ಠಾಣೆಗೆ ನುಗ್ಗಿ ಎಎಸ್‌ಐಗೆ ಬಾಟಲಿನಿಂದ ಇರಿದ ಮಹಿಳೆ!

Public TV
1 Min Read

ಬೆಂಗಳೂರು: ಮಹಿಳೆಯೊಬ್ಬರು ಎಎಸ್‌ಐಗೆ (ASI) ಬಾಟಲ್‌ನಿಂದ ಇರಿದ ಘಟನೆ ಗಂಗಮ್ಮನ ಗುಡಿ ಪೊಲೀಸ್‌ ಠಾಣೆಯಲ್ಲಿ (Gangammana Gudi Police Station) ನಡೆದಿದೆ.

ಗಂಗಮ್ಮನ ಗುಡಿ ಎಎಸ್‌ಐ ನಾಗರಾಜ್‌ಗೆ ಅಶ್ವಿನಿ ಎಂಬಾಕೆ ಬಾಟಲ್‌ನಿಂದ ಇರಿದಿದ್ದಾಳೆ. ಶನಿವಾರ ಸಂಜೆ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಘಟನೆಯಲ್ಲಿ ಎಎಸ್‌ಐ ಅವರ ಬಲಭಾಗದ ಕೈಗೆ ಗಾಯವಾಗಿದೆ. ಇದನ್ನೂ ಓದಿ: ಹುಟ್ಟುಹಬ್ಬಕ್ಕೆ ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿದ ಕೇಕ್‌ ತಿಂದು 10ರ ಬಾಲಕಿ ಸಾವು

 

ಜಾಗದ ವಿಚಾರಕ್ಕೆ ನ್ಯಾಯ ಸಿಗದ್ದಕ್ಕೆ ಠಾಣೆಗೆ ಒಳಗಡೆ ಹೋಗಿ ಮಹಿಳೆ ಬಾಟಲ್‌ನಿಂದ ಚುಚ್ಚಿದ್ದಾಳೆ. ಮಹಿಳೆ ಮಾನಸಿಕವಾಗಿ ಅಸ್ವಸ್ಥಳಾಗಿರುವ ಹಿನ್ನೆಲೆಯಲ್ಲಿ ಆಕೆಯನ್ನು ನಿಮ್ಹಾನ್ಸ್‌ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಗಂಗಮ್ಮನ ಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದನ್ನೂ ಓದಿ: ಡಿಕೆ ಬ್ರದರ್ಸ್ ಕೋಟೆಗೆ ಅಮಿತ್ ಶಾ ಎಂಟ್ರಿ – ಚನ್ನಪಟ್ಟಣದಲ್ಲಿ ರೋಡ್ ಶೋ

 

Share This Article