ಹೈದರಾಬಾದ್: ಮಾದಕವಸ್ತು (Drugs) ಜಾಲಕ್ಕೆ ಸಂಬಂಧಿಸಿದಂತೆ 21 ವರ್ಷದ ಮಹಿಳಾ ಸಾಫ್ಟ್‌ವೇರ್ ಎಂಜಿನಿಯರ್, ಆಕೆಯ ಗೆಳೆಯ ಮತ್ತು ಇಬ್ಬರನ್ನು ಹೈದರಾಬಾದ್ ಪೊಲೀಸರು (Hyderabad Police) ಬಂಧಿಸಿದ್ದಾರೆ.
ಸುಶ್ಮಿತಾ ದೇವಿ ಅಲಿಯಾಸ್ ಲಿಲ್ಲಿ(21), ಉಮ್ಮಿಡಿ ಇಮ್ಯಾನುಯೆಲ್(25), ಜಿ ಸಾಯಿ ಕುಮಾರ್(28)ಮತ್ತು ತಾರಕ ಲಕ್ಷ್ಮಿಕಾಂತ್ ಅಯ್ಯಪ್ಪ(24) ಬಂಧಿತ ಆರೋಪಿಗಳು. ದಾಳಿಯ ಸಮಯದಲ್ಲಿ ಗಾಂಜಾ, ಎಲ್‌ಎಸ್‌ಡಿ ಮತ್ತು ಎಕ್ಸ್‌ಟಸಿ ಮಾತ್ರೆಗಳು ಸೇರಿದಂತೆ ಭಾರೀ ಪ್ರಮಾಣದ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈವೆಂಟ್ ಮ್ಯಾನೇಜರ್ ಆಗಿರುವ ಇಮ್ಯಾನುಯೆಲ್ ಈ ಡ್ರಗ್ಸ್ ಜಾಲದ ಪ್ರಮುಖ ಆರೋಪಿಯಾಗಿದ್ದು ಈತನನ್ನು ಸುಶ್ಮಿತಾ ದೇವಿ ಪ್ರೀತಿಸುತ್ತಿದ್ದಳು. ವಶಪಡಿಸಿಕೊಂಡ ಮಾದಕವಸ್ತುಗಳಲ್ಲಿ 22 ಗ್ರಾಂ ಹೈಡ್ರೋಪೋನಿಕ್ ಗಾಂಜಾ, 5 ಗ್ರಾಂ ಎಂಡಿಎಂಎ, ಆರು ಎಲ್‌ಎಸ್‌ಡಿ ಬ್ಲಾಟ್‌ಗಳು ಮತ್ತು ಎಕ್ಸ್‌ಟಸಿ ಮಾತ್ರೆಗಳು ಸೇರಿವೆ. ಪೊಲೀಸರು ಅವರಿಂದ 50 ಸಾವಿರ ರೂ. ನಗದು ಮತ್ತು ನಾಲ್ಕು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಬೆಂಗಳೂರು: ಇನ್‌ಸ್ಟಾದಲ್ಲಿ ಪರಿಚಯ, ನಡುರಸ್ತೆಯಲ್ಲೇ ಯುವತಿಗೆ ಲೈಂಗಿಕ ಕಿರುಕುಳ; ಆರೋಪಿ ಬಂಧನ
ಟಾರ್ ಬ್ರೌಸರ್‌ನಂತಹ ಬಳಸಿಕೊಂಡು ಇಮ್ಯಾನುಯೆಲ್ ಡಾರ್ಕ್ ವೆಬ್ ಸೇರಿದಂತೆ ಪೂರೈಕೆದಾರರಿಂದ ಮಾದಕ ವಸ್ತುಗಳನ್ನು ಪಡೆಯುತ್ತಿದ್ದ. ಬೈನಾನ್ಸ್ ಮತ್ತು ಟ್ರಸ್ಟ್ ವಾಲೆಟ್‌ನಂತಹ ಕ್ರಿಪ್ಟೋಕರೆನ್ಸಿ ವ್ಯಾಲೆಟ್‌ಗಳ ಮೂಲಕ ಡ್ರಗ್ಸ್ ಮಾರಾಟ ಮಾಡುತ್ತಿದ್ದ.
ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಟೆಕ್ಕಿಯಾಗಿದ್ದ ಲಿಲ್ಲಿ ಡ್ರಗ್ಸ್ ವ್ಯಾಪಾರ ಮತ್ತು ಹಣಕಾಸು ನಿರ್ವಹಣೆ ಮಾಡುತ್ತಿದ್ದಳು. ಇಮ್ಯಾನುಯೆಲ್ ಅನುಪಸ್ಥಿತಿಯಲ್ಲಿ ಲಿಲ್ಲಿ ಆನ್‌ಲೈನ್ ವಹಿವಾಟುಗಳು ಮತ್ತು ಮಾದಕ ದ್ರವ್ಯ ವಿತರಣೆಯ ಮೇಲ್ವಿಚಾರಣೆ ಮಾಡುತ್ತಿದ್ದಳು.
ಡೆಲಿವರಿ ರೈಡರ್ ಆಗಿರುವ ಸಾಯಿ ಕುಮಾರ್ ಮಾದಕ ದ್ರವ್ಯಗಳ ವಿತರಣೆ ಮಾಡುತ್ತಿದ್ದ. ನಾಲ್ಕನೇ ಆರೋಪಿ ಅಯ್ಯಪ್ಪ ಮಾದಕ ದ್ರವ್ಯ ಬಳಕೆದಾರ ಎಂದು ಆರೋಪಿಸಲಾಗಿದೆ.

