ಸ್ನೇಹಿತನ ಜೊತೆ ಪತ್ನಿಯನ್ನು ನೋಡಿದ ಪತಿ- 7 ಗಂಟೆ ಮರಕ್ಕೆ ಕಟ್ಟಿ ಥಳಿಸಿದ

Public TV
1 Min Read

ಜೈಪುರ: ಸ್ನೇಹಿತನೊಂದಿಗೆ ಪತ್ನಿಯನ್ನು ನೋಡಿದ್ದ ಪತಿ ಹಾಗೂ ಇತರ ಸಂಬಂಧಿಕರು ಸೇರಿ ಆಕೆಯನ್ನು ಮರಕ್ಕೆ ಕಟ್ಟಿ ಥಳಿಸಿದ ಘಟನೆ ರಾಜಸ್ಥಾನದ ಬನ್ಸ್ವಾರಾ ಜಿಲ್ಲೆಯಲ್ಲಿ ನಡೆದಿದೆ.

ಬನ್ಸ್ವಾರಾ ಜಿಲ್ಲೆಯಲ್ಲಿ ಮಹಿಳೆಯೊಬ್ಬಳು ತನ್ನ ಪತಿಯ ಸ್ನೇಹಿತನೊಂದಿಗೆ ಇದ್ದಳು. ಈ ಸಂದರ್ಭದಲ್ಲಿ ಆಕೆಯ ಪತಿ ನೋಡಿದ್ದಾನೆ. ಇದರಿಂದಾಗಿ ಕೋಪಗೊಂಡ ಆತ ಹಾಗೂ ಆತನ ಸಂಬಂಧಿಕರು ಆಕೆಯನ್ನು 7 ಗಂಟೆಗಳ ಕಾಲ ಒಂದು ಮರಕ್ಕೆ ಕಟ್ಟಿ ಕೋಲಿನಿಂದ ಹೊಡೆದಿದ್ದಾರೆ. ಅಷ್ಟೇ ಅಲ್ಲದೇ ಆಕೆಯ ಜೊತೆಗಿದ್ದವನಿಗೂ ಇದೇ ರೀತಿ ಥಳಿಸಿದ್ದಾರೆ.

ಈ ವೀಡಿಯೋವನ್ನು ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಅದರಲ್ಲಿ ಆಕೆ ಕಿರುಚಾಡುತ್ತಿರುವುದನ್ನು ಗಮನಿಸಬಹುದಾಗಿದೆ. ಈ ಸಂಬಂಧ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಘಟನೆ ಕುರಿತು ಆಕೆಯ ಪತಿ, ಸೋದರ ಮಾವ ಇಬ್ಬರು ಅಪ್ರಾಪ್ತರು ಸೇರಿದಂತೆ 6 ಜನರನ್ನು ಬಂಧಿಸಲಾಗಿದೆ.

ಘಟನೆ ಸಂಬಂಧ ಬಿಜೆಪಿ ನಾಯಕರು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಈ ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದು, ರಾಜಸ್ಥಾನದ ಗೃಹ ಇಲಾಖೆಯು ಗೂಂಡಾಗಳನ್ನು ಮುಕ್ತಗೊಳಿಸಿದೆ, ಅವರು ಹಸಿದ ತೋಳಗಳಂತೆ ಕಾಡುಗಳಲ್ಲಿ ಅಲೆದಾಡುತ್ತಿದ್ದಾರೆ. ಈ ವೀಡಿಯೋವನ್ನು ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *