ಕೋವಿಡ್ ಎಫೆಕ್ಟ್ – ಸತತ 2 ವರ್ಷದ ನಂತರ ವಾಸನೆ ಗ್ರಹಿಸಿದ ಮಹಿಳೆ!

Public TV
1 Min Read

ವಾಷಿಂಗ್ಟನ್: ಅಮೆರಿಕ (America) ಮೂಲದ ಜೆನ್ನಿಫರ್ ಎಂಬ ಮಹಿಳೆ (Woman) ಎರಡು ವರ್ಷ ದೀರ್ಘ ಕಾಲದ ಕೋವಿಡ್‍ನಿಂದ (Covid) ವಾಸನೆ ಗ್ರಹಿಸುವ ಶಕ್ತಿಯನ್ನು ಕಳೆದುಕೊಂಡು, ಇದೀಗ ಮರಳಿ ಪಡೆದಿದ್ದಾಳೆ.

ಕ್ಲೆವೆಲ್ಯಾಂಡ್ ಕ್ಲಿನಿಕ್‌ನ (Cleveland Clinic) ಇನ್ಸ್ಟಾಗ್ರಾಂನಲ್ಲಿ (Instagram) ಮಹಿಳೆ ಪ್ರತಿಕ್ರಿಯಿಸಿರುವ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಮಹಿಳೆ ಒಂದು ಕಾಫಿ (Coffee) ಕಪ್ ಎತ್ತಿಕೊಂಡು ವಾಸನೆ ಗ್ರಹಿಸಿದ್ದಾಳೆ. ನಂತರ ನನಗೆ ವಾಸನೆ ಗ್ರಹಿಸಲು ಸಾಧ್ಯವಾಗುತ್ತಿದೆ ಎಂದು ಗದ್ಗದಿತಳಾಗಿ ನುಡಿದಿದ್ದಾಳೆ. ಇದನ್ನೂ ಓದಿ: ಕೋವಿಡ್ ಕೇಸ್ ತೀವ್ರ ಹೆಚ್ಚಳ – ಕೇರಳ, ಹರಿಯಾಣ, ಪುದುಚೇರಿಯಲ್ಲಿ ಮತ್ತೆ ಮಾಸ್ಕ್ ಕಡ್ಡಾಯ

 

View this post on Instagram

 

A post shared by Cleveland Clinic (@clevelandclinic)

ಎರಡು ವರ್ಷಗಳ ಕಾಲ ಆಹಾರ ನನಗೆ ರುಚಿಸುತ್ತಿರಲಿಲ್ಲ. ವಾಸನೆಯ ಅರಿವಾಗುತ್ತಿರಲಿಲ್ಲ ಎಂದು ಮಹಿಳೆ ಹೇಳಿಕೊಂಡಿದ್ದಾಳೆ. ಸಾಮಾನ್ಯ ಚಿಕಿತ್ಸೆಗಾಗಿ ಬಳಸುವ ಸ್ಟೇಲೆಟ್ ಗ್ಯಾಂಗ್ಲಿಯಾನ್ ಬ್ಲಾಕ್ (Stellate ganglion block) ಇಂಜೆಕ್ಷನ್ ನೀಡಿದ ಮೇಲೆ ಮಹಿಳೆ ಮೊದಲ ಬಾರಿಗೆ ವಾಸನೆ ಹಾಗೂ ರುಚಿಯನ್ನು ಗ್ರಹಿಸಿದ್ದಾಳೆ.

ಕೋವಿಡ್ ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿ ಹಾಗೂ ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನ ರೀತಿಯಲ್ಲಿ ತನ್ನ ಪರಿಣಾಮ ಬೀರಿದೆ. ಕೆಲವರಿಗೆ ಕೋವಿಡ್ ಒಂದು ವಾರ ಬಾಧಿಸಿ ಗುಣಮುಖವಾದರೆ, ಇನ್ನೂ ಕೆಲವರಿಗೆ ವರ್ಷಗಳ ಕಾಲ ಬಾಧಿಸಿದೆ. ವಯಸ್ಕರು ಹಾಗೂ ಚಿಕ್ಕವರು ಎನ್ನದೇ ಎಲ್ಲಾ ವಯಸ್ಸಿನವರಿಗೂ ಕಾಡಿದೆ. ಸಾವಿನ ಪ್ರಮಾಣದಲ್ಲೂ ದೇಶದಿಂದ ದೇಶಕ್ಕೆ ವಿಭಿನ್ನ ರೀತಿಯ ಪ್ರಭಾವವನ್ನು ಕೋವಿಡ್ ಬೀರಿದೆ. ಇದನ್ನೂ ಓದಿ: ಗಡಿ ನುಸುಳಲು ಉಗ್ರರ ಸ್ಕೆಚ್ – ಸೈನಿಕರ ಗುಂಡಿಗೆ ಓರ್ವ ಬಲಿ

Share This Article