ಕೌಟುಂಬಿಕ ಸಮಸ್ಯೆ ಬಗೆಹರಿಸಿಕೊಡೋದಾಗಿ ಮೌಲ್ವಿಯಿಂದ ಮಹಿಳೆಗೆ ಲೈಂಗಿಕ ಕಿರುಕುಳ – ಕೇಸ್‌ ದಾಖಲು

Public TV
1 Min Read

– ಯಂತ್ರಶಾಸ್ತ್ರ ನೆಪದಲ್ಲಿ ಮಹಿಳೆಯ ಖಾಸಗಿ ಅಂಗ ಮುಟ್ಟಿ ಕಿರುಕುಳ

ನೆಲಮಂಗಲ: ಕೌಟುಂಬಿಕ ಸಮಸ್ಯೆ ಪರಿಹರಿಸಿಕೊಳ್ಳಲು ಬಂದ ಮಹಿಳೆಯೊಬ್ಬರ ಮೇಲೆ ಮೌಲ್ವಿಯೊಬ್ಬ ಲೈಂಗಿಕ ದೌರ್ಜನ್ಯ ನಡೆಸಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ (Nelamangala) ತಾಲೂಕಿನ ಡಾಬಸ್‌ಪೇಟೆ ಪೊಲೀಸ್ ಠಾಣಾ (Dabaspete Police Station) ವ್ಯಾಪ್ತಿಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ತುಮಕೂರು ಮೂಲದ ಮಹಿಳೆ (Tumkur Women) ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದು ಸೋಂಪುರ ಹೋಬಳಿಯ ಕೂತಘಟ್ಟ ಗ್ರಾಮದ ಭದ್ರೆ ಅಲಂ ಲೈಂಗಿಕ ದೌರ್ಜನ್ಯ ಮಾಡಿದ ಆರೋಪಿ. ಇದನ್ನೂ ಓದಿ: ಹಾಸನ ಹೃದಯಾಘಾತ ವರದಿ ಬಹಿರಂಗ: 8 ಲಕ್ಷ ಚಾಲಕರಿಗೆ ಹೆಲ್ತ್‌ ಕ್ಯಾಂಪ್‌ ಆಯೋಜಿಸಲು ಮುಂದಾದ ಸರ್ಕಾರ

ಜೂನ್‌ 30ರಂದು ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಂದು ಸಂಜೆ 7 ಗಂಟೆ ಸುಮಾರಿಗೆ ತುಮಕೂರು ಮೂಲದ ಮಹಿಳೆ ತನ್ನ ಪತಿಯ ಜೊತೆ ಕೂತಗಟ್ಟದಲ್ಲಿರುವ ಭದ್ರೆ ಅಲಂ ಯಂತ್ರಶಾಸ್ತ್ರ ಮಾಡುತ್ತಾರೆಂದು ತಿಳಿದು ಅವರ ಬಳಿ ಬಂದು ಸಂಸಾರದ ತೊಂದರೆ ಹೇಳಿ ಕಟಲೇ ಮಾಡಿಕೊಡುವಂತೆ ಕೇಳಿದ್ದಾರೆ. ಆಗ ಭದ್ರೆ ಅಲಂ ಮಹಿಳೆಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ.

ಮಹಿಳೆಯ ಖಾಸಗಿ ಅಂಗ ಮುಟ್ಟಿ ದೈಹಿಕವಾಗಿ ಹಿಂಸೆ ಮಾಡಿದ್ದಾನೆ. ಈ ಹಿನ್ನೆಲೆಯಲ್ಲಿ ಜುಲೈ 9ರಂದು ಮಹಿಳೆ ಡಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಹಿಳೆ ನೀಡಿದ ದೂರಿನ ಅನ್ವಯ ಡಾಬಸ್‌ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ. ಇದನ್ನೂ ಓದಿ: ಮೈಸೂರು| ಆಟೋದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ, ವ್ಯಕ್ತಿ ಮೇಲೆ ಡೆಡ್ಲಿ ಅಟ್ಯಾಕ್‌

Share This Article