ಪತಿಯ ಮರ್ಮಾಂಗವನ್ನು ಸಿಗರೇಟ್‌ನಿಂದ ಸುಟ್ಟು ಚಿತ್ರಹಿಂಸೆ ಕೊಟ್ಟ ಪತ್ನಿ!

Public TV
1 Min Read

ಲಕ್ನೋ: ಅಚ್ಚರಿಯ ಪ್ರಕರಣವೊಂದರಂತೆ ಪತ್ನಿಯೊಬ್ಬಳು ತನ್ನ ಪತಿಗೆ ಚಿತ್ರಹಿಂಸೆ ಕೊಟ್ಟ ಆಘಾತಕಾರಿ ಘಟನೆಯೊಂದು ಉತ್ತರಪ್ರದೇಶದ (Uttar Pradesh) ಸಿಯೋಹರಾ ಜಿಲ್ಲೆಯಲ್ಲಿ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

ಪತ್ನಿ ಮೆಹರ್‌ (30) ಹಾಗೂ ಪತಿಯನ್ನು ಮನ್ನನ್ ಜೈದಿ ಎಂದು ಗುರುತಿಸಲಾಗಿದೆ. ಕೌಟುಂಬಿಕ ಕಲಹದಿಂದಾಗಿ ಪತ್ನಿ ತನ್ನ ಪತಿಯ ಮೇಲೆ ಈ ರೀತಿಯ ಕೃತ್ಯ ಎಸಗಿದ್ದಾಳೆ ಎನ್ನಲಾಗಿದೆ. ಸದ್ಯ ಪತಿಯ ಮೇಲೆ ಕ್ರೌರ್ಯ ಮೆರೆದ ಪತ್ನಿಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್‌ ಆಗುತ್ತಿದೆ.

ಮೆಹರ್‌ ಹಾಗೂ ಮುನ್ನನ್‌ ಜೈದಿ ಪ್ರತ್ಯೇಕವಾಗಿ ವಾಸವಾಗಿದ್ದರು. ಇವರಿಬ್ಬರ ದಾಂಪತ್ಯದ ನಡುವೆ ಬಿರುಕು ಮೂಡಿದ ಬಳಿಕ ಮೆಹರ್‌ ಮದ್ಯಪಾನ ಹಾಗೂ ಸಿಗರೇಟ್‌ ಸೇದಲು ಆರಂಭಿಸಿದ್ದಾಳೆ. ಅಲ್ಲದೇ ಮೆಹರ್ ತನ್ನನ್ನು ದೈಹಿಕವಾಗಿ ನಿಂದಿಸಿದ್ದಾಳೆ. ತನ್ನ ಮೇಲೆ ಸುಳ್ಳು ಆರೋಪ ಹೊರಿಸುವುದಾಗಿ ಬೆದರಿಕೆ ಹಾಕಿದ್ದಾಳೆ. ತನ್ನ ಖಾಸಗಿ ಅಂಗಗಳನ್ನು ಸಿಗರೇಟಿನಿಂದ ಸುಡುವ ಮುನ್ನ ಪತ್ನಿ ತನ್ನ ಕೈಕಾಲುಗಳನ್ನು ಕಟ್ಟಿ ಹಾಕಿದ್ದಾಳೆ ಎಂದು ಸಂತ್ರಸ್ತ ಆರೋಪಿಸಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಯಿಂದ ಭ್ರೂಣಹತ್ಯೆ ದಂಧೆ: ದಂಪತಿ ಅರೆಸ್ಟ್

ತನ್ನ ಸುರಕ್ಷತೆಯ ಬಗ್ಗೆ ಕಳವಳ ವ್ಯ ಕ್ತಪಡಿಸಿದ ಮನ್ನನ್ ತಮ್ಮ ಮನೆಯಲ್ಲಿ ಸಿಸಿಕ್ಯಾಮೆರಾ ಅಳವಡಿಸಿದ್ದಾರೆ ಈ ಕ್ಯಾಮೆರಾದಲ್ಲಿ ಮೆಹರ್‌ ಕ್ರೂರ ಕೃತ್ಯ ಸೆರೆಯಾಗಿದ್ದು, ಮುನ್ನನ್‌ ಪೊಲೀಸರಿಗೆ ಈ ದೃಶ್ಯವನ್ನು ನೀಡಿದ್ದಾರೆ. ಪತಿ ದೂರು ಮತ್ತು ಸಿಸಿಟಿವಿ ದೃಶ್ಯಾ ವಳಿಗಳನ್ನು ಸಲ್ಲಿಸಿದ ನಂತರ ಸಿಯೋಹರಾ ಜಿಲ್ಲಾ ಪೊಲೀಸರು ಕ್ರಮ ಕೈಗೊಂಡಿದ್ದು, ಭಾನುವಾರ ಮಹಿಳೆಯನ್ನು ಬಂಧಿಸಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿ ಮಹಿಳೆಯ ವಿರುದ್ಧ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಕೇಸ್‌ ದಾಖಲಿಸಿಕೊಂಡಿದ್ದಾರೆ ಎಂದು ಎಸ್‌ಪಿ ಪೂರ್ವ ಧರಂಪಾಲ್ ಸಿಂಗ್ ತಿಳಿಸಿದ್ದಾರೆ.

Share This Article