ಬಿಕಿನಿ ತೊಟ್ಟು ಬಸ್‌ ಹತ್ತಿದ ಮಹಿಳೆ – ಮುಜುಗರದಿಂದ ಸೀಟು ಬಿಟ್ಟು ಹೋದ ಪ್ರಯಾಣಿಕ; ವೀಡಿಯೋ ಫುಲ್‌ ವೈರಲ್‌

Public TV
2 Min Read

ನವದೆಹಲಿ: ಮೆಟ್ರೋ ರೈಲಿನಲ್ಲಿ ಬಿಕಿನಿ (Bikini), ಅಶ್ಲೀಲ ಕೃತ್ಯಗಳಿಂದ ಕುಖ್ಯಾತವಾಗಿದ್ದ ದೆಹಲಿಯಲ್ಲಿ ಇದೀಗ ಮಹಿಳೆಯೊಬ್ಬರು (Delhi Women) ಬಿಕಿನಿ ತೊಟ್ಟು ಬಸ್‌ ಹತ್ತಿದ್ದು ಆಕೆಯನ್ನು ವೇಶವನ್ನು ನೋಡಲಾಗದೆ ಸಹ ಪ್ರಯಾಣಿಕರು ಸೀಟು ಬಿಟ್ಟು ಹೋದ ಘಟನೆ ನಡೆದಿದೆ.

ಇತ್ತೀಚಿನ ದಿನಗಳಲ್ಲಿ ಸೋಶಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಸೃಷ್ಟಿಸೋದು ಕೆಲವರಿಗೆ ಅಭ್ಯಾಸ ಆಗಿಬಿಟ್ಟಿದೆ. ಅದರಲ್ಲೂ ದೆಹಲಿಯಂತಹ ಮಹಾನಗರದಲ್ಲಿ ಇದು ಹೆಚ್ಚಾಗಿಯೇ ನಡೆಯುತ್ತಿದೆ. ಈ ಹಿಂದೆ ದೆಹಲಿ ಮೆಟ್ರೋದಲ್ಲಿ ಕಂಡುಬರುತ್ತಿದ್ದ ಅಶ್ಲೀಲ ಕೃತ್ಯಗಳು ಈಗ ಸಾರ್ವಜನಿಕ ಬಸ್‌ನಲ್ಲೂ ಕಂಡುಬಂದಿದೆ. ಇದನ್ನೂ ಓದಿ: Delhi Metro Girl: ನಾನೂ ಸಂಪ್ರದಾಯಸ್ಥ ಹುಡ್ಗಿ, ಏನ್ ಬೇಕಾದ್ರೂ ಧರಿಸ್ತೀನಿ ಎಂದ ಬಿಕಿನಿ ಗರ್ಲ್

ಹೌದು. ಜನದಟ್ಟಣೆಯ ಬಸ್‌ನಲ್ಲಿ ಬಿಕಿನಿ ತೊಟ್ಟಿರುವ ಮಹಿಳೆಯ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಮೂಡಿಸಿದೆ. 12 ಸೆಕೆಂಡುಗಳ ಈ ವೀಡಿಯೋದಲ್ಲಿ ಮಹಿಳೆ ಬಿಕಿನಿ ತೊಟ್ಟು ಬಸ್‌ ಬಾಗಿಲಿನ ಬಳಿ ನಿಂತಿದ್ದಾಳೆ, ಸಾರ್ವಜನಿಕರು ಆಕೆಯನ್ನ ಕಣ್ಣು ಮಿಟುಕಿಸದೇ ನೋಡುತ್ತಿದ್ದಾರೆ. ಇನ್ನೂ ಕೆಲವರು ಆಕೆ ಬಸ್‌ ಹತ್ತುತ್ತಿದ್ದಂತೆ ಮುಜುಗರದಿಂದ ತಾವಿದ್ದ ಸೀಟನ್ನು ಬಿಟ್ಟು ಮತ್ತೊಂದು ಸೀಟಿನಲ್ಲಿ ಕುಳಿತಿದ್ದಾರೆ. ಆದ್ರೆ ಇದ್ಯಾವುದನ್ನೂ ತಲೆಗೆ ಹಚ್ಚಿಕೊಳ್ಳದ ಮಹಿಳೆ ತನ್ನ ಪಾಡಿಗೆ ಬಸ್‌ ಸೀಟಿನಲ್ಲಿ ಕುಳಿತುಕೊಂಡು ಪ್ರಯಾಣಿಸಿದ್ದಾಳೆ.

ಬಿಕಿನಿ ತೊಟ್ಟು ಬಸ್‌ ಹತ್ತಿದ ಮಹಿಳೆ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಇದು ಆಕೆಯ ಸ್ವಾತಂತ್ರ್ಯ ಎಂದು ಸಮರ್ಥಿಸಿಕೊಂಡಿದ್ದರೆ, ಮತ್ತೆ ಕೆಲವರು ಇದು ಸ್ವೇಚ್ಚಾಚಾರ, ಅಶ್ಲೀಲಕ್ಕೆ ಪ್ರಶೋದನೆ ನೀಡುವಂತಹ ಕೆಲಸ ಇಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಕೆಲವರು ಬೇಸಿಗೆ ಅಲ್ವಾ ಶೆಕೆ ಇರಬೇಕು ಅಂತ ಕಾಲೆಳೆದಿದ್ದಾರೆ. ಇದನ್ನೂ ಓದಿ: ಬಾಯಿಂದ ಬಾಯಿಗೆ ಎಂಜಲು ನೀರು ಉಗಿದುಕೊಂಡು ಚೆಲ್ಲಾಟ – ಪ್ರೇಮಿಗಳಿಗೆ ಶುರುವಾಯ್ತು ಪೀಕಲಾಟ

ದೆಹಲಿ ಬಸಸ್‌ ಎನ್ನುವ ಎಕ್ಸ್‌ ಖಾತೆಯಲ್ಲಿ ಈ ವೀಡಿಯೋ ಹಂಚಿಕೊಂಡಿದ್ದು, ಇದನ್ನು ದೆಹಲಿ ಸಾರಿಗೆ ಅಧಿಕಾರಿಗಳಿಗೂ ಟ್ಯಾಗ್‌ ಮಾಡಿದ್ದಾರೆ. ಸದ್ಯ ಈ ಬಗ್ಗೆ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಹಿಂದೆ ದೆಹಲಿ ಮೆಟ್ರೋದಲ್ಲಿಯೂ ಇಂತಹದ್ದೇ ಘಟನೆ ನಡೆದಿತ್ತು. ಇದನ್ನೂ ಓದಿ: ‌ಫ್ಲೈಟ್‌ನಲ್ಲಿ ಹಾಟ್‌ ಡ್ರೆಸ್‌ ತೊಟ್ಟು ಡಾನ್ಸ್; ಪಡ್ಡೆ ಹುಡುಗರ ಹೃದಯ ಕದ್ದ ಯುವತಿಗೆ ನೆಟ್ಟಿಗರಿಂದ ಕ್ಲಾಸ್‌

Share This Article