ಟೀವನ್ಸ್‌ (10) ಕೊಲೆಯಾದ ಬಾಲಕ. ಜೆನ್ನಿಫರ್‌ ಲೀ ವಿಲ್ಸನ್‌ (48) ಹತ್ಯೆ ಮಾಡಿದ ಮಹಿಳೆ. ಪುತ್ರನನ್ನು ಕೊಂದಿದ್ದಕ್ಕೆ ಆಕೆಗೆ 6 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಅಕ್ಟೋಬರ್‌ನಲ್ಲಿ 5 ನಿಮಿಷಗಳ ಕಾಲ ಮಗುವಿನ ಮೇಲೆ ಕುಳಿತು ಕೊಲೆ ಮಾಡಿದ್ದಾಳೆ.

ಸ್ಟೀವನ್ಸ್ 4 ಅಡಿ 10 ಇಂಚು ಎತ್ತರ ಮತ್ತು 40 ಕೆಜಿ ತೂಕವಿದ್ದ. ಆತನ ತಾಯಿ ವಿಲ್ಸನ್ 4 ಅಡಿ 11 ಇಂಚು ಎತ್ತರ ಮತ್ತು 154 ಕೆಜಿ ತೂಕವಿದ್ದಳು. ಆಕೆ ಮಗನ ಮೇಲೆ ಕುಳಿತಿದ್ದರಿಂದ ಆತನಿಗೆ ಉಸಿರುಗಟ್ಟಿದೆ. ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.

ಬಾಲಕನ ಮುಖದ ಮೇಲೆ ಗಾಯದ ಗುರುತಿರುವುದು ಕಂಡುಬಂದಿದೆ. ಪ್ರಕರಣ ಸಂಬಂಧ ಆರೋಪಿ ತಾಯಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ, ಆಕೆ ತಪ್ಪೊಪ್ಪಿಕೊಂಡಿದ್ದಾಳೆ.

Share This Article