ಯೋಗಿ ಆದಿತ್ಯನಾಥ್ ವಿರುದ್ಧ ಮಾತನಾಡಿದ್ದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಮಹಿಳೆಗೆ ಬೆದರಿಕೆ

Public TV
1 Min Read

ಬೆಂಗಳೂರು: ಮಗಳನ್ನು ಅತ್ಯಾಚಾರ (Rape) ಮಾಡುವುದಾಗಿ ಕಿಡಿಗೇಡಿಗಳು ಮಹಿಳೆಗೆ ಸಾಮಾಜಿಕ ಜಾಲತಾಣದಲ್ಲಿ (Social Media) ಬೆದರಿಕೆ (Threat) ಹಾಕಿದ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.

ಉತ್ತರ ಪ್ರದೇಶ (Uttar Pradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ವಿರುದ್ಧ ಮಾತನಾಡಿದ್ದಕ್ಕೆ ಬೆದರಿಕೆ ಹಾಕಿರುವುದಾಗಿ ಆರೋಪ ಹೊರಿಸಿದ್ದು, ಆರೋಪಿಗಳು ಮಂಜುಳಾ ಎಂಬ ಮಹಿಳೆ ಹಾಗೂ ಆಕೆಯ ಮಗನ ಫೊಟೋವನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಮಹಿಳೆಯ ಫೋನ್ ನಂಬರ್ ಅನ್ನು ದುಷ್ಕರ್ಮಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ನಿರಂತರವಾಗಿ ಕರೆಮಾಡಿ ಅಶ್ಲೀಲವಾಗಿ ಅವಹೇಳನ ಮಾಡುತ್ತಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಇದನ್ನೂ ಓದಿ: ದುರಂತಕ್ಕೂ ಮುಂಚೆ ಮಾಡಿದ್ದು ಎನ್ನಲಾದ ವೀಡಿಯೋ ವೈರಲ್‌ – ರೈಲು ಬೋಗಿಗಳಲ್ಲಿ ಕಿಕ್ಕಿರಿದು ತುಂಬಿದ್ರು ಪ್ರಯಾಣಿಕರು

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ರಾಜ್ಯಕ್ಕೆ ಬಂದು ಚುನಾವಣಾ ಪ್ರಚಾರ ನಡೆಸಿದ್ದರು. ಈ ಸಂದರ್ಭದಲ್ಲಿ ಮಂಜುಳಾ ಯೋಗಿ ಪ್ರಚಾರದ ವಿರುದ್ಧ ಫೇಸ್‌ಬುಕ್ ಲೈವ್ (Facebook Live) ಮಾಡಿದ್ದರು. ಈಗಾಗಲೇ ಈಕೆಯ ಹೆಸರಿನಲ್ಲಿ 200ಕ್ಕೂ ಅಧಿಕ ಫೇಕ್ ಅಕೌಂಟ್‌ಗಳು ಕ್ರಿಯೇಟ್ ಮಾಡಿದ್ದು, ಫೇಸ್‌ಬುಕ್ ಲೈವ್ ಬಳಿಕ ಬೆದರಿಕೆ ಕರೆಗಳು ಬಂದಿವೆ. ಅಲ್ಲದೇ ತನ್ನ ಕುಟುಂಬಕ್ಕೆ ಜೀವ ಬೆದರಿಕೆ ಹಾಕಲಾಗುತ್ತಿದೆ ಎಂದು ಮಹಿಳೆ ಸೋಲದೇವನಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ದುರಂತ: ನೆರವಿಗೆ ಧಾವಿಸಿದ ಸಿಎಂ ಸಿದ್ದರಾಮಯ್ಯಗೆ ವಾಲಿಬಾಲ್ ಕ್ರೀಡಾಪಟುಗಳ ಧನ್ಯವಾದ

Share This Article